December 22, 2024

Newsnap Kannada

The World at your finger tips!

WhatsApp Image 2023 08 19 at 12.27.47 PM

ಬೆಂಗಳೂರಿನ KSR ರೈಲು ನಿಲ್ದಾಣದಲ್ಲಿ ಉದ್ಯಾನ್ ಎಕ್ಸ್‌ಪ್ರೆಸ್ ಗೆ​ ಬೆಂಕಿ

Spread the love

ಬೆಂಗಳೂರು : KSR ರೈಲು ನಿಲ್ದಾಣದಲ್ಲಿ ಉದ್ಯಾನ್ ಎಕ್ಸ್‌ಪ್ರೆಸ್ ರೈಲಿನ ಇಂಜಿನ್​ನಲ್ಲಿ ದಿಢೀರ್ ಕಾಣಿಸಿಕೊಂಡಿದೆ

ತಾಂತ್ರಿಕ ಸಮಸ್ಯೆಯಿಂದ ಉದ್ಯಾನ್​ ರೈಲಿನ ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ರೈಲ್ವೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆದಿದ್ದಾರೆ. ಸ್ಥಳಕ್ಕೆ ಮೂರು ಅಗ್ನಿಶಾಮಕ ವಾಹನಗಳು ದೌಡಾಯಿಸಿ ಬೆಂಕಿಯನ್ನು ನಂದಿಸಿವೆ. ರೈಲಿನ ಎರಡು ಸ್ಲೀಪರ್ ಕೋಚ್​ಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಬೆಳಗ್ಗೆ 6 ಗಂಟೆಗೆ KSR ನಿಲ್ದಾಣಕ್ಕೆ ಉದ್ಯಾನ್​ ಟ್ರೈನ್​ ಮುಂಬೈನಿಂದ ಬಂದಿತು. ಮೊದಲು ಎಸಿ ಕೋಚ್​ನಲ್ಲಿ ಬೆಂಕಿ ಕಾಣಿಸಿಕೊಂಡಿತು. B1-B2 ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ಮಾಹಿತಿ ತಿಳಿದುಬಂದಿದೆ. ನಿನ್ನೆ ರಾತ್ರಿ 8.10ಕ್ಕೆ ಮುಂಬೈನ ಛತ್ರಪತಿ ಶಿವಾಜಿ ಟರ್ಮಿನಲ್​ನಿಂದ ಉದ್ಯಾನ್​ ರೈಲು ಹೊರಟಿತ್ತು. ಶಾರ್ಟ್ ಸರ್ಕ್ಯೂಟ್​ನಿಂದ ಬೆಂಕಿ ಹೊತ್ತಿಕೊಂಡಿರೋ ಶಂಕೆ ವ್ಯಕ್ತವಾಗಿದೆ. AC ಕೋಚ್​ನಿಂದಲೇ ಮೊದಲು ಬೆಂಕಿ ಹೊತ್ತಿಕೊಂಡಿರೋ ಮಾಹಿತಿ ಇದೆ. ಬೆಂಗಳೂರಿನಲ್ಲಿ ಭಾರತದ ಮೊದಲ 3ಡಿ ಮುದ್ರಿಸಿದ ಅಂಚೆ ಕಚೇರಿ ಲೋಕಾರ್ಪಣೆ

WhatsApp Image 2023 08 19 at 12.28.34 PM

ಅಗ್ನಿಶಾಮಕ ಸಿಬ್ಬಂದಿ ಘಟನಾ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ. ಈ ಘಟನೆಯಿಂದ ಮೆಜೆಸ್ಟಿಕ್ ಸುತ್ತಮುತ್ತ ದಟ್ಟ ಹೊಗೆ ಆವರಿಸಿಕೊಂಡಿತು. ಇದನ್ನು ನೋಡಿ ಜನರು ಒಂದು ಕ್ಷಣ ಗಾಬರಿಯಾದರು.

ರೈಲಿನ ಬೋಗಿಗಳಲ್ಲಿಯೂ ಬೆಂಕಿ ಕಾಣಿಸಿಕೊಂಡಿದೆ. ಈ ಉದ್ಯಾನ್ ಎಕ್ಸ್‌ಪ್ರೆಸ್‌ ರೈಲು‌ ಮುಂಬೈನಿಂದ ಆಗಮಿಸಿತ್ತು. ರೈಲು ನಿಲುಗಡೆಯಾದ ಬಳಿಕ ಈ ಅಗ್ನಿ ಅವಘಡ ಸಂಭವಿಸಿದೆ. ಚಾಲನೆಯಲ್ಲಿ ಇರುವಾಗ ಸಂಭವಿಸಿದ್ದರೆ ಅನಾಹುತ ನಡೆಯುವ ಸಾಧ್ಯತೆ ಇತ್ತು. ಪ್ರಯಾಣಿಕರು ಇಳಿದು ಹೋದ ಬಳಿಕ ಈ ಅವಘಡ ನಡೆದಿದೆ.

KSR ರೈಲು ನಿಲ್ದಾಣ | ಬೆಂಗಳೂರಿನ KSR ರೈಲು ನಿಲ್ದಾಣದಲ್ಲಿ ಉದ್ಯಾನ್ ಎಕ್ಸ್‌ಪ್ರೆಸ್ ಗೆ​ ಬೆಂಕಿ – Udyan Express catches fire at Bangalore KSR railway station #BENGALURU #KSR

Copyright © All rights reserved Newsnap | Newsever by AF themes.
error: Content is protected !!