ವರ್ಗಾವಣೆಯಾದರೂ ಜಾಗ ಖಾಲಿ ಮಾಡದ ಮುಕ್ತ ವಿವಿ ಹಣಕಾಸು ಅಧಿಕಾರಿ

Team Newsnap
1 Min Read

ಮೈಸೂರು: ಮೂರು ಬಾರಿ ವರ್ಗಾವಣೆಯಾದರೂ ರಾಜ್ಯ ಮುಕ್ತ ವಿವಿಯ ಹಣಕಾಸು ಅಧಿಕಾರಿ ಸರ್ಕಾರದ ಆದೇಶಕ್ಕೆ ಡೋಂಟ್ ಕೇರ್ ಎನ್ನುತ್ತಾ ಇದ್ದ ಜಾಗದಲ್ಲೇ ಬಿಡಾರ ಹೂಡಿದ್ದಾರೆ.

ರಾಜ್ಯ ಮುಕ್ತ ವಿವಿಯಲ್ಲಿ ಹಣಕಾಸು ಅಧಿಕಾರಿ ಖಾದರ್ ಪಾಷಾರನ್ನು ಆ ಸ್ಥಾನದಿಂದ ವರ್ಗಾವಣೆ ಮಾಡಿ ತಿಂಗಳು ಕಳೆದರೂ ಪಾಷಾ ಮುಕ್ತ ವಿವಿ ಬಿಟ್ಟು ಹೋಗುತ್ತಿಲ್ಲ.

ಮುಕ್ತ ವಿವಿಯಿಂದ ಮಂಡ್ಯದ ಮೈ ಶುಗರ್ ಕಂಪನಿ ಲಿಮಿಟೆಡ್ ಹಣಕಾಸು ಅಧಿಕಾರಿಯಾಗಿ ಜುಲೈ 26ರಂದು ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ.

order

ಸರ್ಕಾರದ ಈ ಆದೇಶಕ್ಕೆ ಖಾದರ್ ಪಾಷಾ ಡೋಂಟ್ ಕೇರ್ ಅಂದಿದ್ದಾರೆ. ಹೀಗಾಗಿ ಸರ್ಕಾರ ಸೆ.7ರಂದು ಖಾದರ್ ಪಾಷಾಗೆ ತಿಳುವಳಿಕೆ ಪತ್ರ ಕಳುಹಿಸಿದೆ.ಬಾಂಗ್ಲಾದೇಶ ಪಂದ್ಯದಲ್ಲಿ ಕೊಹ್ಲಿ ವಾಟರ್ ಬಾಯ್ – ಓಡಿ ಓಡಿ ಬಂದ್ಯಾ ದೃಶ್ಯ ಹಾಸ್ಯವಾಗಿತು

ವರ್ಗಾವಣೆ ಮಾಡಿರುವ ಸ್ಥಳದಲ್ಲಿ ಕರ್ತವ್ಯಕ್ಕೆ ಹಾಜರಾಗಿಲ್ಲ. ಈ ಕೂಡಲೇ ಸೂಚಿಸಿರುವ ಸ್ಥಳಕ್ಕೆ ಹಣಕಾಸು ಅಧಿಕಾರಿಯಾಗಿ ಹಾಜರಾಗಿ ಸಿಟಿಸಿ ಪತ್ರವನ್ನು ಕಚೇರಿಗೆ ಸಲ್ಲಿಸಿ ಎಂದು ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧಕ ಪ್ರಧಾನ ನಿರ್ದೇಶಕರು ಪತ್ರದಲ್ಲಿ ಸೂಚಿಸಿದ್ದಾರೆ.

Share This Article
Leave a comment