INDvsENG – ವಿಶಾಖಪಟ್ಟಣದಲ್ಲಿ ಭಾರತಕ್ಕೆ 106 ರನ್ ಗೆಲುವು

Team Newsnap
1 Min Read

ವಿಶಾಖಪಟ್ಟಣದಲ್ಲಿ ನಡೆದ INDvsENG ಪಂದ್ಯದಲ್ಲಿ ಭಾರತ 106 ರನ್ ಅಂತರದ ಗೆಲುವು ಸಾಧಿಸಿದೆ. ಗೆಲುವಿಗೆ 399 ರನ್ ಗಳ ಸವಾಲು ಪಡೆದಿದ್ದ ಇಂಗ್ಲೆಂಡ್ 292 ರನ್ ಗಳಿಗೆ ಆಲೌಟಾಯಿತು.

3ನೇ ದಿನದಾಟದ ಅಂತ್ಯಕ್ಕೆ ಒಂದು ವಿಕೆಟ್ ನಷ್ಟಕ್ಕೆ 67 ರನ್ ಗಳಿಸಿದ್ದ ಇಂಗ್ಲೆಂಡ್ ಪರವಾಗಿ ಕ್ರಾಲಿ 73 ರನ್ ಗಳಿಸಿದರು. ಉಳಿದಂತೆ ಬೆನ್ ಫೋಕ್ಸ್ ಮತ್ತು ಬೌಲರ್ ಟಾಮ್ ಹಾರ್ಟ್ಲಿ ತಲಾ 36 ರನ್ ಗಳ ಕಾಣಿಕೆ ನೀಡಿದರು. ಬೆನ್ ಡಕೆಟ್, ಒಲಿ ಪೋಪ್, ಜಾನಿ ಬೇರಿಸ್ಟೋ ಆರಂಭ ಪಡೆದಾರದರೂ ದೊಡ್ಡ ಇನ್ನಿಂಗ್ಸ್ ಕಟ್ಟಲು ವಿಫಲರಾದರು.

ಭಾರತದ ಪರ ಜಸ್ಪ್ರೀತ್ ಬುಮ್ರಾ ಮತ್ತು ರವಿಚಂದ್ರನ್ ಅಶ್ವಿನ್ ಆಂಗ್ಲ ಬೌಲರ್ ಗಳನ್ನು ಕಟ್ಟಿ ಹಾಕಿದರು. ಇಬ್ಬರು ತಲಾ ಮೂರು ವಿಕೆಟ್ ಕಿತ್ತರು. ಉಳಿದಂತೆ ಮುಕೇಶ್ ಕುಮಾರ್, ಕುಲದೀಪ್ ಯಾದವ್ ಮತ್ತು ಅಕ್ಷರ್ ಪಟೇಲ್ ತಲಾ ಒಂದು ವಿಕೆಟ್ ಕಿತ್ತರು.

yasaswi jaiswal

ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 396 ರನ್ ಗಳಿಸಿದ್ದರೆ, ಇಂಗ್ಲೆಂಡ್ 253 ರನ್ ಮಾಡಿತ್ತು. ಎರಡನೇ ಇನ್ನಿಂಗ್ಸ್ ನಲ್ಲಿ ಭಾರತವು 255 ರನ್ ಮಾಡಿದ್ದರೆ ಇಂಗ್ಲೆಂಡ್ ತಂಡವು 292 ರನ್ ಗಳಿಗೆ ಆಲೌಟಾಯಿತು. ಲೋಕ ಸದನದಲ್ಲಿ ಅಕ್ರಮ ಪರೀಕ್ಷೆ ತಡೆ ಮಸೂದೆ ಪರಿಚಯ | Prevention of Unfair Means

ಭಾರತದ ಪರ ಮೊದಲ ಇನ್ನಿಂಗ್ಸ್ ನಲ್ಲಿ ದ್ವಿಶತಕ ಹೊಡೆದಿದ್ದರೆ, ಎರಡನೇ ಇನ್ನಿಂಗ್ಸ್ ನಲ್ಲಿ ಶುಭ್ಮನ್ ಗಿಲ್ ಶತಕ ಬಾರಿಸಿದ್ದರು. ಈ ಗೆಲುವಿನೊಂದಿಗೆ ಸರಣಿ 1-1 (INDvsENG) ರೊಂದಿಗೆ ಸಮಬಲಗೊಂಡಿದೆ. ಮೂರನೇ ಪಂದ್ಯವು ಫೆ.15ನಿಂದ ರಾಜ್ ಕೋಟ್ ನಲ್ಲಿ ನಡೆಯಲಿದೆ.

INDvsENG

cricket,india,sports
TAGGED:
Share This Article
Leave a comment