October 15, 2024

Newsnap Kannada

The World at your finger tips!

kalarbugi , News , Drought

ಬಿಜೆಪಿ-ಜೆಡಿಎಸ್ ಕೆಲ‌ ಶಾಸಕರು ಕಾಂಗ್ರೆಸ್ಸಿಗೆ: ಸಚಿವ ಚೆಲುವರಾಯ ಸ್ವಾಮಿ

Spread the love

ಮಂಡ್ಯ: ಶೀಘ್ರದಲ್ಲೇ ಬಿಜೆಪಿ-ಜೆಡಿಎಸ್‌ನ ಕೆಲ ಶಾಸಕರು ಕಾಂಗ್ರೆಸ್ಸಿಗೆ ಸೇರುವ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಸಚಿವ ಚೆಲುವರಾಯ ಸ್ವಾಮಿಯವರು ಹೇಳಿದ್ದಾರೆ.

ಸುದ್ದಿಗಾರರ ಮಾತನಾಡಿದ ಚಲುವರಾಯಸ್ವಾಮಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಾರ್ಟಿಯಿಂದ ಆಪರೇಶನ್‌ ಹಸ್ತಕ್ಕೆ ಚಾಲನೆ ನೀಡಲಾಗಿದೆ ಈ ಹಿಂದೆ ಪಾರ್ಟಿ ಬಿಟ್ಟು ಹೋಗಿರುವ ಬಾಂಬೆ ಬಾಯ್ಸ್ ಗೆ ಗಾಳ ಹಾಕಲು ಮುಂದಾಗಿದ್ದೇವೆ, ಹಲವು ಮಂದಿ ಕಾಂಗ್ರೆಸ್‌ ಪಾರ್ಟಿಗೆ ಮತ್ತೆ ಸೇರುವುದಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ರೈತರ ಪ್ರತಿಭಟನೆಗೆ ಕ್ಯಾರೆ ಎನ್ನದ ಸರ್ಕಾರ : ಇಂದೂ ಸಹ 13 ಸಾವಿರ ಕ್ಯುಸೆಕ್ ನೀರು ತ. ನಾಡಿಗೆ

ಕಾಂಗ್ರೆಸ್ ಬಿಟ್ಟು ಬಿಜೆಪಿ ಬಿಟ್ಟು ಶಾಸಕರಾಗಿರುವ ಶಿವರಾಮ್‌ ಹೆಬ್ಬಾರ್ ಮತ್ತೆ ಕಾಂಗ್ರೆಸ್‌ ಪಾರ್ಟಿಗೆ ಸೇರುವುದಕ್ಕೆ ಮುಂದಾಗಿದ್ದು, ಈ ಬಗ್ಗೆ ಶೀಘ್ರದಲ್ಲಿ ತೀರ್ಮಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಇದಲ್ಲದೇ ಬಿಜೆಪಿಯಲ್ಲಿ ತಮಗೆ ಆಗಿರುವ ಅನ್ಯಾಯದ ಬಗ್ಗೆ ಹಿರಿಯ ನಾಯಕರಿಗೆ ತಿಳಿಸಲಾಗಿದೆ. ನನ್ನ ಸೋಲನ್ನು ಸಂಭ್ರಮಿಸಲು ಹಲವು ಮಂದಿ ಬಿಜೆಪಿ ನಾಯಕರು ಸಿದ್ದರಾಗಿದ್ದರು, ಇದನ್ನು ಒಪ್ಪಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಅಂತ ಬಿಜೆಪಿ ಶಾಸಕರು ತಿಳಿಸಿದ್ದಾರೆ.

ಬಿಜೆಪಿ-ಜೆಡಿಎಸ್ ಕೆಲ‌ ಶಾಸಕರು ಕಾಂಗ್ರೆಸ್ಸಿಗೆ: ಸಚಿವ ಚೆಲುವರಾಯ ಸ್ವಾಮಿ – Some BJP-JDS MLAs to Congress: Minister Cheluvaraya Swamy #mandya #mysore

Copyright © All rights reserved Newsnap | Newsever by AF themes.
error: Content is protected !!