ಜೈಲರ್ ಚಿತ್ರ ಪ್ರದರ್ಶನದ ವೇಳೆ ಕುಸಿದು ಬಿದ್ದ ಥಿಯೇಟರ್ ಗೋಡೆ

Team Newsnap
1 Min Read

ಶಿವಮೊಗ್ಗ : ರಜನಿ ಅಭಿನಯದ ಜೈಲರ್ ಚಿತ್ರ ಪ್ರದರ್ಶನದ ವೇಳೆ ಥಿಯೇಟರ್ ಗೋಡೆ ಕುಸಿದು ಬಿದ್ದ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ನಡೆದಿದೆ.

ತೀರ್ಥಹಳ್ಳಿಯ ಸೊಪ್ಪುಗುಡ್ಡೆಯ ಮಾರ್ಕೆಟ್ ರಸ್ತೆಯಲ್ಲಿರುವ ವಿನಾಯಕ ಚಿತ್ರಮಂದಿರದ ಗೋಡೆ ಧಿಡೀರ್ ಕುಸಿದು ಬಿದ್ದಿದೆ. ಹಳೇ ಕಟ್ಟಡವಾಗಿದ್ದರಿಂದ ಶಿಥಿಲಗೊಂಡ ಗೋಡೆ ಕುಸಿದಿದೆ.

ಇದನ್ನು ಓದಿ -ಬೆಂಗಳೂರಿನ ನೆಹರು ತಾರಾಲಯದಲ್ಲಿ ಚಂದ್ರಯಾನ -3 ಲ್ಯಾಂಡಿಂಗ್ ಲೈವ್ ವೀಕ್ಷಣೆಗೆ ಅವಕಾಶ

ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ಪ್ರೇಕ್ಷಕರಿಗೆ ಯಾವುದೇ ಅಪಾಯ ಆಗಿಲ್ಲ, ಆದರೆ ಥಿಯೇಟರ್ ಎದುರು ನಿಲ್ಲಿಸಿದ 7 ಬೈಕ್ ಗಳಿಗೆ ಹಾನಿಯಾಗಿದೆ. ಸೂಪರ್ ಸ್ಟಾರ್ ರಜನಿ ಕಾಂತ್ ಅಭಿನಯದ ‘ಜೈಲರ್’ ಚಿತ್ರ ಪ್ರದರ್ಶನದ ವೇಳೆ ಈ ಘಟನೆ ಸಂಭವಿಸಿದೆ.

Share This Article
Leave a comment