ಗಾಯಕಿ ಅನನ್ಯಾ ಭಟ್ ಈಗಾಗಲೇ ‘ಸೇನಾಪುರ’ ಎಂಬ ಚಿತ್ರದಲ್ಲಿ ಬಣ್ಣ
ಹಚ್ಚಲು ನಿರ್ಧರಿಸಿದ್ದಾರೆ. ಈಗ ಮತ್ತೊಂದು ಹೊಸ ಚಿತ್ರ ‘ ಗಿಬ್ಸಿ’ ಯಲ್ಲೂ ನಟನೆ ಮಾಡಲು ಒಪ್ಪಿಕೊಂಡಿದ್ದಾರೆ.
‘ಗಿಬ್ಸಿ’ ಚಿತ್ರಕ್ಕೆ ಶ್ರೀನೇಶ್ ಎಸ್. ನಾಯರ್ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಮೂರು ಪ್ರಮುಖ ಪಾತ್ರಗಳಿವೆ, ಒಂದು ಪಾತ್ರದಲ್ಲಿ ಅನನ್ಯಾ ಭಟ್ ಕಾಣಿಸಿಕೊಂಡರೆ, ಇನ್ನೆರಡು ಪಾತ್ರಗಳನ್ನು ಪ್ರಿಯಾಂಕಾ ತಿಮ್ಮೇಶ್ ಮತ್ತು ‘ಗೊಂಬೆಗಳ ಲವ್’ ಖ್ಯಾತಿಯ ಅರುಣ್ ಮಾಡುತ್ತಿದ್ದಾರೆ.
ಕಥೆಗೆ ಟ್ವಿಸ್ಟ್ ಕೊಡುವಂತಹ ಒಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿ ಕೊಳ್ಳುತ್ತಿರುವುದಾಗಿ ಹೇಳುವ ಅನನ್ಯಾ, ಬಹಳ ಹಸಿ ಬಿಸಿಯಾದ ಪಾತ್ರದಲ್ಲಿ ನಟಿಸುತ್ತಿದ್ದಾರಂತೆ.
ತಮ್ಮ ಪಾತ್ರದ ಬಗ್ಗೆ ಮಾತನಾಡುವ ಅನನ್ಯ ಭಟ್ , ‘ನಿರ್ದೇಶಕರು ನನ್ನ ಅಭಿನಯವನ್ನು ನೋಡಿಲ್ಲ. ಆದರೆ, ನನ್ನನ್ನು ನೋಡಿ ಈ ಪಾತ್ರಕ್ಕೆ ನಾನೇ ಸೂಕ್ತ ಎಂದು ಹೇಳಿದರು. ನನ್ನಿಂದ ಅಭಿನಯ ತೆಗೆಸುವ ವಿಶ್ವಾಸ ವ್ಯಕ್ತಪಡಿಸಿದ್ದರಿಂದ ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡೆ ಎನ್ನುತ್ತಾರೆ.
ಫೆಬ್ರವರಿ 1 ರಿಂದ ಚಿತ್ರದ ಚಿತ್ರೀಕರಣವು ಪ್ರಾರಂಭವಾಗಲಿದೆ ದಾಂಡೇಲಿ, ಬೆಂಗಳೂರು ಮುಂತಾದ ಕಡೆ ನಡೆಯಲಿದೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು