ಮುತ್ತತ್ತಿಯನ್ನೂ ಕಾಪಾಡದ ಮುತ್ತೆತ್ತರಾಯ : ಕುಟುಂಬದ ನಾಲ್ವರಿಗೆ ಕೊರೋನಾ ಸೋಂಕು

Team Newsnap
1 Min Read

ಇಷ್ಟು ದಿನ ಕೊರೋನಾ ಸೋಂಕಿನಿಂದ ಪಾರಾಗಿದ್ದ ಮಳವಳ್ಳಿ ತಾಲೂಕಿನ ಮುತ್ತತ್ತಿಯಲ್ಲಿ ಒಂದೇ ಕುಟುಂಬದ ನಾಲ್ವರಿಗೆ ಸೋಂಕು ದೃಢವಾಗಿದೆ.‌

ಹಳ್ಳಿ ಹಳ್ಳಿಗೂ ಸೋಂಕು ಹರಡಿದ್ದರೂ ಇಷ್ಟು ದಿನ ಮುತ್ತತ್ತಿ ಗ್ರಾಮಕ್ಕೆ ಕೊರೋನಾ ಕಾಲಿಟ್ಟಿರಲಿಲ್ಲ. ಮುತ್ತತ್ತಿ ಗ್ರಾಮದಲ್ಲಿ 320 ಜನಸಂಖ್ಯೆ ಇದೆ. ಗ್ರಾಮದಲ್ಲಿ ಯಾರೊಬ್ಬರಿಗೂ ಸೋಂಕು ತಗುಲಿಲ್ಲ.

ಇದೀಗ ಮುತ್ತತ್ತಿ ದೇವಾಲಯದ ಅರ್ಚಕ ಕುಟುಂಬದ ನಾಲ್ವರಿಗೆ ಕೊರೋನಾ ಸೋಂಕು ಭಾದಿಸಿದೆ.

ದಟ್ಟ ಅರಣ್ಯದ ಮಧ್ಯೆ ಇರುವ ಮುತ್ತತ್ತಿ ಗ್ರಾಮ ಪ್ರವಾಸಿಗರ ಪ್ರೇಕ್ಷಣೀಯ ಸ್ಥಳ.
ಎಲ್ಲರಿಗೂ ಕರೊನಾ ಟೆಸ್ಟ್ ಮಾಡಿಸಲು ನಿರ್ಧರಿಸಲಾಗಿದೆ ಎಂದು ಡಿ ಹೆಚ್ ಒ ಡಾ.ಮಂಚೇಗೌಡ ಮಾಹಿತಿ ನೀಡಿದ್ದಾರೆ.

ಫುಡ್ ಕಿಟ್ ವಿತರಣೆಯಿಂದಲೇ ಕೊರೋನಾ ಸೋಂಕು‌?

ಮುತ್ತತ್ತಿಗೆ ಫುಡ್ ಕಿಟ್ ರೂಪದಲ್ಲಿ ಕೊರೋನಾ ವಕ್ಕರಿಸಿದೆ.
ಮೇ 23 ರಂದು ಶಾಸಕ ಅನ್ನದಾನಿ ಫುಡ್ ಕಿಟ್ ವಿತರಣೆ ಮಾಡಿದ್ದರು.
ತಾಲೂಕು ಅಧಿಕಾರಿಗಳು ಹಾಗೂ ಶಾಸಕರ ಬೆಂಬಲಿಗರು ಭಾರಿ ಸಂಖ್ಯೆ ಯಲ್ಲಿ ಕೊರೋನಾ ನಿಯಮ ಉಲ್ಲಂಘಿಸಿದ್ದರು . ಹೀಗಾಗಿ ಮುತ್ತತ್ತಿಗೆ ಕೊರೋನಾ ಸೋಂಕು ಅಂಟಿತಾ ಎಂಬ ಪ್ರಶ್ನೆ ಎದುರಾಗಿದೆ.

Share This Article
Leave a comment