ನದಿ ತೀರದಲ್ಲಿ ಪಟಾಕಿ ನೆಪದಲ್ಲಿ ಬಾಂಬ್ ಸಿಡಿಸಿ ಪ್ರಯೋಗ ಮಾಡುತ್ತಿದ್ದ ಉಗ್ರ ಯಾಸಿನ್

Team Newsnap
1 Min Read

ಪಟಾಕಿ ಸಿಡಿಸುವ ‌ನೆಪದಲ್ಲಿ ಸ್ಫೋಟಕ ಸ್ಫೋಟಿಸುವ ಸಂಚು ಮಾಡಿದ್ದ ಶಿವಮೊಗ್ಗ ಶಂಕಿತ ಉಗ್ರ ಯಾಸಿನ್ ಪ್ರಾಯೋಗಿಕ ದೃಷ್ಕ್ಯದ ಮಾಹಿತಿ ಭಯಾನಕವಾಗಿದೆ

ಐಸಿಸ್ ಉಗ್ರ ಸಂಘಟನೆ ಜೊತೆ ಸಂಪರ್ಕ ಹೊಂದಿದ್ದ ಆರೋಪದ ಮೇರೆಗೆ ಶಿವಮೊಗ್ಗದ ಸೈಯದ್ ಯಾಸಿನ್‌ನನ್ನು ಪೊಲೀಸರು ಬಂಧಿಸಿ ಪ್ರಾಥಮಿಕ ತನಿಖೆಯ ವೇಳೆ ಆತ ನದಿ ತೀರದಲ್ಲಿ ಸ್ಫೋಟಕವನ್ನು ತಯಾರಿಸಿ ಪರೀಕ್ಷೆ ನಡೆಸುತ್ತಿದ್ದ ಎನ್ನಲಾಗಿದೆ. ಇದನ್ನು ಓದಿ – ನಟಿ ಶ್ರೀಲೀಲಾ ತಾಯಿಯ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ

ಶಿವಮೊಗ್ಗದ ಸಿದ್ದೇಶ್ವರ ನಗರ ನಿವಾಸಿ ಸೈಯದ್ ಯಾಸಿನ್‌ ಜೆಎನ್‌ಎನ್‌ಸಿ ಕಾಲೇಜಿನಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವಿಧರ. . ಈತ ತನ್ನ ನಿವಾಸದಿಂದ 3-4 ಕಿ ಮೀ ದೂರದಲ್ಲಿರುವ ಪುರಲೆ ಸಮೀಪದ ತುಂಗಾ ನದಿ ತೀರವನ್ನು ಆತನ ಕಾರ್ಯ ಚಟುವಟಿಕೆ ಸ್ಥಾನ ವನ್ನಾಗಿ ಮಾಡಿಕೊಂಡಿದ್ದ. ಇದನ್ನು ಓದಿ – ತಿರುಪತಿ ತಿಮ್ಮಪ್ಪನಿಗೆ ಮುಸ್ಲಿಂ ಉದ್ಯಮಿಯಿಂದ 1 ಕೋಟಿ ರು ದೇಣಿಗೆ

ಕೃಷಿ ತೋಟ ಇರುವ ಕಾರಣ ಕಾಡು ಪ್ರಾಣಿಗಳಿಗೆ ಭಯ ಮೂಡಿಸಲು ಈ ಭಾಗದಲ್ಲಿ ಪಟಾಕಿಗಳನ್ನು ಸಿಡಿಸಲಾಗುತ್ತಿದೆ. ಈ ವಿಷಯದ ಲಾಭ ಮಾಡಿಕೊಂಡಿದ್ದ ಯಾಸಿನ್‌ ತನ್ನ ಬಾಂಬ್ ಪರೀಕ್ಷೆಯ ಕೇಂದ್ರವನ್ನಾಗಿ ಮಾಡಿಕೊಂಡಿದ್ದ. ತಾನು ತಯಾರಿಸಿದ ಸ್ಫೋಟಕಗಳನ್ನು ಇಲ್ಲಿ ತಂದು ಪರೀಕ್ಷೆ ಮಾಡಿಕೊಳ್ಳುತ್ತಿದ್ದ. ಇಲ್ಲಿನ ನಿವಾಸಿಗಳು ಈತ ಪಟಾಕಿ ಸಿಡಿಸುತ್ತಿದ್ದಾನೆ ಎಂದು ಭಾವಿಸಿದ್ದರು. ಆದರೆ ಪೊಲೀಸರ ತನಿಖೆಯಿಂದ ಈಗ ಅಸಲಿ ಸತ್ಯ ಪ್ರಕಟವಾಗಿದೆ.

Share This Article
Leave a comment