February 24, 2026

Newsnap Kannada

The World at your finger tips!

pruthvi karona

ಇಂದು ಸಪ್ತಪದಿ ತುಳಿಯಬೇಕಿದ್ದ ವರ ಕೊರೊನಾಗೆ ಬಲಿ

Spread the love

ಕೇವಲ 32 ವರ್ಷ, ಇಂದು ಹಸೆಮಣೆ ಏರಿ ಸಪ್ತಪದಿ ತುಳಿಯಬೇಕಿದ್ದ ಯುವಕ ಕೊರೋನಾ ಮಾಹಾ‌ಮಾರಿಗೆ ಬಲಿಯಾಗಿದ್ದಾರೆ.

prutvi1

ಪೃಥ್ವಿರಾಜ್(32) ಕೊರೊನಾ ಸೋಂಕಿಗೆ ಬಲಿಯಾದ ಯುವಕ. ಈ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ದೇವರಕೊಡಿಗೆ ಗ್ರಾಮದಲ್ಲಿ ನಡೆದಿದೆ.

ಕಳೆದ 10 ದಿನಗಳ ಹಿಂದೆ ಬೆಂಗಳೂರಿಗೆ ಬಂದು ಹೋಗಿದ್ದ ಪೃಥ್ವಿರಾಜ್ ಇಂದು ವೈವಾಹಿಕ ಜೀವನಕ್ಕೆ ಕಾಲಿಡಬೇಕಿತ್ತು. ಆದರೆ ಕೊರೋನಾ ಪಾಸಿಟಿವ್ ಬಂದ ಕಾರಣ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ವರನ ಅಕಾಲಿಕ ನಿಧನದಿಂದಾಗಿ ಸಂಭ್ರಮ ನೆಲೆಸಬೇಕಿದ್ದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.

error: Content is protected !!