November 26, 2024

Newsnap Kannada

The World at your finger tips!

vara1

ಮಾತುಬಾರದ ಅಕ್ಕನಿಗೆ ತನ್ನ ಜೊತೆಯಲ್ಲೇ ಬಾಳು ಕೊಟ್ಟ ತಂಗಿ !

Spread the love

ಅಕ್ಕ-ತಂಗಿಯರನ್ನು ಒಂದೇ ಮುಹೂರ್ತದಲ್ಲಿ ವರನೊಬ್ಬ ಮದುವೆಯಾದ ಅಪರೂಪದ ಸಂಗತಿ ಘಟಿಸಿದೆ.

vara2

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ವೇಗಮಡುಗು ಗ್ರಾಮದಲ್ಲಿ ಇಂತಹದೊಂದು ಅಪರೂಪದ ಪ್ರಸಂಗ ಜರುಗಿದೆ.‌

ಸುಪ್ರಿಯಾ ಹಾಗೂ ಲಲಿತ ಎಂಬ ಇಬ್ಬರು ಅಕ್ಕ ತಂಗಿಯರನ್ನು ಉಮಾಪತಿ ಎಂಬುವವರು ಒಂದೇ ಮುಹೂರ್ತದಲ್ಲಿ ಮದುವೆ ಮಾಡಿಕೊಂಡಿದ್ದಾರೆ.

ಅಕ್ಕ ಸುಪ್ರಿಯಾಗೆ ಮಾತು ಬರುವುದಿಲ್ಲ. ಅವಳಿಗೆ ಮದುವೆಯಾಗದೆ ತಂಗಿ ಲಲಿತಾಗೆ ಮದುವೆಯಾಗೋದಿಲ್ಲ ಹಠ ಹಿಡಿದಳು.

ಅಕ್ಕನಿಗೆ ಎಲ್ಲಿ ಮದುವೆ ಯಾಗುವುದಿಲ್ಲವೋ ಎಂದು ಯೋಚಿಸಿದ ತಂಗಿ ಲಲಿತಾ ನನ್ನನ್ನು ಮದುಯಾಗಬೇಕೆಂದರೆ ನನ್ನ ಅಕ್ಕನನ್ನೂ ಮದುವೆ ಮಾಡಿಕೊಳ್ಳಬೇಕು ಎಂಬ ಷರತ್ತನ್ನು ವರ ಉಮಾಪತಿಗೆ ವಿಧಿಸಿದ್ದರು.

ಈ ಷರತ್ತಿಗೆ ಒಪ್ಪಿದ ಉಮಾಪತಿ ಮೇ 7ರಂದು ಗ್ರಾಮದಲ್ಲಿ ಸಹೋದರಿ ಯರನ್ನು ವರೆಸಿದನು.
ಮದುವೆ ಫೋಟೋ ಹಾಗೂ ಮದುವೆ ಆಮಂತ್ರಣ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ.

ವಂಶ ಪಾರಂಪರ್ಯದ ಮದುವೆ :

ಸುಪ್ರಿಯಾ ಹಾಗೂ ಲಲಿತಾ ಕುಟುಂಬದಲ್ಲಿ ಈ ರೀತಿ ಮದುವೆ ನಡೆದಿದ್ದು ಇದೇ ಮೊದಲಲ್ಲ. ಇವರ ತಂದೆ ಕೂಡಾ ಇದೆ ರೀತಿಯಲ್ಲಿ ಅಕ್ಕ ತಂಗಿಯರನ್ನು ಮದುವೆ ಮಾಡಿಕೊಂಡಿದ್ದರು. ಅಲ್ಲೂ ಒಬ್ಬರಿಗೆ‌ ಮಾತು ಬರುತ್ತಿರಲಿಲ್ಲ ಅನ್ನೋದು ವಿಶೇಷ.

ರಾಣೆಮ್ಮ ಹಾಗೂ ಸುಬ್ಬಮ್ಮ ಎಂಬುವರನ್ನು ಇವರ ಸೋದರ ಸಂಬಂಧಿ ನಾಗರಾಜಪ್ಪ ಎಂಬುವರು ಮದುವೆಯಾಗಿದ್ದರೆಂಬುದೇ ವಿಶೇಷ.‌

Copyright © All rights reserved Newsnap | Newsever by AF themes.
error: Content is protected !!