ಸಚಿವರೊಬ್ಬರ ಅಕ್ರಮ ಬಯಲು: ನಾಳೆ ಸದನದಲ್ಲೇ ಸ್ಪೋಟಕ ಬಾಂಬ್ – HDK

Team Newsnap
1 Min Read
ಮಂಡ್ಯದಲ್ಲಿ ಸುಮಲತಾ ಸ್ಪರ್ಧಿಸಿದರೆ - ರೈತ ಮಹಿಳೆ ನಿಲ್ಲಿಸಿ ಗೆಲ್ಲಿಸುವೆ - ಹೆಚ್ ಡಿ ಕೆ

ಒಂದೆಡೆ ಕಾಂಗ್ರೆಸ್ ಬಿಜೆಪಿಯದ್ದು 40 ಪರ್ಸೆಂಟ್ ಸರ್ಕಾರ ಎಂದರೆ ಮತ್ತೊಂದೆಡೆ ನಾಳೆ ಸದನದಲ್ಲಿಯೇ ರಾಜ್ಯ ಬಿಜೆಪಿ ಸರ್ಕಾರದ ಸಚಿವರೊಬ್ಬರ ಅಕ್ರಮವನ್ನು ದಾಖಲೆ ಸಹಿತ ಬಹಿರಂಗಪಡಿಸುವುದಾಗಿ ಮಾಜಿ CM HDK ಹೊಸ ಬಾಂಬ್ ಸಿಡಿಸಿದರು

ಕಲಬುರ್ಗಿ ವಿಮಾನ ನಿಲ್ದಾಣದ ಬಳಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ HDK ಅವರು, ರಾಜ್ಯ ಸಚಿವರೊಬ್ಬರು ನಿಯಮ ಉಲ್ಲಂಘಿಲಸಿ, ಅಧಿಕಾರವನ್ನು ದುರುಪಯೋಗ ಮಾಡಿಕೊಂಡು, ಅಕ್ರಮವನ್ನು ಎಸಗಿದ್ದಾರೆ. ಅದರ ಬಗ್ಗೆ ನಾಳೆ ದಾಖಲೆ ಸಹಿತ ಸದನದಲ್ಲಿಯೇ ಬಹಿರಂಗ ಪಡಿಸುತ್ತೇನೆ ಎಂದು ಹೇಳಿದರು.

ಯಾವ ಸಚಿವರು, ಅವರ ಹೆಸರು ಏನು ಎಂಬುದು ಸದನದಲ್ಲಿಯೇ ಬಹಿರಂಗವಾಗಲಿದೆ. ನಾನು ಗಾಳಿಯಲ್ಲಿ ಗುಂಡು ಹಾರಿಸುವದಿಲ್ಲ. ಅಲ್ಲದೇ ಹಿಟ್ ಅಂಡ್ ರನ್ ಕೆಲಸವನ್ನೂ ಕೂಡ ಮಾಡುವುದಿಲ್ಲ ಎಂದರು. ಇದನ್ನು ಓದಿ = ಮಳವಳ್ಳಿ ಸರ್ಕಾರಿ ಶಾಲೆ ಶಿಕ್ಷಕರೊಬ್ಬರ ವರ್ಗಾವಣೆ: ಬಿಕ್ಕಿ,ಬಿಕ್ಕಿ ಅತ್ತ ವಿದ್ಯಾರ್ಥಿಗಳು

ನನ್ನ ಬಗ್ಗೆ ಹಗುರವಾಗಿ ಏಕವಚನದಲ್ಲಿ ಮಾತನಾಡಿದಂತ ಆ ಸಚಿವರಿಗೆ ನಾಳೆ ಸದನದಲ್ಲಿಯೇ ಅವರ ಅಕ್ರಮಗಳನ್ನು ದಾಖಲೆಗಳ ಸಹಿತ ಬಹಿರಂಗ ಪಡಿಸಿ, ಉತ್ತರ ನೀಡಲಿದ್ದೇನೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಹಗರಣಗಳ ದಾಖಲೆ ಬಿಡುಗಡೆ ಮಾಡುವೆ ಎಂದು ಹೇಳಿದರು.

Share This Article
Leave a comment