ಬಾಂಗ್ಲಾದೇಶ ಪಂದ್ಯದಲ್ಲಿ ಕೊಹ್ಲಿ ವಾಟರ್ ಬಾಯ್ – ಓಡಿ ಓಡಿ ಬಂದ ದೃಶ್ಯ

Team Newsnap
1 Min Read

ಭಾರತದ ನಾಯಕ ರೋಹಿತ್ ಶರ್ಮಾ ಬಾಂಗ್ಲಾದೇಶ ವಿರುದ್ಧ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡರು.

ಭಾರತ ತಂಡದಲ್ಲಿ 5 ಬದಲಾವಣೆ ಮಾಡಲಾಗಿದೆ. ವಿರಾಟ್ ಕೊಹ್ಲಿ , ಹಾರ್ದಿಕ್ ಪಾಂಡ್ಯ, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಬದಲಿಗೆ ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಮೊಹಮ್ಮದ್ ಶಮಿ, ಪ್ರಸಿದ್ಧ್ ಕೃಷ್ಣ ಮತ್ತು ಶಾರ್ದೂಲ್ ಠಾಕೂರ್ ಅವಕಾಶ ಪಡೆದಿದ್ದಾರೆ.

ಈ ಪಂದ್ಯದಲ್ಲಿ ತಿಲಕ್ ಚೊಚ್ಚಲ ಏಕದಿನ ಪಂದ್ಯವಾಡುತ್ತಿದ್ದಾರೆ. ಟೀಂ ಇಂಡಿಯಾ ಈಗಾಗಲೇ ಫೈನಲ್‌ಗೆ ಅರ್ಹತೆ ಪಡೆದಿದೆ. ಇನ್ನು, ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯದ ಕಾರಣ ವಿರಾಟ್ ಕೊಹ್ಲಿ ಆಟಗಾರರಿಗೆ ಡ್ರಿಂಕ್ಸ್‌ ಬ್ರೇಕ್‌ ವೇಳೆ ವಾಟರ್‌ ಬಾಯ್‌ ಆಗಿ ಕಾರ್ಯನಿರ್ವಹಿಸಿದ್ದಾರೆ. ಆದರೆ ಇದರ ನಡುವೆ ಅವರ ವಿಡಿಯೋವೊಂದು ಸಖತ್‌ ವೈರಲ್ ಆಗುತ್ತಿದೆ.

ಕೊಹ್ಲಿ ವಾಟರ್ ಬಾಯ್ ವಿಡಿಯೋ

ಇದನ್ನು ಓದಿ – ವಿಶ್ವ ಜನಪ್ರಿಯ ನಾಯಕರಲ್ಲಿ ಮೋದಿಗೆ ಅಗ್ರಸ್ಥಾನ

ಕೊಹ್ಲಿ ಆಡುವ 11ರಲ್ಲಿ ಇಲ್ಲದಿದ್ದರೂ ಸಹ ಎಂದಿಗೂ ಸಖತ್‌ ಟ್ರೆಂಡ್‌ ನಲ್ಲಿರುತ್ತಾರೆ. ಇಂದು ನಡೆಯುತ್ತಿರುವ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಏಷ್ಯಾ ಕಪ್ 2023ರ ಸೂಪರ್ 4 ಪಂದ್ಯಕ್ಕಾಗಿ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ನೀರಿನ ಬಾಟಲ್‌ ಹಿಡಿದು ಕಣಕ್ಕಿಳಿದಿದ್ದಾರೆ. ಅನಾಮುಲ್ ಹಕ್ ಔಟಾದ ನಂತರ, ಕೊಹ್ಲಿ ತನ್ನ ಸಹ ಆಟಗಾರರಿಗೆ ನೀರನ್ನು ನೀಡಿಲು ಮೈದಾನಕ್ಕೆ ಧಾವಿಸಿದರು.

Share This Article
Leave a comment