ಮರಗಳೇ ಇಲ್ಲದ ಉತ್ತರ ಕರ್ನಾಟಕದ ನಾಯಕ ಅರಣ್ಯ ಸಚಿವ – ಅರಗ ಲೇವಡಿ

Team Newsnap
1 Min Read

ಬೆಂಗಳೂರು: ಮರಗಳೇ ಇಲ್ಲದ ಉತ್ತರ ಕರ್ನಾಟಕದ ನಾಯಕರು ಅರಣ್ಯ ಸಚಿವರಾಗಿದ್ದಾರೆ ಎಂದು ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ ಅವರ ಮಾತು ಕಾಂಗ್ರೆಸ್ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ.

ರಾಜ್ಯದಲ್ಲಿ 211 ಮಂದಿ ಪೋಲಿಸ್ ಇನ್ಸ್ ಪೆಕ್ಟರ್ ಗಳ ವರ್ಗಾವಣೆ ಮಾಡಿದ ಸರ್ಕಾರ

ಕಸ್ತೂರಿ ರಂಗನ್ ವರದಿ ವಿರೋಧಿಸಿ ಶಿವಮೊಗ್ಗದಲ್ಲಿ ಬಿಜೆಪಿ ನೇತೃತ್ವದಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಹಾಗೂ ಈಶ್ವರ್ ಖಂಡ್ರೆ ಅವರನ್ನು ವಿರೋಧಿಸುವ ಭರದಲ್ಲಿ ವಿವಾದ ಸೃಷ್ಟಿ ಮಾಡಿದ್ದಾರೆ, ಮರ ನೆರಳು ಅಂದರೇ ಏನು ಎಂಬುದೇ ಗೊತ್ತಿಲ್ಲದ ಊರುಗಳು ಉತ್ತರ ಕರ್ನಾಟಕದಲ್ಲಿ ಇರುವುದು, ನಮ್ಮ ಖರ್ಗೆ ಅವರನ್ನು ನೋಡಿದರೆ ಗೊತ್ತಾಗಲ್ವಾ ತಲೆ ಕೂದಲು ಇದಿದ್ದರಿಂದ ಅವರು ಬದುಕಿದ್ದಾರೆ, ಅದೇ ನೆರಳು ಅವರಿಗೆ, ಮಲೆನಾಡಿನ ಬದುಕು ಗೊತ್ತಿಲ್ಲ, ಪಶ್ಚಿಮ ಘಟ್ಟ ಎಂದರೇನು ಎಂಬುದೇ ಗೊತ್ತಿಲ್ಲ, ಇಂತವರು ನಮ್ಮ ನಾಯಕರಾಗಿದ್ದಾರೆ ಈ ವಿಷಯದ ಬಗ್ಗೆ ರಾಜ್ಯ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಹೇಳಿದ್ದಾರೆ. ಪಕ್ಷ ವಿರೋಧಿಗಳ ಮೇಲೆ ಕ್ರಮ: ಇಲ್ಲದೇ ಹೋದರೆ ಮುಂದಿನ ದಾರಿ ಬೇರೆ – ರಾಜಣ್ಣ

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಸರ್ಕಾರ ಖರ್ಗೆ ಮೈಬಣ್ಣದ ಬಗ್ಗೆ ಕೀಳಾಗಿ ಮಾತನಾಡಿರುವ ಅರಗ ಜ್ಞಾನೇಂದ್ರ ಇಡೀ ದಲಿತ ಸಮುದಾಯವನ್ನೇ ಅವಮಾನಿಸಿದೆ ಎಂದಿದೆ.

Share This Article
Leave a comment