ಹಿಂದುತ್ವದಲ್ಲೇ ಬ್ರಾಹ್ಮಣತ್ವವಿದೆ; ಅಗ್ಗದ ಪ್ರಚಾರಕ್ಕಾಗಿ ನಟ ಚೇತನ್ ವಿವಾದಿತ ಹೇಳಿಕೆ – ಪೇಜಾವರ ಶ್ರೀಗಳು

Team Newsnap
1 Min Read
There is Brahmanism; Actor Chetan's Controversial Statement For Cheap Promotion – Page Mr ಹಿಂದುತ್ವದಲ್ಲೇ ಬ್ರಾಹ್ಮಣತ್ವವಿದೆ; ಅಗ್ಗದ ಪ್ರಚಾರಕ್ಕಾಗಿ ನಟ ಚೇತನ್ ವಿವಾದಿತ ಹೇಳಿಕೆ – ಪೇಜಾವರ ಶ್ರೀಗಳು

ಹಿಂದುತ್ವದಲ್ಲೇ ಬ್ರಾಹ್ಮಣತ್ವವೂ ಇದೆ. ಆದರೆ ನಟ ಚೇತನ್ ಅಗ್ಗದ ಪ್ರಚಾರಕ್ಕಾಗಿ ಕಾಂತಾರ ಸಿನಿಮಾ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂದು ಪೇಜಾವರ ಶ್ರೀಗಳು ಕಿಡಿಕಾರಿದ್ದಾರೆ.

ಮಂಡ್ಯದ ಮದ್ದೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಶ್ರೀಗಳು, ಚೀಪ್ ಪಬ್ಲಿಸಿಟಿಗೋಸ್ಕರ ಚೇತನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ನಾವು ಯಾವುದಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ. ಅವರವರ ನಂಬಿಕೆ ಆಚರಣೆಗಳನ್ನ ವಿರೋಧಿಸುವುದು ತಪ್ಪು. ಕೆಆರ್‌ಎಸ್‌ ಬೃಂದಾವನ ಉದ್ಯಾನವನದಲ್ಲಿ ಚಿರತೆ ಪ್ರತ್ಯಕ್ಷ : ಪ್ರವಾಸಿಗರಿಗೆ ನಾಳೆಯಿಂದ ನಿರ್ಬಂಧ

ಅದು ಯಾವ ನೆಲೆಯಲ್ಲಿ ಮಾತನಾಡುತ್ತಿದ್ದಾರೆಯೇನೊ ನನಗೆ ಅರ್ಥವಾಗ್ತಿಲ್ಲ. ಎಲ್ಲವೂ ಅವರು ನೋಡುವ ದೃಷ್ಟಿಕೋನದಲ್ಲಿ ಅಡಗಿರುತ್ತದೆ ಎಂದು ತಿಳಿಸಿದ್ದಾರೆ.

ಹಿಂದುತ್ವ ಹಾಗೂ ಬ್ರಾಹ್ಮಣತ್ವ ಬೇರೆ ಬೇರೆ ಅಲ್ಲ. ಹಿಂದುತ್ವ ವಿಶಾಲವಾದದ್ದು, ಅದರೊಳಗೇ ಬ್ರಾಹ್ಮಣತ್ವವೂ ಬರುತ್ತದೆ ಎಂದು ಹೇಳಿದ್ದಾರೆ.

Share This Article
Leave a comment