ಮೈಸೂರು ಅರಮನೆ ನೋಡಬೇಕಾ ಕೊರೋನಾ ನೆಗೆಟಿವ್ ರಿಪೋರ್ಟ್ ತನ್ನಿ

Team Newsnap
1 Min Read

ಮೈಸೂರು ಅರಮನೆ ಪ್ರವೇಶಕ್ಕೆ ಕೊರೊನಾ ವೈರಸ್‌ ನೆಗೆಟಿವ್‌ ರಿಪೋರ್ಟ್‌ ಕಡ್ಡಾಯ ಮಾಡಿದ್ದಾರೆ.

ಬುಧವಾರ 6 ಜನ ಪ್ರವಾಸಿಗರಿಗೆ ಕೊರೊನಾ ಸೋಂಕು ದೃಢಪಟ್ಟ ಬಳಿಕ ಮೈಸೂರು ಅರಮನೆ ಮಂಡಳಿ ಈ ನಿರ್ಧಾರ ತೆಗೆದುಕೊಂಡಿದೆ.

ಅರಮನೆ ಸಿಬ್ಬಂದಿ ಮತ್ತು ಸಾರ್ವಜನಿಕರ ಸುರಕ್ಷತೆಯ ಈ ನಿಯಮ ಶುಕ್ರವಾರದಿಂದಲೇ ಜಾರಿಗೆ ಬರಲಿದೆ.

ಅರಮನೆಯ ಟಿಕೆಟ್‌ ಕೌಂಟರ್‌ ಬಳಿ ಪ್ರವಾಸಿಗರಿಗೆ ತ್ವರಿತ ಆಂಟಿಜೆನ್ ಟೆಸ್ಟ್ ನಡೆಸಲು ಹೆಚ್ಚಿನ ಸಂಖ್ಯೆಯ ತಂಡಗಳನ್ನು ನಿಯೋಜಿಸಲು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಅವರು ನೀಡುವ ಫಲಿತಾಂಶ ಆಧರಿಸಿ ಪ್ರೇಕ್ಷಕರನ್ನು ಅರಮನೆ ಒಳಗಡೆ ಬಿಡಲಾಗುವುದು. ನಮ್ಮ ಸಿಬ್ಬಂದಿಯ ಸುರಕ್ಷತೆ ಬಗ್ಗೆಯೂ ನಾವು ಗಮನಹರಿಸಬೇಕಾಗಿದೆ ಎಂದು ಮೈಸೂರು ಅರಮನೆ ಮಂಡಳಿಯ ಉಪ ನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ತಿಳಿಸಿದ್ದಾರೆ.

ಬುಧವಾರ ಅರಮನೆಗೆ ಭೇಟಿ ನೀಡಿದ್ದ 2,006 ಪ್ರವಾಸಿಗರ ಪೈಕಿ 127 ಮಂದಿಗೆ ಆಂಟಿಜೆನ್‌ ಟೆಸ್ಟ್‌ ನಡೆಸಲಾಗಿದೆ. ಅದರಲ್ಲಿ ಆರು ಪಾಸಿಟಿವ್‌ ಪ್ರಕರಣಗಳು ಕಂಡುಬಂದಿವೆ. ಅದರಂತೆ, ಮಂಗಳವಾರ ಬಂದಿದ್ದ 2,758 ಪ್ರವಾಸಿಗರ ಪೈಕಿ 98 ಜನರಿಗೆ ಪರೀಕ್ಷೆ ನಡೆದಿದ್ದು, 2 ಪಾಸಿಟಿವ್‌ ಪ್ರಕರಣಗಳು ಕಂಡುಬಂದಿವೆ. ಇದು ಅರಮನೆಯ ಸಿಬ್ಬಂದಿ ಮಾತ್ರವಲ್ಲದೆ, ಇತರ ಪ್ರವಾಸಿಗರಿಗೂ ದೊಡ್ಡ ಕಳವಳಕಾರಿ ಅಂಶವಾಗಿದೆ ಎಂದು ಅವರು ಹೇಳಿದ್ದಾರೆ.

Share This Article
Leave a comment