ಹೈನುಗಾರಿಕೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ರೈತನ ಮಗಳು ಸೋನಾಲ್ (26) ರಾಜಸ್ಥಾನದಲ್ಲಿ ನ್ಯಾಯಾಧೀಶೆ ಹುದ್ದೆಗೆ ಆಯ್ಕೆ ಯಾಗಿದ್ದಾಳೆ.
2018ರಲ್ಲಿ ಆರ್ಜೆಎಎಸ್ ಪರೀಕ್ಷೆ ಪಾಸ್ ಮಾಡಿದ್ದ ಸೋನಾಲ್ ತರಬೇತಿ ಪೂರ್ಣಗೊಳಿಸಿದ್ದಾರೆ. ಕೆಲವೇ ದಿನಗಳಲ್ಲಿ ನ್ಯಾಯಾಧೀಶೆಯಾಗಿ ನೇಮಕ ಆಗಲಿದ್ದಾರೆ.
ಸೋನಾಲ್ ಎಲ್ಎಲ್ಬಿ ಹಾಗೂ ಎಲ್ಎಲ್ಎಂ ಪರೀಕ್ಷೆಗಳಲ್ಲಿ ಪ್ರಥಮ ಸ್ಥಾನ ಪಡೆದಿದ್ದರು. ಇದಾದ ಬಳಿಕ ಒಂದು ವರ್ಷಗಳ ತರಬೇತಿ ಪೂರ್ಣಗೊಳಿಸಿದ ಸೋನಾಲ್ ರಾಜಸ್ಥಾನದ ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ಆಗಿ ನೇಮಕ ಗೊಳ್ಳಲಿದ್ದಾರೆ.
ತಂದೆ ಲಾಲ್ ಶರ್ಮಾರ ಹೈನೋದ್ಯಮಕ್ಕೂ ಸಹಾಯ ಮಾಡೋ ಸೋನಾಲ್, ಪದವೀಧರೆಯಾಗಿದ್ದರೂ ಸಹ ಬೆಳಗ್ಗೆ 4 ಗಂಟೆಗೇ ಎದ್ದು ಹಸುವಿನ ಹಾಲು ಕರೆಯೋದು, ಕೊಟ್ಟಿಗೆ ಸ್ವಚ್ಛಗೊಳಿಸೋದು, ಸಗಣಿ ಸಂಗ್ರಹಿಸೋದು ಜೊತೆಗೆ ಮನೆ ಮನೆಗೆ ತೆರಳಿ ಹಾಲನ್ನೂ ನೀಡುತ್ತಾರೆ.
ಕಳೆದ ವರ್ಷ ಡಿಸೆಂಬರ್ನಲ್ಲೇ ಫಲಿತಾಂಶ ಘೋಷಣೆಯಾಗಿತ್ತು. ಆದರೆ ಸೋನಾಲ್ ಕಟ್ ಆಫ್ ಅಂಕಕ್ಕಿಂತ 1 ಅಂಕ ಕಡಿಮೆ ಪಡೆದ ಕಾರಣ ಅವಕಾಶ ಲಭ್ಯ ವಾಗಿರಲಿಲ್ಲ.
ಈಗ ಆಯ್ಕೆಯಾದ ಕೆಲ ವಿದ್ಯಾರ್ಥಿಗಳು ಸೇವೆಗೆ ನೇಮಕವಾಗದ ಕಾರಣ ಸೋನಾಲ್ ಅದೃಷ್ಟ ಒಲಿದು ಬಂದಿದೆ.
- SBIನಲ್ಲಿ 600 ಪ್ರೊಬೇಷನರಿ ಆಫೀಸರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
- ನಾಳೆಗಾಗಿ ಬಾಳಬೇಕು ಕೇಳು ನೊಂದ ಜೀವವೇ..!
- ತುಪ್ಪ ಎಂಬ ಮಹಾ ಔಷಧಿ
- ಸಂಸತ್ ಕಟ್ಟಡದ ಬಳಿ ಬೆಂಕಿ ಹಚ್ಚಿಕೊಂಡ ಯುವಕ ಚಿಕಿತ್ಸೆ ಫಲಕಾರಿಯಾಗದೆ ಸಾವು
- ಕರ್ತವ್ಯದ ವೇಳೆ ಬ್ರೈನ್ಸ್ಟ್ರೋಕ್ಗೆ ಬಲಿಯಾದ ಅರಣ್ಯ ಇಲಾಖೆ ನೌಕರ
More Stories
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ವಿಧಿವಶ
ಮೈಸೂರಿನ ಪ್ರಮುಖ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರು: ಪಾಲಿಕೆ ತೀರ್ಮಾನಕ್ಕೆ ಆಕ್ಷೇಪಣೆಗಳು
10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ