ಟಿಪ್ಪು ಸುಲ್ತಾನ್ ಒಬ್ಬ ಕ್ರೂರಿ ಆತ ಹುಲಿಯೂ ಅಲ್ಲ ಕರಡಿಯೂ ಅಲ್ಲ. ಸಿಂಹವೂ ಅಲ್ಲ : ಸಂಸದ ಪ್ರತಾಪ್‌ ಸಿಂಹ

Team Newsnap
1 Min Read

ಹಾಸನದ ಖಾಸಗಿ ಹೋಟೆಲ್ ಒಂದರಲ್ಲಿ ಮಾತನಾಡಿದ ಅವರು, ಟಿಪ್ಪು ಸುಲ್ತಾನ್‌ ಮಕ್ಕಳನ್ನು ಒತ್ತೆಯಾಗಿಟ್ಟು ತನ್ನ ಜೀವವನ್ನು ಉಳಿಸಿಕೊಂಡ ವ್ಯಕ್ತಿ. ಇನ್ನು ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ ಟಿಪ್ಪು ಸುಲ್ತಾನ್ ಎಲ್ಲಿ ಸಾವನ್ನಪ್ಪಿದ ? ಟಿಪ್ಪು ಸುಲ್ತಾನ್ ಯಾವ ರಣರಂಗದಲ್ಲಿ ಖಡ್ಗ ಹಿಡಿದು ಹೋರಾಟ ಮಾಡಿದ ? ಯಾವ ಕಾರಣಕ್ಕೆ ಆತನನ್ನು ಹುಲಿ ಎಂದು ಸಂಬೋಧಿಸುತ್ತೀರಾ? ಹುಲಿ ಕೋಟೆಯೊಳಗೆ ಸಾಯಲು ಸಾಧ್ಯವೇ? ಹಾಗಾಗಿ ಟಿಪ್ಪು ಸುಲ್ತಾನ್ ಒಬ್ಬ ಹುಲಿಯು ಅಲ್ಲ ಕರಡಿಯೂ ಅಲ್ಲ. ಸಿಂಹವೂ ಅಲ್ಲ. ಆತ ಒಬ್ಬ ಕ್ರೂರಿ ಮಾತ್ರ ಎಂದರು.

ಟಿಪ್ಪು ಸುಲ್ತಾನ್ ಒಬ್ಬ ಹುಲಿಯು ಅಲ್ಲ ಕರಡಿಯೂ ಅಲ್ಲ. ಸಿಂಹವೂ ಅಲ್ಲ. ಆತ ಒಬ್ಬ ಕ್ರೂರಿ ಮಾತ್ರ ಟಿಪ್ಪುವನ್ನು ಹುಲಿ ಅನ್ನೋದಕ್ಕೆ ಒಂದೇ ಒಂದು ಕಾರಣ ಕೊಡಿ. ಎಂದು ಕೊಡಗು – ಮೈಸೂರು ಸಂಸದ ಪ್ರತಾಪ್‌ ಸಿಂಹ ಹೇಳಿದರು.

ಯಾವುದೇ ವ್ಯಕ್ತಿಯನ್ನು ಬಂಧಿಸಿ ನಂತರ ಆತನಿಗೆ ಚೂರಿ ಹಾಕುವುದು ಚರ್ಮ ಸುಲಿಯುವುದು ಶೌರ್ಯ ಎನಿಸಿಕೊಳ್ಳುವುದಿಲ್ಲ. ಕ್ರೌರ್ಯ ಎನ್ನುತ್ತೇವೆ. ಮೈಸೂರಿನ ಮಹಾರಾಜರು ದೇಶಕ್ಕೆ ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ. ಅಂತಹ ವ್ಯಕ್ತಿಗಳನ್ನು ಹುಲಿಯನ್ನಬೇಕೆ ಹೊರತು ಭಾಗಮಂಡಲ ದೇವಸ್ಥಾನದ ಮೇಲೆ ಕತ್ತಿ ಬೀಸಿದ ವ್ಯಕ್ತಿಯನ್ನು ಹುಲಿ ಎನ್ನಲು ಸಾಧ್ಯವಿಲ್ಲ ಎಂದರು .

ಮೈಸೂರಿನ ವಿಶ್ವವಿದ್ಯಾಲಯ ತಂದಿರುವ ಇಂಡಿಯಾ ಎಂಬ ಪುಸ್ತಕದಲ್ಲಿ ಎಲ್ಲಿಯೂ ಕೂಡ ಟಿಪ್ಪು ಒಬ್ಬ ಹುಲಿ ಎಂದು ಪ್ರಸ್ತಾಪಿಸಿಲ್ಲ. ಹಾಗಾಗಿ ಟಿಪ್ಪು ಸುಲ್ತಾನ್ ಒಬ್ಬ ಹುಲಿ ಎನ್ನುವವರು ದಾಖಲೆಗಳಿದ್ದರೆ ನನಗೆ ತೋರಿಸಿ. ಎಂದು ಹೇಳಿದರು.

ಎಂಟನೇ ವಿಶ್ವ ಯೋಗ ದಿನದ ಅಂಗವಾಗಿ ಮೈಸೂರಿನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದು ಸುಮಾರು ಒಂದುವರೆ ಲಕ್ಷ ಜನರಿಂದ ಯೋಗ ಪ್ರದರ್ಶನ ಕಾರ್ಯಕ್ರಮ ನಡೆಯಲಿದೆ. ಆದರೆ ಮೈಸೂರಿನ ಅರಮನೆ ಮುಂಭಾಗದಲ್ಲಿ ಆಯೋಜನೆ ಮಾಡುವುದು ಅಥವಾ ರೇಸ್ ಕೋರ್ಸ್ ಆವರಣದಲ್ಲಿ ಆಯೋಜನೆ ಮಾಡುವುದು ಎಂಬ ಗೊಂದಲವಿತ್ತು ಅದನ್ನು ಪ್ರಧಾನ ಮಂತ್ರಿ ಕಾರ್ಯಾಲಯ ಅಂತಿಮವಾಗಿ ನಿರ್ಧಾರಮಾಡಲಿದ್ದು ಇದೊಂದು ಐತಿಹಾಸಿಕ ದಿನವಾಗಿ ಆಗಲಿದೆ ಎಂದರು.

Share This Article
Leave a comment