ಕೆಆರ್‌ಎಸ್‌ ಬೃಂದಾವನ ಉದ್ಯಾನವನದಲ್ಲಿ ಚಿರತೆ ಪ್ರತ್ಯಕ್ಷ : ಪ್ರವಾಸಿಗರಿಗೆ ನಾಳೆಯಿಂದ ನಿರ್ಬಂಧ

Team Newsnap
1 Min Read

ಕೆಆರ್‌ಎಸ್‌ ಬೃಂದಾವನ ಉದ್ಯಾನವನದ ಸುತ್ತ ಚಿರತೆ ಪ್ರತ್ಯಕ್ಷವಾಗಿದೆ. ಈ ನಿಟ್ಟಿನಲ್ಲಿ ಬೃಂದಾವನಕ್ಕೆ ಪ್ರವಾಸಿಗರು ಆಗಮಿಸದಂತೆ ನಿರ್ಬಂಧ ಹೇರಲಾಗಿದೆ ಸ್ಥಳೀಯ ಜನರಲ್ಲಿ ಆತಂಕ ಹೆಚ್ಚಾಗಿದೆ. ಚಿರತೆ ಸೆರೆ ಹಿಡಿಯುವುದಕ್ಕೆ ಈಗಾಗಲೇ ಕ್ರಮ ಕೈಗೊಳ್ಳಲಾಗುತ್ತಿದೆ.

ಮಂಡ್ಯ ಜಿಲ್ಲೆಯ ಕೃಷ್ಣ ರಾಜ ಸಾಗರ ಅಣೆಕಟ್ಟೆಯ ಬೃಂದಾವನ ಉದ್ಯಾನವನವು ಪ್ರತಿವರ್ಷ ಎರಡು ದಶಲಕ್ಷ ಪ್ರವಾಸಿಗರನ್ನು ಆಕರ್ಷಿಸುತ್ತದೆ ಹಾಗಾಗಿ ವೀಕೆಂಡ್‌ನಲ್ಲಿ ಕೆಆರ್‌ಎಸ್‌ ಪಾರ್ಕ್ ಗೆ ಜನರು ಆಗಮಿಸುತ್ತಿರುತ್ತಾರೆ. ಚಿರತೆ ಪ್ರತ್ಯಕ್ಷ ಹಿನ್ನೆಲೆ ನಾಳೆಯಿಂದ ನಿರ್ಬಂಧ ಹೇರಲಾಗಿದೆ .

60 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ, ಉತ್ತಮವಾಗಿ ನಿರ್ವಹಿಸಲಾದ ಸಸ್ಯಶಾಸ್ತ್ರೀಯ ಉದ್ಯಾನ. ನಡು ಭಾಗದಲ್ಲಿ ನೀರಿನ ಕಾರಂಜಿಗಳ ನೇರ ರೇಖೆಯು ಚಲಿಸುತ್ತದೆ. ಮಾರಿಗೋಲ್ಡ್, ಬೋಗನ್‌ವಿಲ್ಲಾ, ಫಿಕಸ್ ಮರಗಳು, ಸೆಲೋಸಿಯಾ ಸೇರಿದಂತೆ ವಿಲಕ್ಷಣ ಹೂವುಗಳು ಮತ್ತು ಮರಗಳ ವ್ಯಾಪಕ ಶ್ರೇಣಿಯನ್ನು ಬೃಂದಾವನ ಉದ್ಯಾನವನದಲ್ಲಿ ಕಣ್ತುಂಬಿಕೊಳ್ಳಬಹುದು.

Share This Article
Leave a comment