ED ಕಿರುಕುಳ ಸಂಸ್ಥೆ ಎಂದು ಮರುನಾಮಕರಣ : ಡಿ.ಕೆ ಸುರೇಶ್

Team Newsnap
1 Min Read
My brother has struggled - he should become CM: DK Suresh ನನ್ನ ಅಣ್ಣ ಕಷ್ಟ ಪಟ್ಟಿದ್ದಾರೆ - ಸಿಎಂ ಆಗಬೇಕು ಅಷ್ಟೇ : ಡಿಕೆ ಸುರೇಶ್

ಜಾರಿ ನಿರ್ದೇಶನಾಲಯ ಸಂಸ್ಥೆಗೆ ಕಿರುಕುಳ ಸಂಸ್ಥೆ ಎಂದು ಮರುನಾಮಕರಣ ಮಾಡಬೇಕು.

ಹೀಗೆಂದು ಹೇಳಿದವರು ಸಂಸದ ಡಿ.ಕೆ ಸುರೇಶ್. ಇಂದು ವಿಚಾರಣೆಗೂ ಮುನ್ನ ಸುದ್ದಿಗಾರರ ಜೊತೆ ಮಾತನಾಡಿ, ಅಧಿಕಾರಿಗಳು ಉದ್ದೇಶ ಪೂರ್ವಕವಾಗಿ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.ಮಂಡ್ಯದಲ್ಲಿ ಬಿಜೆಪಿಗೆ ನೆಲೆಯೇ ಇಲ್ಲ – ಜೆಡಿಎಸ್ ಮುಕ್ತ ಮಾಡಲು ಸಾದ್ಯವೆ : ನಿಖಿಲ್ ಕುಮಾರಸ್ವಾಮಿ

ನ್ಯಾಷನಲ್ ಹೆರಾಲ್ಡ್ ಪ್ರಕರಣ ಕ್ಕೆ ಸಂಬಂಧಿಸಿದಂತೆ, ಯಂಗ್ ಇಂಡಿಯಾಕ್ಕೆ ದೇಣಿಗೆ ನೀಡಿದ ವಿಚಾರದಲ್ಲಿ ಡಿ.ಕೆ ಸುರೇಶ್ ಅವರಿಗೆ ಎರಡನೇ ಬಾರಿಗೆ ಸಮನ್ಸ್ ನೀಡಲಾಗಿತ್ತು. ಸಮನ್ಸ್ ಹಿನ್ನಲೆಯಲ್ಲಿ ಇಂದು ದೆಹಲಿಯಲ್ಲಿರುವ ಇಡಿ ಕಚೇರಿಗೆ ಹಾಜರಾದರು.

ಇಡಿ ಕಿರುಕುಳ ನೀಡುವ ಸಂಸ್ಥೆಯಾಗಿದೆ, ಇಡಿ ಅನ್ನೋ ಹೆಸರು ಬದಲಿಸಿ ಕಿರುಕುಳ ಸಂಸ್ಥೆ ಮಾಡಬೇಕು, ರಾಜಕೀಯ ಕಾರಣಗಳಿಗೆ ಕಿರುಕುಳ ನೀಡುತ್ತಿದ್ದಾರೆ ಅನಿಸುತ್ತಿದೆ. ಕಳೆದ ಬಾರಿ ವಿಚಾರಣೆ ಎದುರಿಸಿದ್ದೆವು, ಆನ್ ಲೈನ್ ನಲ್ಲಿ ದಾಖಲೆಗಳನ್ನು ಸಲ್ಲಿಸುವುದಾಗಿ ಹೇಳಿದ್ದೆವು. ಆದರೂ ಮತ್ತೆ ವಿಚಾರಣೆಗೆ ಕರೆದಿದ್ದಾರೆ.

ಡಿ.ಕೆ ಶಿವಕುಮಾರ್ ಅವರಿಗೂ ಸಮನ್ಸ್ ನೀಡಿದ್ದರು. ಪೂರ್ವ ನಿಗದಿತ ಕಾರ್ಯಕ್ರಮ ಹಿನ್ನಲೆ ವಿಚಾರಣೆಗೆ ಬಂದಿಲ್ಲ. ವಿಚಾರಣೆಗೆ ಬರಲು ಇನ್ನೊಂದು ದಿನಾಂಕ ಕೇಳಿದ್ದಾರೆ. ಬೇರೆ ತನಿಖಾಧಿಕಾರಿಯಿಂದ ಸಮನ್ಸ್ ಬಂದಿದೆ. ತನಿಖಾಧಿಕಾರಿ ಬದಲಾಗಿರುವ ಬಗ್ಗೆ ವಿಚಾರಣೆ ಬಳಿಕ ಮಾಹಿತಿ ಕೊಡುತ್ತೇನೆ ಎಂದರು.

Share This Article
Leave a comment