ಅಮೆರಿಕಾ ಟೆಕ್ಸಾಸ್ ನಲ್ಲಿ ದುರಂತ : ಶಸ್ತ್ರಧಾರಿ ಯುವಕನಿಂದ ಗುಂಡಿನ ದಾಳಿ: 18 ಶಾಲಾ ಮಕ್ಕಳು ಸೇರಿ 21 ಮಂದಿ ಸಾವು

Team Newsnap
1 Min Read

ಅಮೆರಿಕಾದ ಟೆಕ್ಸಾಸ್​ನ ಉವಾಲ್ದೆ ಕೌಂಟಿಯಲ್ಲಿರುವ ಪ್ರಾಥಮಿಕ ಶಾಲಾ ಆವರಣದಲ್ಲಿ ಶಸ್ತ್ರಧಾರಿ 18 ವರ್ಷದ ಯುವಕ ಮನಬಂದಂತೆ ಗುಂಡಿನ ಮಳೆಗೆರೆದಿದ್ದಾನೆ ಪರಿಣಾಮ 18 ಶಾಲಾ ಮಕ್ಕಳೂ ಸೇರಿ 21 ಮಂದಿ ಸಾವನ್ನಪ್ಪಿದ ಘಟನೆ ಮಂಗಳವಾರ ಜರುಗಿದೆ.

ಈ ದಾಳಿಕೋರನನ್ನು ಸಾಲ್ವಡೋರ್​ ರಾಮೋಸ್​ ಎಂದು ಗುರುತಿಸಲಾಗಿದೆ. ಗುಂಡಿನ ದಾಳಿಯ ವೇಳೆಯೇ ಪೊಲೀಸರು ರಾಮೋಸ್​ ಮೇಲೆ ದಾಳಿ ಮಾಡಿ ಹತ್ಯೆ ಮಾಡಿದ್ದಾರೆ.​ ದಾಳಿಕೋರನು ಕೈ ಬಂದೂಕು ಮತ್ತು ರೈಫಲ್‌ನಿಂದ ದಾಳಿ ನಡೆಸಿದ್ದಾನೆ.

ಗುಂಡಿನ ದಾಳಿಯ ವೇಳೆ ಇಬ್ಬರು ಪೊಲೀಸ್ ಅಧಿಕಾರಿಗಳಿಗೂ ಗುಂಡು ತಾಗಿ, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತಪಟ್ಟವರ ಜೊತೆಗೆ ಎಷ್ಟು ಜನರು ಗಾಯಗೊಂಡಿದ್ದಾರೆ ಎಂಬುದು ತಕ್ಷಣವೇ ಸ್ಪಷ್ಟವಾಗಿಲ್ಲ, ಆದರೆ ಹಲವಾರು ಮಂದಿಗೆ ಗಾಯಗಳಾಗಿವೆ ಎಂದು ಪೊಲೀಸರು ಹೇಳಿದ್ದಾರೆ.

ಇದನ್ನು ಓದಿ : ಶೇ 1ರಷ್ಟು ಕಮೀಷನ್ ಪಡೆದ ಆರೋಪ ಪಂಜಾಬ್ ಆರೋಗ್ಯ ಸಚಿವರನ್ನೇ ವಜಾಗೊಳಿಸಿದ ಸಿ ಎಂ

ಯುಎಸ್​ ಶಾಲೆಯೊಂದರಲ್ಲಿ ಸುಮಾರು ಒಂದು ದಶಕದ ಬಳಿಕ ನಡೆದ ಅತ್ಯಂತ ಭೀಕರ ಗುಂಡಿನ ದಾಳಿ ಇದಾಗಿದೆ ಮತ್ತು ಟೆಕ್ಸಾಸ್ ಇತಿಹಾಸದಲ್ಲೇ ಅತ್ಯಂತ ಮಾರಣಾಂತಿಕ ಶಾಲಾ ಗುಂಡಿನ ದಾಳಿಯಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ

ಟೆಕ್ಸಾಸ್​ನಲ್ಲಿ ನಡೆದ ಗುಂಡಿನ ದಾಳಿಯ ಬಗ್ಗೆ ಅಧ್ಯಕ್ಷ ಜೋ ಬೈಡೆನ್ ಅವರಿಗೆ ಮಾಹಿತಿ ನೀಡಲಾಗಿದೆ. ಸದ್ಯ ಅವರು ದಕ್ಷಿಣ ಕೊರಿಯಾ ಮತ್ತು ಜಪಾನ್‌ಗೆ ಐದು ದಿನಗಳ ಪ್ರವಾಸದಲ್ಲಿದ್ದು, ಅಲ್ಲಿಂದ ಹಿಂದಿರುಗಿದ ಬಳಿಕ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.

ಈ ದುರಂತದ ಕರಾಳ ಆಚರಣೆಗಾಗಿ ಮೇ 28 ರವರೆಗೆ ಪ್ರತಿದಿನ ಸೂರ್ಯಾಸ್ತದವರೆಗೆ ಧ್ವಜಗಳನ್ನು ಅರ್ಧದಷ್ಟು ಹಾರಿಸಬೇಕೆಂದು ಬೈಡೆನ್ ಆದೇಶಿಸಿದ್ದಾರೆ.

Share This Article
Leave a comment