ಇಂದು ಖಗ್ರಾಸ ಚಂದ್ರಗ್ರಹಣ : ಯಾವ ನಕ್ಷತ್ರ, ರಾಶಿಗಳಿಗೆ ದೋಷ- ಪರಿಹಾರ

Team Newsnap
2 Min Read

ಇಂದು ಕಾರ್ತಿಕ ಮಾಸ ಹುಣ್ಣಿಮೆ ದಿನ ರಾಹುಗ್ರಸ್ತ ಚಂದ್ರಗ್ರಹಣ ಗೋಚರಿಸಲಿದೆ. ರಾಜ್ಯದಲ್ಲೂ ಪಾರ್ಶ್ವ ಚಂದ್ರಗ್ರಹಣದ ಛಾಯೆ ಗೋಚರಿಸಲಿದೆ 15 ದಿನದ ಅಂತರದಲ್ಲಿಯೇ ಕಾರ್ತಿಕ ಪೂರ್ಣಿಮೆಯ ದಿನ ರಾಹುಗ್ರಸ್ಥ ಚಂದ್ರಗ್ರಹಣ ಸಂಭವಿಸಲಿದೆ.

15 ದಿನದ ಅಂತರದಲ್ಲಿ ಎರಡು ಗ್ರಹಣ ಸಂಭವಿಸಿರೋದ್ರಿಂದ ಜ್ಯೋತಿಷ್ಯ ಶಾಸ್ತ್ರದಲ್ಲಿ ಸಹಜವಾಗಿ ಪ್ರಾಮುಖ್ಯತೆ ಪಡೆದುಕೊಂಡಿದೆ. ಭರಣಿ ನಕ್ಷತ್ರ ಮೇಷರಾಶಿಯಲ್ಲಿ ಸಂಭವಿಸಲಿರುವ ಗ್ರಹಣದಿಂದ ಕೆಲ ರಾಶಿಯವರಿಗೆ ಅಪತ್ತು ಕೆಲ ರಾಶಿಯವರಿಗೆ ಉತ್ತಮವೂ ಆಗಲಿದೆ ಎನ್ನುವ ವಿಶ್ಲೇಷಣೆಗಳು ಕೇಳಿಬಂದಿದೆ.

ರಾಹುಗ್ರಸ್ಥ ಚಂದ್ರ ಗ್ರಹಣದ ವಿವರ ಇಂತಿದೆ

ಗ್ರಹಣ ಸ್ಪರ್ಶಕಾಲ – 2.39ಕ್ಕೆ
ಗ್ರಹಣ ಮಧ್ಯಕಾಲ – 4.29ಕ್ಕೆ
ಗ್ರಹಣ ಮೋಕ್ಷಕಾಲ – 6.19ಕ್ಕೆ

ಭೋಜನ ನಿಯಮ:

  • ಈ ದಿನ ಹಗಲು ಭೋಜನ ನಿಷಿದ್ಧವಾಗಿರುತ್ತದೆ.
  • ಉಪಹಾರ ಮಧ್ಯಾಹ್ನ 11-50 ಘಂಟೆ ಒಳಗೆ ತದ ನಂತರ ಆಹಾರ ಸೇವನೆ ಇಲ್ಲ.
  • ಗ್ರಹಣ ಮೋಕ್ಷ ನಂತರ ರಾತ್ರಿ 6:19 ರ ನಂತರ ಮಕ್ಕಳು, ವೃದ್ಧರು ಮತ್ತು ಅನಾರೋಗ್ಯ ವ್ಯಕ್ತಿಗಳು ಆಹಾರ ಸೇವನೆ ಮಾಡಬಹುದು.

ಶ್ಲೋಕ

ಯೋ ಸೌ ವಜ್ರಧರೋ ದೇವಃ ಆದಿತ್ಯಾನಾಂ ಪ್ರಭುರ್ಮತಃ |

ಚಂದ್ರ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು || ‌ ‌ ‌ ‌ ‌ ಯೋ ಸೌ ದಂಡಧರೋ ದೇವಃ ಯಮೋ ಮಹಿಷವಾಹನಃ |

ಚಂದ್ರ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು ||
‌ ಯೋ ಸೌ ಶೂಲಧರೋ ದೇವಃ ‌ಪಿನಾಕೀ ವೃಷವಾಹನಃ |

ಚಂದ್ರ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು ||

ಗ್ರಹಣ ದೋಷದ ನಕ್ಷತ್ರ, ರಾಶಿಗಳು:

ನಕ್ಷತ್ರಗಳು – ಅಶ್ವಿನಿ, ಭರಣಿ, ಕೃತ್ತಿಕಾ, ಪೂರ್ವೆ(ಹುಬ್ಬಾ), ಪೂರ್ವಷಾಢಾ
ರಾಶಿಗಳು – ಮೇಷ, ವೃಷಭ, ಕನ್ಯಾ, ವೃಶ್ಚಿಕ

  • ಗ್ರಹಣ ಸ್ಪರ್ಶಕಾಲದಲ್ಲಿ ಸ್ನಾನ ಮಾಡುವುದು
  • ದೇವರ ಸ್ತೋತ್ರ ಪಠಣೆ
  • ಮನೆಯಲ್ಲಿ ದೇವರಿಗೆ ದೀಪ ಹಚ್ಚಿ ಜಪ
  • ಗ್ರಹಣ ಅವಧಿಯಲ್ಲಿ ಮನೆಯಿಂದ ಹೊರಬಾರದೇ ಇರುವುದು
  • ಗ್ರಹಣ ಮೋಕ್ಷದ ನಂತರ ಸ್ನಾನ ಮಾಡುವುದು
  • ಗ್ರಹಣ ದೋಷವಿರುವ ನಕ್ಷತ್ರ, ರಾಶಿಯವರು ಹೋಮ ಮಾಡಿಸಿ
  • ದೋಷ ಪರಿಹಾರಕ್ಕೆ ಗ್ರಹಣ ಶಾಂತಿಹೋಮ ನಡೆಸಿದರೆ ಉತ್ತಮ

ಗ್ರಹಣಕಾಲದಲ್ಲಿ ಪಾಲಿಸಬೇಕಾದ ಆಚರಣೆಗಳು :

  • ಗ್ರಹಣ ಸ್ಪರ್ಶ ಸ್ನಾನ (ಹಿಡಿಯುವ ಸಮಯ) ಮತ್ತು ಮೋಕ್ಷ ಸ್ನಾನ (ಮುಗಿದ ನಂತರ) ಸ್ನಾನ ಮಾಡಲೇಬೇಕು.
  • ಗ್ರಹಣದ ಆರಂಭದಲ್ಲಿ ಮಾಡುವ ಸ್ನಾನದಿಂದ ಜಪ-ಪಾರಾಯಣ-ದಾನಾದಿಗಳಿಗೆ ಮಾತ್ರ ಅಧಿಕಾರ. ಊಟ, ಉಪಾಹಾರಗಳಿಗಿಲ್ಲ. ‌ ‌
  • ಹಾಲು ಮೊಸರು ತುಪ್ಪ ಗೆ ತುಳಸಿ ದರ್ಬೆ ಹಾಕಿ ಬಳಸಿ.ಇಂದು ನೀರು ಸಹ ಮುಖ್ಯ ಚೆಲ್ಲುವ ಬದಲು ತುಳಸಿ ಹಾಕಿಡಿ ಬಳಸಿ.ಮಿಕ್ಕ ಆಹಾರ ಪದಾರ್ಥಕ್ಕೂ ತುಳಸಿ ಬಳಸಿ
  • ಗ್ರಹಣ ಮೋಕ್ಷ ಕಾಲದ ನಂತರವೇ ಸ್ನಾನ, ಪೂಜೆ ಸಲ್ಲಿಸಿ, ಅಡುಗೆ ಮಾಡಿ, ಊಟ ಮಾಡಬೇಕು. ಗ್ರಹಣಕ್ಕಿಂತ ಮುಂಚೆ ಮಾಡಿಟ್ಟು ಅಥವಾ ಗ್ರಹಣಕಾಲದಲ್ಲಿ ಮಾಡಿಟ್ಟು ತಿನ್ನಬಾರದು. ‌
  • ಗ್ರಹಣ ಮೋಕ್ಷ ಕಾಲದ ನಂತರ ಅಗತ್ಯವಾಗಿ ಸ್ನಾನ ಮಾಡಲೇಬೇಕು. ಪವಿತ್ರ ಗಂಗಾಜಲ ಅಥವಾ ಶುದ್ದ ಜಲವನ್ನು ಮನೆಯ ಎಲ್ಲಾ ಭಾಗಗಳಲ್ಲಿಯೂ ಪ್ರೋಕ್ಷಿಸಬಹುದು.
Share This Article
Leave a comment