ಗುಂಡ್ಲುಪೇಟೆಯ ಬಳಿ ಜಮೀನಿನಲ್ಲಿ ಕೆಲಸ ಮಾಡುವ ವೇಳೆ ರೈತನ ಮೇಲೆ ಹುಲಿ ದಾಳಿ – ಪ್ರಾಣಾಪಾಯದಿಂದ ಪಾರು

Team Newsnap
1 Min Read

ರೈತನ ಮೇಲೆ ಹುಲಿ ದಾಳಿ ಮಾಡಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಗ್ರಾಮದಲ್ಲಿ ನಡೆದಿದೆ.

ಬಂಡೀಪುರ ಕಾಡಂಚಿನ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ರೈತ ನಾಗರಾಜ್ ಎಂಬುವವರ ಮೇಲೆ ಏಕಾಏಕಿ ಹುಲಿ ದಾಳಿ ಮಾಡಿದೆ.ಗುಜರಾತ್ ಚುನಾವಣೆ- ತಾಯಿಯ ಆಶೀರ್ವಾದ ಪಡೆದ ಮೋದಿಯಿಂದ – ನಾಳೆ ಮತದಾನ

ಕೂದಲೆಳೆ ಅಂತರದಲ್ಲಿ ರೈತ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಳೆದ ಎರಡು ವರ್ಷದ ಹಿಂದೆ ಇದೇ ಸ್ಥಳದಲ್ಲಿ ಇಬ್ಬರು ರೈತರನ್ನು ನರ ಭಕ್ಷಕ ಹುಲಿ ಬಲಿ ಪಡೆದಿತ್ತು.

ರೈತರ ಜಮೀನಿನಲ್ಲಿ ಹುಲಿ ಹಾವಳಿ ಹೆಚ್ಚಾಗಿದ್ದು, ‌ಗ್ರಾಮದ ಜನರಲ್ಲಿ ಮತ್ತಷ್ಟು ಆತಂಕ ಮನೆ ಮಾಡಿದೆ. ಇದೇ ನರ ಭಕ್ಷಕ ಹುಲಿ ನಿನ್ನೆ ಜಾನುವಾರುಗಳ ಮೇಲೆ ಏಕಾಏಕಿ ದಾಳಿ ಮಾಡಿತ್ತು. ಇದೀಗ ರೈತನ ಮೇಲೆ ಮತ್ತೆ ದಾಳಿ ಮಾಡಿದೆ.

Share This Article
Leave a comment