January 28, 2026

Newsnap Kannada

The World at your finger tips!

tippu

ಟಿಪ್ಪು ಕಾಲದ ಕೋಟೆಯ ಕಂದಕದಲ್ಲಿ ಅನಧಿಕೃತ ಕುಟೀರ ನಿರ್ಮಾಣ : ಪುರತತ್ವ ಇಲಾಖೆಯ ದಿವ್ಯ ನಿರ್ಲಕ್ಷ್ಯ

Spread the love

ಶ್ರೀರಂಗಪಟ್ಟಣದಲ್ಲಿ ಟಿಪ್ಪು ಕಾಲದ ಕಂದಕಕ್ಕೆ ಪ್ರಭಾವಿಗಳ ಕಂಟಕ ಎದುರಾಗಿದ್ದು, ಕೋಟೆಯೊಳಗಿನ ಕಂದಕದಲ್ಲಿ ಅನಧಿಕೃತ ಕುಟೀರ ನಿರ್ಮಾಣಗೊಂಡಿದ್ದರೂ ಪುರತತ್ವ ಇಲಾಖೆ ಇಲಾಖೆ ದಿವ್ಯ ನಿರ್ಲಕ್ಷ್ಯ ವಹಿಸಿದೆ.
ಪ್ರಾಚೀನ ಸ್ಮಾರಕಗಳ ರಕ್ಷಣೆಯ ಜವಾಬ್ದಾರಿ ಹೊತ್ತಿರುವ ಕೇಂದ್ರ ಪುರತತ್ವ ಇಲಾಖೆ ಐತಿಹಾಸಿಕ ಕೋಟೆ ಕೆಡವಿ ಅನಧಿಕೃತವಾಗಿ ಕುಟೀರ ನಿರ್ಮಿಸುತ್ತಿದ್ದರೂ ಅಧಿಕಾರಿಗಳು ಮೌನವಹಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅಲ್ಲದೇ ಪ್ರಭಾವಿಗಳ ಹಸ್ತಕ್ಷೇಪಕ್ಕೆ ಮಣಿದಿದೆಯೇನೋ ಎಂಬ ಅನುಮಾನ ಎದ್ದು ಕಾಣುತ್ತಿದ್ದು, ಸಂಬಂಧಪಟ್ಟವರು ಎಚ್ಚೆತ್ತು ಪ್ರಭಾವಿಗಳ ವಿರುದ್ದ ಕ್ರಮ ಕೈಗೊಂಡು ಐತಿಹಾಸಿಕ ಸ್ವಾರಕಗಳನ್ನು ಉಳಿಸಿ ರಕ್ಷಣೆ ಮಾಡುವ ಕೆಲಸ ತಕ್ಷಣವೇ ಆಗಬೇಕಿದೆ

error: Content is protected !!