ದುಬೈನಲ್ಲಿ ಇಂದಿನಿಂದ ಆರ್‍ಸಿಬಿ ತರಬೇತಿ ಶಿಬಿರ

Team Newsnap
1 Min Read

ದುಬೈ : ಐಪಿಎಲ್ ಹದಿಮೂರನೇ ಆವೃತ್ತಿಗಾಗಿ ಯುಎಇಗೆ ಬಂದಿಳಿದ ನಂತರ ಮೊದಲ 6 ದಿನಗಳ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದ ವಿರಾಟ್ ಕೊಹ್ಲಿ ನೇತೃತ್ವದ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡ ಇಂದಿನಿಂದ 3 ವಾರಗಳ ಕಾಲ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದು, ಆಟಗಾರರು ಇನ್ನು ಜೈವಿಕ-ಸುರಕ್ಷಾ ವಾತಾವರಣದೊಳಗೆ ಕಠಿಣ ಅಭ್ಯಾಸ ಪ್ರಾರಂಭಿಸಲಿದ್ದಾರೆ.
ಫಿಟ್ನೆಸ್ ಮತ್ತು ತರಬೇತಿಯ ಭಿನ್ನ ಹಂತಗಳನ್ನು ದಾಟಿಬಂದ ಆಟಗಾರರು ಕಳೆದ ಕೆಲ ತಿಂಗಳಿನಿಂ ವಿಭಿನ್ನವಾದ ವಾತಾವರಣದಲ್ಲಿ ದಿನಗಳನ್ನು ಕಳೆದಿದ್ದು, ಹೀಗಾಗಿ ಎಲ್ಲ ಆಟಗಾರರಿಗೆ ಅವರಿಗೆ ತಕ್ಕಂತೆ ಅಭ್ಯಾಸಗಳನ್ನು ನಡೆಸಲು ಅವಕಾಶ ಕಲ್ಪಿಸಲಾಗುವುದು. ಅಲ್ಲದೇ ಆಟಗಾರರ ದೈಹಿಕ, ಮಾನಸಿಕ, ಭಾವನಾತ್ಮಕ ವಿಚಾರಗಳ ಬಗ್ಗೆ ತಂಡದ ತರಬೇತಿ ಸಿಬ್ಬಂದಿ ಗಮನಹರಿಸಲಿದ್ದಾರೆ. ಈ ಮೂಲಕ ಅವರನ್ನು ಅತ್ಯುತ್ತಮ ಕ್ರಿಕೆಟ್ ಆಡಲು ಸಜ್ಜುಗೊಳಿಸಲಾಗುವುದು ಎಂದು ಆರ್‍ಸಿಬಿ ತಂಡದ ಕ್ರಿಕೆಟ್ ನಿರ್ದೇಶಕ ಮೈಕ್ ಹೆಸ್ಸನ್ ತಿಳಿಸಿದ್ದಾರೆ.
ಆರು ದಿನಗಳ ಕ್ವಾರಂಟೈನ್‍ನಲ್ಲಿ ಎಲ್ಲರ ವರದಿಯೂ ನೆಗೆಟಿವ್ ಬಂದಿರುವ ಹಿನ್ನೆಲೆಯಲ್ಲಿ ದುಬೈನಲ್ಲಿ ಬುಧವಾರದಿಂದಲೇ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಅಭ್ಯಾಸ ಆರಂಭಿಸುವ ಜೊತೆಗೆ ಟೂರ್ನಿಯ ಜೈವಿಕ-ಸುರಕ್ಷಾ ವಾತಾವರಣದೊಳಗೆ ಪ್ರವೇಶ ಪಡೆದಿದ್ದಾರೆ. ಕಿಂಗ್ಸ್ ಇಲೆವೆನ್ ಆಟಗಾರರಾಗಿರುವ ಕನ್ನಡಿಗ ಮಯಾಂಕ್ ಅಗರ್ವಾಲ್ ಮಾಸ್ಕ್ ಧರಿಸಿ ಅಭ್ಯಾಸಕ್ಕೆ ತೆರಳುತ್ತಿರುವ ಚಿತ್ರವನ್ನು ಟ್ವಿಟರ್‍ನಲ್ಲಿ ಪ್ರಕಟಿಸಿದ್ದಾರೆ.
ಅಲ್ಲದೇ, ಕೋಲ್ಕತ ನೈಟ್‍ರೈಡರ್ಸ್ ಅಬುಧಾಬಿಯಲ್ಲಿ ಅಭ್ಯಾಸ ಆರಂಭಿಸಿದೆ ಎನ್ನಲಾಗಿದ್ದು, ಆರ್‍ಸಿಬಿ ಜತೆಗೆ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್‍ಕಿಂಗ್ಸ್ ತಂಡಗಳ ಕ್ವಾರಂಟೈನ್ ಅವಧಿ ಬುಧವಾರ ಪೂರ್ಣಗೊಂಡಿದ್ದು, ಸಹ ಗುರುವಾರದಿಂದ ಅಭ್ಯಾಸ ಆರಂಭಿಸಲಿವೆ.

Share This Article
Leave a comment