ಬೆಂಗಳೂರಿನ ನೆಹರು ತಾರಾಲಯದಲ್ಲಿ ಚಂದ್ರಯಾನ -3 ಲ್ಯಾಂಡಿಂಗ್ ಲೈವ್ ವೀಕ್ಷಣೆಗೆ ಅವಕಾಶ

Team Newsnap
2 Min Read

ಚಂದ್ರನ ದಕ್ಷಿಣ ಧ್ರುವದ ಮೇಲೆ ಚಂದ್ರಯಾನ-3 ನೌಕೆಯ ವಿಕ್ರಮ್ ಲ್ಯಾಂಡರ್ ಅನ್ನು ಇಳಿಸುವ ಈ ಮಹತ್ವದ ಕ್ಷಣವನ್ನ ಕಣ್ತುಂಬಿಕೊಳ್ಳಲು ಇಡೀ ಜಗತ್ತು ಕಾತುರದಿಂದ ಕಾದಿದೆ.

2019ರ ಸೆಪ್ಟೆಂಬರ್ 6ರಂದು ಆ ಕ್ಷಣದಲ್ಲಿ ಉಂಟಾದ ಆಘಾತ, ನೋವು ಮತ್ತೆ ಎದುರಾಗದಿರಲಿ ಅನ್ನೋದು ಕೋಟ್ಯಾಂತರ ಜನರ ಪ್ರಾರ್ಥನೆ. ಅದಕ್ಕಾಗಿ ವಿಜ್ಞಾನಿಗಳು ಮಾತ್ರವಲ್ಲ, ಜನಸಾಮಾನ್ಯರೂ ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.

ಪ್ರಗ್ಯಾನ್ ರೋವರ್ ಅನ್ನು ಹೊತ್ತ ವಿಕ್ರಮ್ ಲ್ಯಾಂಡರ್ ಸುರಕ್ಷಿತವಾಗಿದ್ದು, ದಕ್ಷಿಣ ಧ್ರುವದ ಮೇಲೆ ಸಂಜೆ 6:04ರ ವೇಳೆಗೆ ಯಾವುದೇ ಅಡೆತಡೆ ಇಲ್ಲದೇ ಚಂದ್ರನ ಅಂಗಳದಲ್ಲಿ ಇಳಿಯುವ ಮೂಲಕ ಇತಿಹಾಸ ನಿರ್ಮಿಸುವ ಭರವಸೆ ಮೂಡಿಸಿದೆ.

ಜುಲೈ 14ರಂದು ಉಡಾವಣೆಗೊಂಡ ಚಂದ್ರಯಾನ-3 ನೌಕೆಯ ಇಷ್ಟು ದಿನದ ಪಯಣದಂತೆಯೇ ಕೊನೆಯ 20 ನಿಮಿಷಗಳ ಯಾನ ಅತ್ಯಂತ ನಿರ್ಣಾಯಕ.

ಬೆಂಗಳೂರಿನ ನೆಹರು ತಾರಾಲಯದಲ್ಲಿ ‘ಚಂದ್ರಯಾನ -3’ ಲ್ಯಾಂಡಿಂಗ್ ಲೈವ್ ವೀಕ್ಷಣೆಗೆ ಅವಕಾಶ ಕಲ್ಪಿಸಿದ್ದು, ಕನ್ನಡದಲೇ ವಿವರಣೆಯನ್ನು ನೀಡಲಾಗುವುದು ಎನ್ನಲಾಗಿದೆ.

ಸುಮಾರು 500 ಜನರು ನೇರ ಪ್ರಸಾರ ವೀಕ್ಷಿಸಲು ಅವಕಾಶ ನೀಡಲಾಗಿದೆ. ಬೆಂಗಳೂರಿನ ನೆಹರು ತಾರಾಲಯದಲ್ಲಿ ಇಂದು ಸಂಜೆ 5 ಗಂಟೆ 10 ನಿಮಿಷಕ್ಕೆ ಚಂದ್ರಯಾನ-3 ಲೈವ್ ಆರಂಭವಾಗಲಿದೆ. ದೊಡ್ಡ LED ಪರದಗೆಳನ್ನು ಕೂಡ ಹಾಕಲಿದ್ದು, ಇಲ್ಲಿ ನೋಡುಗರು ಅದ್ಬುತ ಕ್ಷಣವನ್ನು ಕಣ್ಣು ತುಂಬಿಕೊಳ್ಳಬಹುದಾಗಿದೆ.

ಇಸ್ರೋ ತನ್ನ ಪ್ರಧಾನ ಕಛೇರಿಯನ್ನು ಬೆಂಗಳೂರಿನಲ್ಲಿ ಹೊಂದಿದೆ. ಇದರ ಚಟುವಟಿಕೆಗಳು ವಿವಿಧ ಕೇಂದ್ರಗಳು ಮತ್ತು ಘಟಕಗಳಲ್ಲಿ ಹರಡಿವೆ.

ಕೌತುಕಭರಿತ ಲ್ಯಾಂಡಿಂಗ್ ಆಪರೇಷನ್ ಪ್ರಕ್ರಿಯೆಯನ್ನ ಇಸ್ರೋ ಇಂದು ಸಂಜೆ 5 ಗಂಟೆ 20 ನಿಮಿಷದಿಂದ ಲೈವ್ ಟೆಲಿಕಾಸ್ಟ್ ಮಾಡಲಿದೆ. ಸಾಫ್ಟ್ ಲ್ಯಾಂಡಿಂಗ್ ಪ್ರಕ್ರಿಯೆ ಮುಗಿದ ಬಳಿಕ ಇಸ್ರೋ ವಿಜ್ಞಾನಿಗಳನ್ನು ಜೋಹನ್ಸ್‌ಬರ್ಗ್‌ನಲ್ಲಿರುವ ಪ್ರಧಾನಿ ಮೋದಿ ವರ್ಚೂವಲ್ ಆಗಿ ಭೇಟಿ ಮಾಡಲಿದ್ದಾರೆ.

ಚಂದ್ರಯಾನ-3 ಹಾದಿ
* ಉಡಾವಣೆ – ಜುಲೈ 14
* ವೆಚ್ಚ – 615 ಕೋಟಿ (ಅವತಾರ್ 2-1930 ಕೋಟಿ)
* ತೂಕ – 3,900 ಕೆಜಿ (ಲ್ಯಾಂಡರ್, ರೋವರ್)
* ಹಂತ – 3 ಹಂತಗಳಲ್ಲಿ ಕಕ್ಷೆ ಸೇರ್ಪಡೆ
* ದೂರ – 3,84,400 ಕಿ.ಮೀ.
* ಪಯಣ – 40 ದಿನ
* ಲ್ಯಾಂಡರ್ – ವಿಕ್ರಮ್
* ರೋವರ್ – ಪ್ರಗ್ಯಾನ್
* ಲ್ಯಾಂಡಿಂಗ್ – ಆಗಸ್ಟ್ 23, ಸಂಜೆ 6.04 ಗಂಟೆ
* ಮೀಸಲು ದಿನ – ಆಗಸ್ಟ್ 27
* ಉದ್ದೇಶ – ಚಂದ್ರನ ಮಣ್ಣು, ಮೇಲ್ಮೈ ಅಧ್ಯಯನ
* ನಿರ್ವಹಣೆ – ಪೀಣ್ಯ, ಬೆಂಗಳೂರು ಇಸ್ರೋ ಕೇಂದ್ರ

Share This Article
Leave a comment