December 28, 2024

Newsnap Kannada

The World at your finger tips!

WhatsApp Image 2022 09 21 at 1.37.59 PM

ಮಳವಳ್ಳಿ ಸರ್ಕಾರಿ ಶಾಲೆ ಶಿಕ್ಷಕರೊಬ್ಬರ ವರ್ಗಾವಣೆ: ಬಿಕ್ಕಿ,ಬಿಕ್ಕಿ ಅತ್ತ ವಿದ್ಯಾರ್ಥಿಗಳು

Spread the love

ಸರ್ಕಾರಿ ಶಾಲೆ ಶಿಕ್ಷಕರೊಬ್ಬರ ವರ್ಗಾವಣೆಯಿಂದಾಗಿ ವಿದ್ಯಾರ್ಥಿಗಳು ಕಣ್ಣೀರಿಟ್ಟ ಪ್ರಸಂಗ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಭೀಮನಹಳ್ಳಿಯಲ್ಲಿ ಜರುಗಿದೆ.

ಭೀಮನಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ಪುಟ್ಟರಾಜು ವರ್ಗಾವಣೆಯಾಗಿರುವ ಮುಖ್ಯ ಶಿಕ್ಷಕರ ನಿರ್ಗಮನವನ್ನು ಸಹಿಸಲಾರದ ವಿದ್ಯಾರ್ಥಿಗಳ ಸಮೂಹ ಬಿಕ್ಕಿ ಅತ್ತರು.

ಹಲವು ವರ್ಷಗಳಿಂದ ಭೀಮನಹಳ್ಳಿಯ ಶಾಲೆಯಲ್ಲಿ ಶಿಕ್ಷಕರಾಗಿದ್ದ ಪುಟ್ಟರಾಜು ಅವರನ್ನು ಸದ್ಯ ಮಂಡ್ಯದ ಡಯಟ್‌ಗೆ ವರ್ಗಾವಣೆ ಮಾಡಲಾಗಿದೆ. ನದಿ ತೀರದಲ್ಲಿ ಪಟಾಕಿ ನೆಪದಲ್ಲಿ ಬಾಂಬ್ ಸಿಡಿಸಿ ಪ್ರಯೋಗ ಮಾಡುತ್ತಿದ್ದ ಉಗ್ರ ಯಾಸಿನ್

ಶಿಕ್ಷಕರ ವರ್ಗಾವಣೆಯಿಂದ ಕಣೀರಿಡುತ್ತಿರುವ ವಿದ್ಯಾರ್ಥಿಗಳು ಕಾಲಿಗೆ ಬಿದ್ದು ಶಾಲೆ ಬಿಟ್ಟು ಹೋಗಬೇಡಿ ಎಂದು ಬೇಡಿಕೊಂಡರು ಮಕ್ಕಳ‌ ಜೊತೆಗೆ ಶಿಕ್ಷಕರೂ , ಪೋಷಕರು ಕೂಡ ಕಾಲಿಗೆ ಬಿದ್ದು ಬೀಳ್ಕೊಟ್ಟರು.

ಅಕ್ರಮ ಆಸ್ತಿ ಗಳಿಕೆ – ನಿವೃತ್ತ RTO ಅಧಿಕಾರಿಗೆ 4 ವರ್ಷ ಕಠಿಣ ಶಿಕ್ಷೆ, 63 ಲಕ್ಷ ರು ದಂಡ

ಅಕ್ರಮ ಆಸ್ತಿ ಗಳಿಕೆ ಮಾಡಿದ್ದ ನಿವೃತ್ತ ಸಾರಿಗೆ ಅಧಿಕಾರಿಗೆ 4 ವರ್ಷ ಕಠಿಣ ಶಿಕ್ಷೆ ಹಾಗೂ 63 ಲಕ್ಷ ರು ದಂಡವನ್ನು ವಿಧಿಸಿ ಬೆಳಗಾವಿಯ ಲೋಕಾಯುಕ್ತ ನ್ಯಾಯಾಲಯ ತೀರ್ಪು ನೀಡಿದೆ.

ಕೋಲಾರ ಮೂಲದ ಬೆಳಗಾವಿಯ ಆಂಜನೇಯ ನಗರ ನಿವಾಸಿ ಪಿ. ಶಾಂತಕುಮಾರ್ ಶಿಕ್ಷೆಗೆ ಒಳಗಾದವರು.

ಬೀದರ್ (Bidar) ಜಿಲ್ಲೆಯ ಹುಮನಾಬಾದ್ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಆಗಿದ್ದಾಗ ಅಕ್ರಮವಾಗಿ ಅಪಾರ ಆಸ್ತಿ ಸಂಪಾದಿಸಿದ್ದರು. ಈ ಬಗ್ಗೆ ಮಾಹಿತಿ ಕಲೆಹಾಕಿದ್ದ ಅಂದಿನ ಬೆಳಗಾವಿ ಲೋಕಾಯುಕ್ತ ಇನ್ಸ್‌ಪೆಕ್ಟರ್ ಆರ್. ಕೆ ಪಾಟೀಲ್ 2010ರ ಮೇ 3 ರಂದು ಪ್ರಕರಣ ದಾಖಲಿಸಿದ್ದರು.

ಖಚಿತ ಮಾಹಿತಿ ಮೇರೆಗೆ ಬೆಳಗಾವಿಯ ಆಂಜನೇಯ ನಗರದಲ್ಲಿದ್ದ ಶಾಂತಕುಮಾರ್ ಮನೆ ಹಾಗೂ ಹುಮನಾಬಾದ್ ಕಚೇರಿ ಮೇಲೆ ಅಧಿಕಾರಿಗಳು ನಡೆಸಿದ್ದ ದಾಳಿ ವೇಳೆ 1.14 ಕೋಟಿ ಆಸ್ತಿ ಸಿಕ್ಕಿತ್ತು. ಘಟನೆಗೆ ಸಂಬಂಧಿಸಿ ಲೋಕಾಯುಕ್ತ ಇನ್ಸ್‌ಪೆಕ್ಟರ್ ಆಗಿದ್ದ ಆರ್.ಬಿ. ಹವಾಲ್ದಾರ ಅವರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ವಾದ-ಪ್ರತಿವಾದವನ್ನು ನ್ಯಾಯಾಧೀಶ ಮೋಹನ ಪ್ರಭು ಆಲಿಸಿದ್ದರು. ಇದರಲ್ಲಿ 63 ಲಕ್ಷ ರೂ. ಹಣವನ್ನು ಭ್ರಷ್ಟಾಚಾರದ ಹಾಗೂ ಅಕ್ರಮವಾಗಿ ಸಂಪಾದಿಸಿದ್ದಾರೆ ಎನ್ನುವುದು ಸಾಬೀತಾಗಿತ್ತು. ಈ ಹಿನ್ನೆಲೆಯಲ್ಲಿ ಶಾಂತಕುಮಾರ್‌ಗೆ 4 ವರ್ಷ ಕಠಿಣ ಶಿಕ್ಷೆ ಹಾಗೂ 63 ಲಕ್ಷ ದಂಡ ವಿಧಿಸಿ ಕೋರ್ಟ್ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದೆ

Copyright © All rights reserved Newsnap | Newsever by AF themes.
error: Content is protected !!