2008ರ 26/11 ಮುಂಬೈ ಉಗ್ರ ದಾಳಿಗೆ ಸಂಬಂಧಿಸಿದಂತೆ ಅಮೆರಿಕಾದಲ್ಲಿ ಶಿಕ್ಷೆಗೊಳಗಾದ ಪಾಕಿಸ್ತಾನ ಮೂಲದ ಕೆನಡಾದ ಪ್ರಜೆ ತಹವೂರ್ ರಾಣಾನನ್ನು (63) ಭಾರತಕ್ಕೆ ಹಸ್ತಾಂತರಿಸಲು ಅಮೆರಿಕದ ಸುಪ್ರೀಂಕೋರ್ಟ್ ಅನುಮೋದನೆ ನೀಡಿದೆ. ಮುಂಬೈನ ತಾಜ್ ಹೋಟೆಲ್ ಸೇರಿದಂತೆ ಹಲವಾರು ಪ್ರಮುಖ ಸ್ಥಳಗಳಲ್ಲಿ ನಡೆದ ದಾಳಿಯ ಪ್ರಮುಖ ಆರೋಪಿಯಾಗಿದ್ದ ರಾಣಾ, ಇತ್ತಿಚೆಗೆ ಭಾರತಕ್ಕೆ ಹಸ್ತಾಂತರಗೊಳ್ಳಲು ಕಾನೂನು ಹೋರಾಟದಲ್ಲಿ ಸೋತಿದ್ದಾರೆ.
ಮುಂಬೈ ದಾಳಿಯ ಪ್ರಮುಖ ಸಂಚುಕೋರನಾದ ಪಾಕಿಸ್ತಾನಿ-ಅಮೆರಿಕನ್ ಭಯೋತ್ಪಾದಕ ಡೇವಿಡ್ ಕೋಲ್ಮನ್ ಹೆಡ್ಲಿಯೊಂದಿಗೆ ತಹವೂರ್ ರಾಣಾ ಸಂಪರ್ಕ ಹೊಂದಿದ್ದ. ಲಷ್ಕರ್-ಎ-ತೈಬಾ (LeT) ಭಯೋತ್ಪಾದಕ ಗುಂಪಿಗೆ ಬೆಂಬಲ ನೀಡಿದ್ದು, ದಾಳಿಯ ಯೋಜನೆಗೆ ಪಾಕಿಸ್ತಾನದಲ್ಲಿ ಇತರರಿಗೆ ಸಹಾಯ ಮಾಡಿರುವ ಆರೋಪ ರಾಣಾ ಮೇಲೆ ನೆಲೆಯಲ್ಲಿ ಇದ್ದು, ಈ ಹಿನ್ನೆಲೆಯಲ್ಲಿ ಭಾರತ, ರಾಣಾನನ್ನು ಹಸ್ತಾಂತರಿಸಲು ಅಮೆರಿಕಾದಲ್ಲಿ ಮನವಿ ಮಾಡಿತ್ತು.
ಅಮೆರಿಕಾದ ಕಾನೂನು ಹೋರಾಟಗಳಲ್ಲಿ ಸೋಲು
ತಹವೂರ್ ರಾಣಾ ತನ್ನ ಹಸ್ತಾಂತರ ತಡೆಯಲು ಹಲವಾರು ಕಾನೂನು ಹೋರಾಟಗಳನ್ನು ನಡೆಸಿದರು. ಕೆಳ ನ್ಯಾಯಾಲಯಗಳು ಮತ್ತು ಫೆಡರಲ್ ನ್ಯಾಯಾಲಯಗಳಲ್ಲಿ ಸೋತ ಬಳಿಕ, ಸ್ಯಾನ್ ಫ್ರಾನ್ಸಿಸ್ಕೋದ ಒಂಬತ್ತನೇ ಸರ್ಕ್ಯೂಟ್ ಅಪೀಲಟ್ ಕೋರ್ಟ್‌ಗೂ ಮೊರೆ ಹೋದರು. ಆದರೆ, ಅಲ್ಲಿ ಸಹ ಸೋಲಿನ ಮುಖ ನೋಡಿದರು. ಇದಾದ ಬಳಿಕ, 2023ರ ಡಿಸೆಂಬರ್ 16ರಂದು ಅಮೆರಿಕಾ ಸಾಲಿಸಿಟರ್ ಜನರಲ್ ಎಲಿಜಬೆತ್ ಬಿ. ಪ್ರೆಲೋಗರ್, ರಾಣಾ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಲು ಸುಪ್ರೀಂಕೋರ್ಟ್ ಅನ್ನು ಒತ್ತಾಯಿಸಿದರು.
ರಾಣಾ ಪರ ವಕೀಲರು ಈ ನಿರ್ಣಯವನ್ನು ಪ್ರಶ್ನಿಸಲು ಪ್ರಯತ್ನಿಸಿದರೂ, ಸುಪ್ರೀಂಕೋರ್ಟ್ ಅವರಿಗೆ ಬೆಂಬಲ ನೀಡದೆ ಪ್ರಕರಣವನ್ನು ತಿರಸ್ಕರಿಸಿತು.
ಭಾರತಕ್ಕೆ ಹಸ್ತಾಂತರದ ನಿರ್ಣಯ
ಪ್ರಸ್ತುತ ತಹವೂರ್ ರಾಣಾ ಲಾಸ್ ಏಂಜಲೀಸ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. 14 ವರ್ಷಗಳ ಕಠಿಣ ಶಿಕ್ಷೆಗೆ ಗುರಿಯಾಗಿರುವ ಅವರು, ಸುಪ್ರೀಂಕೋರ್ಟ್ ಇತ್ತೀಚಿನ ತೀರ್ಪಿನಿಂದ ಭಾರತಕ್ಕೆ ಹಸ್ತಾಂತರಗೊಳ್ಳಲಿದ್ದಾರೆ.ಇದನ್ನು ಓದಿ –“ನಮ್ಮನ್ನು ಅನವಶ್ಯಕವಾಗಿ ಟಾರ್ಗೆಟ್ ಮಾಡುತ್ತಿದ್ದಾರೆ” – ಪ್ರಮೋದಾ ದೇವಿ ಒಡೆಯರ್
ಇದು ಮುಂಬೈ ದಾಳಿಯ ಬಗ್ಗೆ ನ್ಯಾಯ ತರುತ್ತಿದ್ದು, ಭಾರತದ ರಾಜತಾಂತ್ರಿಕ ಗೆಲುವಾಗಿದೆ.
More Stories
ಇಂಡಿಯನ್ ಆಯಿಲ್ ಲಿಮಿಟೆಡ್ನಲ್ಲಿ 456 ಅಪ್ರೆಂಟಿಸ್ ಹುದ್ದೆಗಳ ಭರ್ತಿ – ಅರ್ಜಿ ಆಹ್ವಾನ
ಇಂದಿನಿಂದಲೇ ಬಿಯರ್ ದರ ಹೆಚ್ಚಳ – ಹೊಸ ಬೆಲೆ ವಿವರ !
ಮೈಸೂರಿನಲ್ಲಿ ಹೊಸ ಹೋಟೆಲ್ ಆರಂಭಿಸಲು ತಾಜ್ ಗ್ರೂಪ್ ಸಿದ್ಧ