ಚಿಂತನಾ ಶೈಲಿಯ ಭ್ರಷ್ಟತೆ…….
ಧರ್ಮದ ಹುಳುಕುಗಳನ್ನು ಎತ್ತಿ ತೋರಿಸಿದರೆ ಧರ್ಮ ವಿರೋಧಿ ಎನ್ನುವಿರಿ,
ಆರ್ಥಿಕ ಅಸಮಾನತೆಯನ್ನು ಒತ್ತಿ ಹೇಳಿದರೆ ಪ್ರಗತಿ ವಿರೋಧಿ ಎನ್ನುವಿರಿ,
ಆಚರಣೆಗಳ ಮೌಡ್ಯಗಳನ್ನು ಬಿಚ್ಚಿ ತೋರಿಸಿದರೆ ಸಂಪ್ರದಾಯ ವಿರೋಧಿ ಎನ್ನುವಿರಿ,
ವರದಕ್ಷಿಣೆ ಕಾನೂನಿನ ದುರುಪಯೋಗದ ಬಗೆಗೆ ಮಾತನಾಡಿದರೆ ಮಹಿಳಾ ವಿರೋಧಿ ಎನ್ನುವಿರಿ,
ಅಸ್ಪೃಷ್ಯತಾ ಕಾನೂನಿನ ದುರ್ಬಳಕೆ ಬಗೆಗೆ ಮಾತನಾಡಿದರೆ ದಲಿತ ವಿರೋಧಿ ಎನ್ನುವಿರಿ,
ಜಾತಿಯಿಂದಾಗುವ ಅವಮಾನಗಳನ್ನು ಪ್ರಶ್ನಿಸಿದರೆ ಜಾಣ ಕಿವುಡರಾಗಿ ಜಾತಿಯ ಅಮಾನವೀಯ ಸಮರ್ಥನೆಗೆ ಇಳಿಯುವಿರಿ,
ದೇಶದೊಳಗಿನ ಬಡತನ ದಾರಿದ್ಯಗಳನ್ನು ಎತ್ತಿ ಹಿಡಿದರೆ ದೇಶದ್ರೋಹಿ ಎನ್ನುವಿರಿ,
ಊಟ, ಬಟ್ಟೆಯ ಸ್ವಾತಂತ್ರ್ಯ ಪ್ರಶ್ನಿಸಿದರೆ ಸ್ವೇಚ್ಚಾಚಾರಿ ಎನ್ನುವಿರಿ,
ಪ್ರಶ್ನಿಸದೆ ಏನನ್ನೂ ಒಪ್ಪಿಕೊಳ್ಳಬಾರದು ಎನ್ನುವಿರಿ,
ಪ್ರಶ್ನಿಸಿದರೆ ಅಧಿಕ ಪ್ರಸಂಗಿ ಎನ್ನುವಿರಿ,
ಸರ್ವಧರ್ಮ ಸಹಿಷ್ಣುತೆಯ ಬಗ್ಗೆ ಹೊಗಳುವಿರಿ ಮೇಲ್ನೋಟಕ್ಕೆ,
ಒಳಗೆ ಇತರೆ ಧರ್ಮಗಳನ್ನು ದ್ವೇಷಿಸುವಿರಿ,
ಮಾತೃಭಾಷೆ ಶ್ರೇಷ್ಠ ಎನ್ನುವಿರಿ, ಅದು ನಿಜ,
ಆದರೆ ನಿಮ್ಮ ಭಾಷೆ ಅತಿ ಶ್ರೇಷ್ಠ ಎನ್ನುವಿರಿ, ಅದು ಹೇಗೆ,
ಮುಕ್ತ ಸ್ವಾತಂತ್ರ್ಯದ, ಸಹಿಷ್ಣು ಸಮಾಜದಲ್ಲಿ ನಿಜವಾಗಿ ನಾವಿದ್ದೇವೆಯೆ,
ನನಗೇನೂ ಆ ಬಗೆಗೆ ಸಾಕಷ್ಟು ಅನುಮಾನ ಗೊಂದಲಗಳಿವೆ.
,
ಭ್ರಮೆಗಳನ್ನು ಸೃಷ್ಟಿಸಿ, ವಾಸ್ತವತೆಯನ್ನು ಮರೆಮಾಚಿ,
ಆತ್ಮಚಕ ಸಮಾಜ ಸೃಷ್ಟಿಯಾಗಿದೆ ಎನಿಸುತ್ತಿದೆ.
ಈಗಲೂ ಕಾಲ ಮಿಂಚಿಲ್ಲ. ನಿಜ ಜ್ಞಾನದ ಹೆಬ್ಬಾಗಿಲು ತೆರೆದರೆ ವಾಸ್ತವಾಂಶ ಗೋಚರಿಸುತ್ತದೆ.
ಆ ಕಾಲ ಬೇಗ ಬರಲಿ ಎಂಬ ನಿರೀಕ್ಷೆಯಲ್ಲಿ ನಿಮ್ಮೊಂದಿಗೆ ……..,
ಏಕೆಂದರೆ,
ಪ್ರತಿಯೊಂದು ಜೀವಿಗಳಲ್ಲೂ ಭಾವನೆಗಳ ಪ್ರವಾಹ ಸದಾ ಹರಿಯುತ್ತಿರುತ್ತದೆ.
ಇನ್ನು ಮನುಷ್ಯರಲ್ಲಂತೂ ಗಂಡು ಹೆಣ್ಣಿನ ಬೇದಗಳಿಲ್ಲದೆ ಭಾವನೆಗಳದೇ ಸಾಮ್ರಾಜ್ಯ.
ಹಿಂದೆ ಅಕ್ಷರ ಜ್ಞಾನವಿಲ್ಲದ ಜನರು ಜಾನಪದ ಹಾಡು ಕಥೆಗಳ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದರು.
ಅಕ್ಷರ ಲಿಪಿಯ ಸಂಶೋದನೆಯೊಂದಿಗೆ ಓದು ಬರಹ ಸುಲಭವಾಯಿತು.
ಭಾವನೆಗಳ ವ್ಯಕ್ತಪಡಿಸುವಿಕೆ ಕಥೆ, ಕವಿತೆ, ಕಾದಂಬರಿ ಇತ್ಯಾದಿ ಅನೇಕ ರೂಪಗಳಲ್ಲಿ ಹೊರ ಹೊಮ್ಮಲ್ಪಟ್ಟಿತು.
ಸೃಷ್ಟಿಯ ಎಲ್ಲವೂ ಬರವಣಿಗೆಯ ವಸ್ತುವಾಯಿತು.
ಅನುಭವಗಳು, ಅನಿಸಿಕೆಗಳು, ವಾಸ್ತವಗಳು, ಆದರ್ಶಗಳು, ಕಲ್ಪನೆಗಳು ಎಲ್ಲವೂ ಬರಹರೂಪಕ್ಕಿಳಿಯಿತು ಮತ್ತು ಅದರಲ್ಲಿ ಅನುಸರಿಸಿದ್ದ, ಅನುಸರಿಸುತ್ತಿರುವ, ಅನುಸರಿಸಬೇಕಾದ ಎಲ್ಲಾ ಜೀವನ ವಿಧಾನಗಳು ಒಳಗೊಂಡಿರುತ್ತಿದ್ದವು.
ಅದನ್ನು ಬರೆಯುತ್ತಿದ್ದವರು ತೀರಾ ಕಡಿಮೆ ಮತ್ತು ನುಡಿದಂತೆ ನಡೆಯುವ ಜನರೇ ಹೆಚ್ಚಿದ್ದರು.
ಬದುಕು ಬರಹ ಸಾಮಾನ್ಯವಾಗಿ ಒಂದೇ ಆಗಿತ್ತು ಮತ್ತು ವಾಸ್ತವವು ಆಗಿದ್ದಿತು.
ಆದರೆ ಆಧುನಿಕ ಶಿಕ್ಷಣ ಪದ್ಧತಿ ಪ್ರಾರಂಭವಾದ ಮೇಲೆ ಬದುಕು ಬರಹದ ಅಂತರ ಜಾಸ್ತಿಯಾಯಿತು.
ಬದುಕಿದಂತೆ ಬರೆಯಬೇಕಿಲ್ಲ ಬರೆದಂತೆ ಬದುಕಬೇಕಿಲ್ಲ ಎಂಬ ಆತ್ಮವಂಚಕ ಮನಸ್ಸು ಬಹುತೇಕರಲ್ಲಿ ಮೂಡಿತು.
ಬರಹಗಳ ದಂಧೆ ಶುರುವಾಯಿತು. ಅಕ್ಷರದ ಅಹಂಕಾರ ಹೆಚ್ಚಾಯಿತು.
ಹೊಟ್ಟೆ ಪಾಡನ್ನೂ ಮೀರಿ ಬರಹ ಆತ್ಮತೃಪ್ತಿಗೆ, ಕ್ರಾಂತಿಗೆ, ಬದಲಾವಣೆಗೆ ನಾಂದಿ ಹಾಡಿ
“ಖಡ್ಗ ಕ್ಕಿಂತ ಲೇಖನಿ ಹರಿತ ” ಎಂಬಂತಾದರೂ, ಮುಂದೆ ಅಧಿಕಾರ, ಅಂತಸ್ತು, ಭಟ್ಟಂಗಿತನ, ದುಷ್ಟತನ, ಚಾಕಚಕ್ಯತೆಯಿಂದ ಸಮಾಜವನ್ನು ಒಡೆಯುವ ಸಾಧನವೂ ಆಯಿತು.
ಇನ್ನು ಇತ್ತೀಚಿನ ಆಧುನಿಕ ಮಾಧ್ಯಮಗಳಂತೂ ಮನಸ್ಸಗಳನ್ನು ಹೊಡೆದು ಚೂರು ಚೂರು ಮಾಡಿ
ಭಸ್ಮಾಸುರನಂತೆ ಜನರ ಭಾವನೆಗಳನ್ನೇ ನಿಯಂತ್ರಿಸುವ, ಪ್ರಚೋದಿಸುವ ಕೊನೆಗೆ ತಮ್ಮ ನಾಶಕ್ಕೆ ತಾವೇ ಕಾರಣವಾಗುವಂತೆ ಬೆಳೆದು ನಿಂತಿವೆ.
ಬದುಕು ಮತ್ತು ಬರಹಗಳು ಬೇರೆ ಬೇರೆಯಾಗಿ ಬಹಳ ಕಾಲವಾಗಿದೆ.
ಅದನ್ನು ಸಮರ್ಥಿಸಲೂ ವಿಕೃತ ವಿಚಾರಧಾರೆಳು ಸೃಷ್ಟಿಯಾಗಿವೆ.
ಇದು ತೀರಾ ಅಪಾಯಕಾರಿ ಬೆಳವಣಿಗೆ.
ಆತ್ಮೀಯರೆ, ಬದುಕು ಮತ್ತು ಬರಹ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿರುವ ಇಂದಿನ ಸಮಯದಲ್ಲಿ ಅತ್ಯಂತ
ತಾಳ್ಮೆಯಿಂದ ನಾವೆಲ್ಲರೂ ಅದನ್ನು ಸಾಧ್ಯವಾದ ಮಟ್ಟಿಗೆ ಹತ್ತಿರ ತರಲು ಪ್ರಯತ್ನಿಸಬೇಕಿದೆ,
ನಮ್ಮ ಬರಹ ನಮ್ಮ ಬದುಕನ್ನು ಪ್ರತಿಬಿಂಬಿಸುವುದು ಬಹಳ ಕಷ್ಟವಾದರೂ ಆದಷ್ಟು ಹತ್ತಿರ ಇರಬೇಕಿದೆ.
ವಾಸ್ತವದಿಂದ ದೂರವಾದ ಯಾವ ಬರಹಗಳೂ ದೀರ್ಘಕಾಲ ಉಳಿಯುವುದಿಲ್ಲ ಮತ್ತು ಆತ್ಮವಂಚಕ ಮನಸ್ಸುಗಳು ಸಮಾಜ ಕಂಟಕವೇ.
ಪ್ರೀತಿ, ಪ್ರೇಮ, ಕುಟುಂಬ, ದೇಶ, ಧರ್ಮ, ರಾಜಕೀಯ ಇತ್ಯಾದಿ ಯಾವ ವಿಷಯವೇ ಆಗಿರಲಿ ಬರಹ ಮತ್ತು ಬದುಕು ಹತ್ತಿವಾಗಿರಲಿ.
ರಮ್ಯತೆ, ಮನರಂಜನೆ ,ಕಾಲ್ಪನಿಕತೆಗಳು
ದಾರಿ ತಪ್ಪಿಸದಿರಲಿ.
ಇದಕ್ಕಾಗಿ ನಾವೆಲ್ಲಾ ಪ್ರಯತ್ನಿಸೋಣ………
- ವಿವೇಕಾನಂದ ಹೆಚ್ ಕೆ
- ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಬಿಡುಗಡೆ
- ಮೈಸೂರಿನ ಪ್ರಮುಖ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರು: ಪಾಲಿಕೆ ತೀರ್ಮಾನಕ್ಕೆ ಆಕ್ಷೇಪಣೆಗಳು
- ಸಿ.ಟಿ. ರವಿ ಪ್ರಕರಣ CID ಗೆ ಹಸ್ತಾಂತರ: ಗೃಹ ಸಚಿವ ಜಿ. ಪರಮೇಶ್ವರ್ ಸ್ಪಷ್ಟನೆ
- ಶಾಲಾ ಕೊಠಡಿಯಲ್ಲಿ ಯುವತಿಯ ಅತ್ಯಾಚಾರ: ಆರೋಪಿ ಬಂಧನ
- ಡಿ.ಕೆ. ಸುರೇಶ್ ತಂಗಿ ಎಂದು ಹೇಳಿಕೊಂಡು 8.41 ಕೋಟಿ ಚಿನ್ನಾಭರಣ ವಂಚನೆ: ಎಫ್ಐಆರ್ ದಾಖಲು
More Stories
ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ