ದೇಶದ ಉಷ್ಣ ವಿದ್ಯುತ್‌ ಸ್ಥಾವರಗಳಿಗೆ ಕಲ್ಲಿದ್ದಲಿನ ಪೂರೈಕೆ ಪ್ರಮಾಣ ಹೆಚ್ಚಳ -ಸಚಿವ ಜೋಶಿ

Team Newsnap
1 Min Read

ದೇಶದ ಉಷ್ಣ ವಿದ್ಯುತ್‌ ಸ್ಥಾವರಗಳಿಗೆ ಕಲ್ಲಿದ್ದಲಿನ ಪೂರೈಕೆ ಪ್ರಮಾಣವನ್ನು ಹೆಚ್ಚಿಸಲಾಗಿದೆ ಎಂದು ಕೇಂದ್ರ ಕಲ್ಲಿದ್ದಲು ಖಾತೆ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.

sumaravi conventional hall

ನಿನ್ನೆ 2 ದಶಲಕ್ಷ ಟನ್‌ಗಿಂತಲೂ ಅಧಿಕ ಪ್ರಮಾಣದ ಕಲ್ಲಿದ್ದಲು ಪೂರೈಸಲಾಗಿದೆ. ಕೇಂದ್ರ ಸರ್ಕಾರಿ ಸ್ವಾಮ್ಯದ ಕೋಲ್ ಇಂಡಿಯಾ ಲಿಮಿಟೆಡ್‌ನ ಗಣಿಗಳೂ ಸೇರಿದಂತೆ ವಿವಿಧ ಮೂಲಗಳಿಂದ ಕಲ್ಲಿದ್ದಲು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಟ್ವಿಟ್ ನಲ್ಲಿ ಹೇಳಿದ್ದಾರೆ

ಪೂರೈಕೆ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸಿ ಉಷ್ಣ ವಿದ್ಯುತ್‌ ಸ್ಥಾವರಗಳಲ್ಲಿ ಅಗತ್ಯ ಪ್ರಮಾಣದ
ಇನ್ನು ಮಳೆಗಾಲ ಅಂತ್ಯಗೊಳ್ಳುತ್ತಿದ್ದಂತೆಯೇ ಕಲ್ಲಿದ್ದಲು ಉತ್ಪಾದನೆ ಪ್ರಮಾಣ ಹೆಚ್ಚಲಿದೆ, ವಿದ್ಯುತ್‌ ಅಭಾವ ನೀಗುತ್ತದೆ ಅಂತ ತಿಳಿಸಿದರು

ಇದೇ ತಿಂಗಳೊಳಗೆ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲ್ಲು ಲಭ್ಯತೆ ಸುಧಾರಣೆಯಾಗಲಿದೆ ಅಂತ ಐಸಿಆರ್​ಎ ತಿಳಿಸಿದೆ.

ಉಷ್ಣ ಸ್ಥಾವರಗಳಲ್ಲಿ ದಿನದಿಂದ ದಿನಕ್ಕೆ ಕ್ರಮೇಣವಾಗಿ ಕಲ್ಲಿದ್ದಲಿನ ಕೊರತೆ ಉಂಟಾಗಿತ್ತು. ಸದ್ಯ ಕಲ್ಲಿದ್ದಲು ಉತ್ಪಾದನೆ ಮತ್ತು ಪೂರೈಕೆ ಮಟ್ಟವೂ ಶೀಘ್ರವೇ ವೃದ್ಧಿಸಲಿದ್ದು, ನವೆಂಬರ್ ತಿಂಗಳಿಂದ ಅಗತ್ಯವಾದ ಇಂಧನ ಬೇಡಿಕೆಯ ಬಗ್ಗೆ ಸಮನ್ವಯತೆ ಸಾಧಿಸಲಾಗುವುದು ಎಂದು ಐಸಿಆರ್​ಎ ಹಿರಿಯ ಉಪಾಧ್ಯಕ್ಷ ಮತ್ತು ತಂಡದ ಮುಖ್ಯಸ್ಥ ಸವ್ಯಸಾಚಿ ಮಜುಂದಾರ್ ತಿಳಿಸಿದ್ದಾರೆ.

Share This Article
Leave a comment