ತಿರುಪತಿ ಭಕ್ತರ ಪಾದಯಾತ್ರೆಗೆ ಶ್ರೀವಾರಿ ಮೆಟ್ಟಿಲು ಸಿದ್ಧ

Team Newsnap
1 Min Read
Second temple of 'Tirupati Thimmappa' opening in Chennai from March 17 ಮಾರ್ಚ್ 17 ರಿಂದ ಚೆನ್ನೈನಲ್ಲಿ ʻತಿರುಪತಿ ತಿಮ್ಮಪ್ಪʼನ ಎರಡನೇ ದೇವಾಲಯ ಪ್ರಾರಂಭ

ತಿರುಪತಿಗೆ ಪಾದಯಾತ್ರೆ ಮೂಲಕ ಹೋಗುವ ಭಕ್ತರಿಗೆ ತಿರುಪತಿ ಶ್ರೀವಾರಿ ಮೆಟ್ಟಿಲು ಮಾರ್ಗ ಪುನಾರಂಭಗೊಂಡಿದೆ. ಕಳೆದ ವರ್ಷದ ನವೆಂಬರ್‌ನಲ್ಲಿ ಸುರಿದ ಮಳೆಯಿಂದ ಪಾದಚಾರಿ ಮಾರ್ಗದ ಮೆಟ್ಟಿಲುಗಳಿಗೆ ಹಾನಿಯಾಗಿ ಈ ಮಾರ್ಗ ಬಂದ್ ಆಗಿತ್ತು.

ಮೆಟ್ಟಿಲುಗಳ ದುರಸ್ತಿ ಕಾರ್ಯ ಈಗ ಪೂರ್ಣಗೊಂಡಿದ್ದು ಗುರುವಾರ ಮೆಟ್ಟಿಲುಗಳನ್ನು ಸಾರ್ವಜನಿಕರ ಪ್ರವೇಶಕ್ಕೆ ಉದ್ಘಾಟಿಸಲಾಗಿದೆ. ತಿರುಪತಿಗೆ ಪಾದಯಾತ್ರೆ ಮೂಲಕ ದೇವರ ದರ್ಶನಕ್ಕೆ ಹೋಗುವವರಿಗೆ ಅನುಕೂಲವಾಗಿದೆ.

2021ರ ನವೆಂಬರ್‌ನಲ್ಲಿ ಬಂಗಾಳಕೊಲ್ಲಿಯಲ್ಲಿ ಉಂಟಾಗಿದ್ದ ವಾಯುಭಾರ ಕುಸಿತದಿಂದ ಭಾರೀ ಮಳೆಯಾಗಿತ್ತು. ತಿರುಪತಿ, ನೆಲ್ಲೂರು, ತಿರುಮಲ ಬೆಟ್ಟ, ಘಾಟ್ ರಸ್ತೆಗಳು ಸಂಪೂರ್ಣವಾಗಿ ಬಂದ್ ಆಗಿದ್ದವು. ದೇಗುಲ ಸಂಪೂರ್ಣವಾಗಿ ಜಲಾವೃತಗೊಂಡು ವಿಶ್ವತ ಅತ್ಯಂತ ಶ್ರೀಮಂತ ದೇವರಾದ ತಿರುಪತಿ ತಿಮ್ಮಪ್ಪನ ದೇಗುಲದ ಬಾಗಿಲು ಮುಚ್ಚವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.

.ಪಾದಾಚಾರಿ ಮಾರ್ಗ ಓಪನ್ :

ಪಾದಾಚಾರಿ ಮಾರ್ಗದಲ್ಲಿ ಎಲ್ಲೆಲ್ಲಿ ಮೆಟ್ಟಿಲುಗಳಿಗೆ ಹಾನಿಯಾಗಿತ್ತು ಅವುಗಳನ್ನು ಸಂಪೂರ್ಣ ದುರಸ್ಥಿ ಮಾಡಲಾಗಿದೆ. ಮಾರ್ಗ ಉದ್ಘಾಟನೆಗೂ ಮುನ್ನ 20 ಕಿ. ಮೀ. ದೂರದಲ್ಲಿರುವ ಶ್ರೀವಾರಿಮೆಟ್ಟುವಿನಲ್ಲಿ ನಡೆದ ಪೂಜೆಯಲ್ಲಿ ಟಿಟಿಡಿ ಅಧ್ಯಕ್ಷ ವೈ. ವಿ. ಸುಬ್ಬಾರೆಡ್ಡಿ, ಕಾರ್ಯನಿರ್ವಹಣಾಧಿಕಾರಿ ಕೆ. ಎಸ್. ಜವಾಹರರೆಡ್ಡಿ ಹಾಗೂ ಹೆಚ್ಚುವರಿ ಇಒ ಎ. ವಿ .ಧರ್ಮಾರೆಡ್ಡಿ ಭಾಗವಹಿಸಿದ್ದರು.

Share This Article
Leave a comment