ಮಾದಪ್ಪನ ಕಾಣಿಕೆ ಕೇವಲ ಒಂದು ತಿಂಗಳಲ್ಲಿ 2 . 21ಕೋಟಿ ಸಂಗ್ರಹ

Team Newsnap
1 Min Read

ರಾಜ್ಯದ ಪ್ರಮುಖ ಪ್ರವಾಸಿತಾಣ ಹಾಗೂ ದೇಗುಲಗಳಲ್ಲಿ ಒಂದಾದ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ನಡೆದ ಹುಂಡಿ‌ ಎಣಿಕೆಯಲ್ಲಿ ಬರೋಬ್ಬರಿ 2.21 ಕೋಟಿ ರೂ. ಮೊತ್ತ ಸಂಗ್ರಹವಾಗಿದೆ..

ಭಕ್ತಾದಿಗಳು ಮಾದಪ್ಪನಿಗೆ ಹಣದ ರೂಪದಲ್ಲಿ ಭಕ್ತಿಯ ಹೊಳೆಯನ್ನೇ ಹರಿಸಿದ್ದಾರೆ. ಒಂದು ತಿಂಗಳಿಗೆ 2,21,59,810 ಕೋಟಿ ರು ಸಂಗ್ರಹವಾಗಿದೆ. 80 ಗ್ರಾಂ ಚಿನ್ನ ಹಾಗೂ 2 ಕೆಜಿ ಬೆಳ್ಳಿಯನ್ನು ಕಾಣಿಕೆ ರೂಪದಲ್ಲಿ ಭಕ್ತರು ದೇವಾಲಯಕ್ಕೆ ಸಮರ್ಪಿಸಿದ್ದಾರೆ.

ಕಳೆದ ಬಾರಿ 42 ದಿನಗಳ ಅವಧಿಯಲ್ಲಿ 1.92 ಕೋಟಿ‌ ರೂ. ಹಾಗೂ 170 ಗ್ರಾಂ ಚಿನ್ನ, 3.8 ಕೆಜಿ ಬೆಳ್ಳಿ ಸಂಗ್ರಹವಾಗಿತ್ತು.‌

ಕೊರೊನಾ ಸೋಂಕು ಕಡಿವಾಣಕ್ಕಾಗಿ ವಿಧಿಸಿದ್ದ ಲಾಕ್‌ಡೌನ್ ತೆರವಿನ ನಂತರದಲ್ಲಿ ಉತ್ಸವಗಳು, ವಿಶೇಷ ಸೇವೆಗಳಿಗೆ ಅವಕಾಶ ಮಾಡಿಕೊಟ್ಟ ಹಿನ್ನೆಲೆಯಲ್ಲಿ ಭಕ್ತರ ಸಂಖ್ಯೆಯಲ್ಲೂ ಗಣನೀಯ ಏರಿಕೆ ಕಂಡಿದ್ದು, ಇಷ್ಟು ಮೊತ್ತದ ಹಣ ಸಂಗ್ರಹವಾಗಿದೆ ಎಂಬ ಮಾಹಿತಿ ದೊರಕಿದೆ‌.

Share This Article
Leave a comment