ಕೋವಿಡ್ ನಿಯಮ ಉಲ್ಲಂಘಿಸಿ ಮದುವೆ ಮಾಡಿದ ಎರಡು ಕುಟುಂಬದವರಿಗೆ ತಲಾ 10 ಸಾವಿರ ರು ದಂಡ ವಿಧಿಸಿದ ಘಟನೆ ಹಾಸನ ಜಿಲ್ಲೆಯ ಕೊಣನೂರು ಹಾಗೂ ಉಪ್ಪಾರಕೊಪ್ಪಲಿನಲ್ಲಿ ನಡೆದಿದೆ.
ಕೊಣನೂರಿನಲ್ಲಿ ನಡೆಯುತ್ತಿದ್ದ ಮದುವೆ ಮನೆಗೆ ಭೇಟಿ ನೀಡಿದ ಟಾಸ್ಕ್‌ಫೋರ್ಸ್ ಅಧಿಕಾರಿ ರಾಜೇಶ್ ಹಾಗೂ ತಂಡ ಮದುವೆ ಆಯೋಜಕರಿಗೆ 10 ಸಾವಿರ ರು ಶಾಮಿಯಾನ ಹಾಕಿದವರಿಗೆ 5 ರು ಸಾವಿರ ದಂಡ ವಿಧಿಸಿ ಎಚ್ಚರಿಕೆ ನೀಡಿದರು.
ವಿವಿಧ ವಾಹನಗಳನ್ನು ತಡೆದು 4,100 ರು ಹಾಗೂ ಕೋವಿಡ್ ಮಾರ್ಗಸೂಚಿ ಪಾಲಿಸದ ಅತ್ತಿಗುಪ್ಪೆ ಕ್ಲಿನಿಕ್ 20 ಸಾವಿರ ರು ದಂಡ ವಿಧಿಸಿ ಎಚ್ಚರಿಸಿದರು. ಕೊಣನೂರು ಕೇಂದ್ರದಲ್ಲಿ ಒಟ್ಟು 39,100 ರು ದಂಡ ಸಂಗ್ರಹವಾಗಿದೆ.
ರಾಮನಾಥಪುರ ಉಪ ಉಪತಹಶೀಲ್ದಾರ್ ಸಿ.ಸ್ವಾಮಿ, ನೋಡೆಲ್ ಅಧಿಕಾರಿ ಅರುಣ್ ಮತ್ತು ಪಿಡಿಒ ವಿಜಯಕುಮಾರ್ ತಂಡವು ಸಮೀಪದ ಉಪ್ಪಾರಕೊಪ್ಪಲಿನಲ್ಲಿ ಮದುವೆ ಮನೆಗೆ ಭೇಟಿ ನೀಡಿ ಮಾಸ್ಕ್ ಧರಿಸದ ವಧು- ವರನಿಗೆ ತಲಾ 100 ರು ದಂಡ, ಮದುವೆ ಮನೆಯವರಿಗೆ 10 ಸಾವಿರ ರು ದಂಡ ವಿಧಿಸಿದ್ದಾರೆ.
- ನಂಬುಗೆಯೇ ಇಂಬು
- KSRTC : ಪ್ರಯಾಣಿಕರು UPI ಮೂಲಕ ಟಿಕೆಟ್ ಖರೀದಿಸಲು ಅವಕಾಶ
- Weekly Horoscope: ವಾರದ ಜಾತಕ ನ. 24 ರಿಂದ ನ. 30, 2024.
- ಚನ್ನಪಟ್ಟಣದಲ್ಲಿ ಸಿ ಪಿ ಯೋಗೇಶ್ವರ್ ಗೆ ಭರ್ಜರಿ ಗೆಲುವು
- ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಗೆಲುವು: ಅಧಿಕೃತ ಘೋಷಣೆ ಬಾಕಿ
More Stories
KSRTC : ಪ್ರಯಾಣಿಕರು UPI ಮೂಲಕ ಟಿಕೆಟ್ ಖರೀದಿಸಲು ಅವಕಾಶ
ಚನ್ನಪಟ್ಟಣದಲ್ಲಿ ಸಿ ಪಿ ಯೋಗೇಶ್ವರ್ ಗೆ ಭರ್ಜರಿ ಗೆಲುವು
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ