ಕೊಳ್ಳೇಗಾಲ : ತಾಲೂಕಿನ ಮಧುವನಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಆಗಸ್ಟ್ 15 ರಂದು 77 ನೇ ಸ್ವಾತಂತ್ರ್ಯ ದಿನಾಚರಣೆಯ ವೇಳೆ ಡಾ ಅಂಬೇಡ್ಕರ್ ರವರ ಫೋಟೋ ಇಡದೆ ಧ್ವಜಾರೋಹಣ ಮಾಡಿರುವ ಆರೋಪದಡಿಯಲ್ಲಿ ಮಧುವನಹಳ್ಳಿ ಗ್ರಾಪಂ ಪಿಡಿಓ ಅಮಾನತ್ತು ಮಾಡಲಾಗಿದೆ.
ಗ್ರಾಮ ಪಂಚಾಯತ್ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಅಮಾನತುಗೊಳಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ
ಮಧುವನಹಳ್ಳಿ ಪಂಚಾಯತಿ ಮುಂಭಾಗ ದಲಿತ ಸಂಘಟನೆಗಳು ಮೌನ ಪ್ರತಿಭಟನೆ ನಡೆಸಿದರು .
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಅತೀ ಶೀಘ್ರದಲ್ಲೇ ಕ್ರಮ ತಗೆದುಕೊಳ್ಳುವoತೆ ಪತ್ರ ಬರೆಯುತ್ತೇನೆ ಎಂದು ಕೊಳ್ಳೇಗಾಲ ತಾಲೂಕು ಪ್ರಭಾರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ್ ಹೇಳಿದ್ದರು.
ಇದೀಗ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಪುವಿತಾ ರವರು ಮಧುವನಹಳ್ಳಿ ಗ್ರಾಮದಲ್ಲಿ ಸೇವೆ ಸಲ್ಲಿಸುತ್ತಿದ್ದ ಪಿಡಿಓ ಶ್ರೀಮತಿ ಪುಷ್ಪಲತಾ ರವರನ್ನು ಕರ್ನಾಟಕ ನಾಗರೀಕ ಸೇವಾ ನಿಯಮದ ಅಡಿಯಲ್ಲಿ ಕಾನೂನು ಸುವ್ಯವಸ್ಥೆ ವಿರುದ್ಧವಾಗಿ ವರ್ತಿಸಿದ ಕಾರಣ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯತೆ ತೋರಿದ ವಿಚಾರವಾಗಿ ಮುಂದಿನ ಆದೇಶದವರೆಗೆ ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ವರದಿ :- ನಾಗೇಂದ್ರ ಪ್ರಸಾದ್
- ಶೇ.6.50ರಷ್ಟು ‘ರೆಪೋ ದರ’ವನ್ನು ಯಥಾಸ್ಥಿತಿ ಮುಂದುವರೆಸಿದ ‘RBI’
- ಮಂಡ್ಯ ನಗರಕ್ಕೆ ನೀರು ಸರಬರಾಜು ದರ ಮಾಸಿಕ 225 ರು ನಿಗದಿ – ಜಿಲ್ಲಾ ಮಂತ್ರಿ ಸೂಚನೆ
- 4144 ಮೆಟ್ರಿಕ್ ಟನ್ ದಾಟಿದ ‘ಮೈಸೂರು ಸ್ಯಾಂಡಲ್ ಸೋಪ್’ ಮಾಸಿಕ ಉತ್ಪಾದನೆ
- ನಂದಿನಿ ಹಾಲಿನ ದರ ಏರಿಕೆ ?
- ಶೀಘ್ರದಲ್ಲೇ BMTCಗೆ 921 ಎಲೆಕ್ಟ್ರಿಕ್ ಬಸ್ : ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ
- ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ತಲಾ 25 ಕೋಟಿ ರು ಅನುದಾನ ಬಿಡುಗಡೆ – ಸಿಎಂ