ಬೆಂಗಳೂರು : ಭಾರತದ ಮೊದಲ 3ಡಿ ಅಂಚೆ ಕಚೇರಿಯನ್ನು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಬೆಂಗಳೂರಿನಲ್ಲಿ ಉದ್ಟಾಟನೆ ಮಾಡಿದ್ದಾರೆ.
ಮಾರ್ಚ್ 21 ರಂದು ಅಂಚೆ ಕಚೇರಿ ನಿರ್ಮಾಣ ಕೆಲಸ ಶುರುವಾಗಿತ್ತು, ಕೇವಲ 44 ದಿನಗಳಲ್ಲಿ ಈ ಅಂಚೆ ಕಚೇರಿಯನ್ನು ನಿರ್ಮಿಸಲಾಗಿದೆ. ವಿಶಿಷ್ಠವಾಗಿ ರಚನೆಯಾಗಿರುವ ಅಂಚೆಕಚೇರಿಯನ್ನು ವೀಕ್ಷಿಸಲಿದ್ದಾರೆ, ‘ಕೇಂಬ್ರಿಡ್ಜ್ ಲೇಔಟ್ ಅಂಚೆ ಕಚೇರಿ’ ಎಂದು ಹೆಸರಿಸಲಾಗಿದೆ.
ಕಟ್ಟಡದ ರಚನೆಯು ಮೇ 3 ರೊಳಗೆ ಪೂರ್ಣಗೊಂಡಿದ್ದು, ಒಳಚರಂಡಿ ಮತ್ತು ನೀರಿನ ಜಾಲವನ್ನು ನಿರ್ಮಿಸಲು ಎರಡು ತಿಂಗಳು ಸಮಯ ತೆಗೆದುಕೊಂಡಿತು. ಆನೆ ಸೆರೆಗೆ ಅರಣ್ಯ ಇಲಾಖೆ ಅಧಿಕಾರಿಗಳಿಂದ ಕಾರ್ಯಾಚರಣೆ ಆರಂಭ
- L&T ಕಟ್ಟಡ ನಿರ್ಮಾಣ ಮಾಡಿದೆ.
- 1,100 ಚದರ ಅಡಿ ವಿಸ್ತೀರ್ಣ
- 3ಡಿ ಕಾಂಕ್ರೀಟ್ ಮುದ್ರಣಕ್ಕಾಗಿ ತೆರಿಗೆ ಸೇರಿ ಸುಮಾರು 26 ಲಕ್ಷ ರೂಪಾಯಿ ವೆಚ್ಚ
- ಪವರ್, ಡ್ರೈನೇಜ್ ಸಂಪರ್ಕ ಮತ್ತು ನೀರಿನ ಸಂಪರ್ಕದಂತಹ ಇತರ ವೆಚ್ಚಗಳನ್ನು ಅಂಚೆ ಇಲಾಖೆಯ ಸಿವಿಲ್ ವಿಂಗ್ ಸುಮಾರು 40 ಲಕ್ಷ ರೂಪಾಯಿ ವೆಚ್ಚ.
ದೇಶದಲ್ಲಿ ಹಲವು ಪ್ರಥಮಗಳಿಗೆ ಸಾಕ್ಷಿಯಾಗಿರುವ ಬೆಂಗಳೂರು, ಈಗ 3-ಡಿ ಕಟ್ಟಡ ಅಂಚೆ ಕಚೇರಿ ಹೊಂದಿದ ನಗರಗಳಲ್ಲಿ ಮೊದಲನೆಯದಾಗಿದೆ. ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಕಟ್ಟಿದ ಕಟ್ಟಡ ಹೇಗಿರುತ್ತದೆ ಎನ್ನುವ ಕುತೂಹಲ ಇದ್ದರೆ ನೀವೂ ಒಮ್ಮೆ ಭೇಟಿ ನೀಡಬಹುದು.
ಬೆಂಗಳೂರಿನಲ್ಲಿ ಭಾರತದ ಮೊದಲ 3ಡಿ ಮುದ್ರಿಸಿದ ಅಂಚೆ ಕಚೇರಿ ಲೋಕಾರ್ಪಣೆ – India’s first 3D printed post office inaugurated in Bengaluru #BENGALURU
More Stories
ನಟ ದರ್ಶನ್ಗೆ ಹೈಕೋರ್ಟ್ ಮಧ್ಯಂತರ ಜಾಮೀನು ವಿಸ್ತರಣೆ: ಬಿಗ್ ರಿಲೀಫ್
ಪ್ರೊ.ವಿ.ಕೆ.ನಟರಾಜ್ ನಿಧನ
ತುಮಕೂರು ಸಿದ್ದಗಂಗಾ ಮಠದ ಆವರಣದಲ್ಲಿ ಚಿರತೆ