ಆಂಧ್ರದ ಕಡಪ ಮೂಲದ ಸಿವಿಲ್ ಎಂಜಿನಿಯರ್ ಒಬ್ಬನನ್ನು ಬುಲೆಟ್ ಬೈಕ್ಗಳ ಕಳ್ಳತನ ಆರೋಪದ ಮೇಲೆ ಬಂಡೆಪಾಳ್ಯ ಪೊಲೀಸರು ಬಂಧಿಸಿದ್ದಾರೆ.
ಕಳ್ಳನ ಹೆಸರು ಬಹಿರಂಗಗೊಂಡಿಲ್ಲ. ಸಿವಿಲ್ ಎಂಜಿನಿಯರಿಂಗ್ ಪದವಿ ಪಡೆದುಕೊಂಡಿದ್ದ ಕಳ್ಳ, ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದ.
ಸಂದರ್ಶನದಲ್ಲಿ ಫೇಲ್ ಆಗಿದ್ದರೂ . ಆಂಧ್ರದ ತನ್ನ ಊರಿನಲ್ಲಿ ಕೆಲಸ ಸಿಕ್ಕಿದೆ ಎಂದು ಬೆಂಗಳೂರಿಗೆ ಆಗಾಗ ಬರುತ್ತಿದ್ದ ಎನ್ನಲಾಗಿದೆ.
ಬೆಂಗಳೂರಿನ ಪಿಜಿ ಒಂದರಲ್ಲಿ ವಾಸವಿದ್ದ ಎಂಜಿನಿಯರ್, ರಾಯಲ್ ಎನ್ಫೀಲ್ಡ್ ಬೈಕ್ಗಳನ್ನ ಕಳ್ಳತನ ಮಾಡೋದನ್ನು ರೂಢಿಸಿಕೊಂಡಿದ್ದ.
ಬೆಂಗಳೂರಿಂದ ಆಂಧ್ರಕ್ಕೆ ಹೋಗುವಾಗ ಬೆಂಗಳೂರಲ್ಲಿ ಬೈಕ್ ಕದ್ದುಕೊಂಡು ಹೋಗುತ್ತಿದ್ದ. ಅದನ್ನು ಅಲ್ಲಿ ಮಾರಾಟ ಮಾಡಿ, ಅಲ್ಲಿಂದ ಬರುವಾಗ ಮತ್ತೊಂದು ಬುಲೆಟ್ ಕದ್ದುಕೊಂಡು ಬರುತ್ತಿದ್ದ ಅಲ್ಲಿ ಕದ್ದ ಬುಲೆಟ್ ಬೈಕ್ ಅನ್ನ ಬೆಂಗಳೂರಲ್ಲಿ ಮಾರಾಟ ಮಾಡಿ ಹಣ ಪಡೆದುಕೊಳ್ತಿದ್ದ ಎನ್ನಲಾಗಿದೆ.
ಬಂಡೆಪಾಳ್ಯ ಪೊಲೀಸರು ಬಂಧಿತನಿಂದ 15 ಲಕ್ಷಕ್ಕೂ ಅಧಿಕ ಮೌಲ್ಯದ 10 ಬುಲೆಟ್ ಬೈಕ್ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
- ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ: ಬೆಂಗಳೂರು ಸೇರಿ 21 ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ
- ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ವಿಧಿವಶ
- ಹಾಲಿನ ದರ ಏರಿಕೆ? ಶೀಘ್ರದಲ್ಲೇ ಕೆಎಂಎಫ್ ನಿರ್ಣಯ
- ಮೈಸೂರಿನ ಪ್ರಿನ್ಸೆಸ್ ರಸ್ತೆಗೆ ಸಿದ್ದರಾಮಯ್ಯ ಹೆಸರು: ಪ್ರತಾಪ್ ಸಿಂಹ-ಯದುವೀರ್ ನಡುವೆ ವಾಕ್ಸಮರ
- ವಾರಕ್ಕೆ 70 ಗಂಟೆ ಕೆಲಸದ ಮೇಲೆ ಉದ್ಯಮಿ ನಮಿತಾ ಥಾಪರ್ ಪ್ರತಿಕ್ರಿಯೆ
More Stories
ಸಿಲಿಂಡರ್ ಸ್ಫೋಟ ಪ್ರಕರಣ: ಇಬ್ಬರು ಅಯ್ಯಪ್ಪ ಮಾಲಾಧಾರಿಗಳ ದುರ್ಮರಣ
ಸಂಸತ್ ಭವನದ ಬಳಿಯ ದಾರುಣ ಘಟನೆ: ವ್ಯಕ್ತಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನ
ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ !