ಆನೆ ಸೆರೆಗೆ ಅರಣ್ಯ ಇಲಾಖೆ ಅಧಿಕಾರಿಗಳಿಂದ ಕಾರ್ಯಾಚರಣೆ ಆರಂಭ

Team Newsnap
1 Min Read

ಹನೂರು : ತಾಲೂಕಿನ ಪೊನ್ನಾಚಿ ಗ್ರಾಮದ ಸುತ್ತಮುತ್ತಲ ಸಣ್ಣಪುಟ್ಟ ಗ್ರಾಮಗಳಲ್ಲಿ ರೈತರ ಜಮೀನುಗಳಿಗೆ ನುಗ್ಗಿ ರೈತರು ಬೆಳೆದ ಫಸಲುಗಳನ್ನು ನಾಶ ಮಾಡಿ ದಾಂದಲೇ ಮಾಡುತ್ತಿದ್ದ ಒಂಟಿ ಆನೆಯೊಂದನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಶುಕ್ರವಾರದಿಂದ ಕಾರ್ಯಾಚರಣೆ ಆರಂಭಿಸಿದ್ದಾರೆ.

ಆನೆ ದಾಳಿಯಿಂದ ಭಯಭೀತರಾಗಿದ್ದ ಸಾರ್ವಜನಿಕರು ಆನೆ ಸೆರೆ ಹಿಡಿಯುವಂತೆ ವ್ಯಾಪಕ ಒತ್ತಾಯ ಕೇಳಿ ಬಂದಿತ್ತು.

ಈ ಕಾರ್ಯಾಚರಣೆಯಲ್ಲಿ ನಾಗರಹೊಳೆ ಅಭಯಾರಣ್ಯ ಹಾಗೂ ಕುಶಾಲ್ ನಗರ ದುಬಾರೆ ಶಿಬಿರದಿಂದ ಬಲರಾಮ, ಅರ್ಜುನ, ಅಶ್ವತ್ಥಾಮ, ಕರ್ಣ ಮುಂತಾದ ಆನೆಗಳು ಕಾರ್ಯಚರಣೆಯಲ್ಲಿ ಪಾಲ್ಗೊಂಡಿವೆ.ಬಿಜೆಪಿ-ಜೆಡಿಎಸ್ ಕೆಲ‌ ಶಾಸಕರು ಕಾಂಗ್ರೆಸ್ಸಿಗೆ: ಸಚಿವ ಚೆಲುವರಾಯ ಸ್ವಾಮಿ

ವರದಿ :- ನಾಗೇಂದ್ರ ಪ್ರಸಾದ್

Share This Article
Leave a comment