ಬಹು ನಿರೀಕ್ಷಿತ ಚಿತ್ರ “ಆರ್‌ಆರ್‌ಆರ್’ ಬಿಡುಗಡೆ ಮತ್ತೆ ಮುಂದೂಡಿಕೆ

Team Newsnap
1 Min Read

ಜನಪ್ರಿಯ ಚಿತ್ರನಿರ್ದೇಶಕ ಎಸ್. ಎಸ್. ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ “ಆರ್‌ಆರ್‌ಆರ್’ ಚಿತ್ರವು ಚಿತ್ರರಸಿಕರು ಅಂದುಕೊಂಡಂತೆ ಮುಂದಿನ ತಿಂಗಳು ಬಿಡುಗಡೆಯಾಗುತ್ತಿಲ್ಲ. ಕಾರಣ ಹೆಮ್ಮಾರಿ ಕೊರೊನಾ ಸಾಂಕ್ರಾಮಿಕ ರೋಗ.
ದೇಶ-ವಿದೇಶಗಳಲ್ಲಿ ಅಸಂಖ್ಯಾತ ಸಿನಿಪ್ರಿಯರಲ್ಲಿ ಭಾರಿ ಕುತೂಹಲ ಮೂಡಿಸಿರುವ “ಆರ್‌ಆರ್‌ಆರ್” ಚಿತ್ರ ಬರುವ ಅಕ್ಟೋಬರ್ ೨೧ರಂದು ಬಿಡುಗಡೆಯಾಗಲಿದೆ ಎಂಬ ಸುದ್ದಿ ವ್ಯಾಪಕವಾಗಿ ಹಬಿ್ಬತ್ತು. ಈ ನಿರೀಕ್ಷೆ ಈಗ ಹುಸಿಯಾಗಿದೆ.


ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಿರುವುದಾಗಿ ಚಿತ್ರತಂಡ ಇಂದು ಟ್ವಿಟರ್‌ನಲ್ಲಿ ತಿಳಿಸಿದೆ. ಈ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ನಿರ್ಮಾಣೋತ್ತರ ಕಾರ್ಯಗಳು ಮುಗಿದಿರುವ ಮಾಹಿತಿಯೂ ಇದೆ.


ಮುಂದಿನ ಅಕ್ಟೋಬರ್ ತಿಂಗಳಲ್ಲಿ “ಆರ್‌ಆರ್‌ಆರ್” ಬಿಡುಗಡೆಗೆ ಎಲ್ಲ ರೀತಿಯ ಸಿದ್ಧತೆಗಳು ನಡೆದಿತ್ತು. ಅದರೆ ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದ ಚಿತ್ರ ಬಿಡುಗಡೆ ಮಾಡಲಿಕ್ಕೆ ತೊಂದರೆಗಳು ಎದುರಾಗಲಿವೆ. ವಿಶ್ವದ ಬಹುತೇಕ ಚಿತ್ರಮಂದಿರಗಳು ಮುಚ್ಚಲ್ಪಟ್ಟಿವೆ.


ಹಾಗಾಗಿ ಸದ್ಯಕ್ಕೆ ಚಿತ್ರದ ಬಿಡುಗಡೆ ದಿನಾಂಕ ಪ್ರಕಟಿಸುತ್ತಿಲ್ಲ. ಅನಿವಾರ್ಯವಾಗಿ ಮುಂದಕ್ಕೆ ಹಾಕಲಾಗಿದೆ. ಚಿತ್ರರಂಗ ಸಹಜ ಸ್ಥಿತಿಗೆ ಮರಳಿದ ನಂತರ ಚಿತ್ರದ ಬಿಡುಗಡೆ ದಿನವನ್ನು ಆದಷ್ಟು ಬೇಗ ಪ್ರಕಟಿಸುತ್ತೇವೆ ಎಂದು ಚಿತ್ರ ತಂಡ ಹೇಳಿದೆ.


೨೦ನೇ ಶತಮಾನದ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮರಾಜು ಮತ್ತು ಕೋಮರಂ ಭೀಮ್ ಜೀವನದ ಕಥೆ ಆಧರಿಸಿ ಆರ್‌ಆರ್‌ಆರ್ ಚಿತ್ರ ಸಿದ್ಧವಾಗಿದೆ. ಡಿವಿವಿ ಎಂಟರ್‌ಟೈನ್‌ಮೆAಟ್ ಸಂಸ್ಥೆಯು ಅಂದಾಜು ೪೦೦ ಕೋಟಿ ರೂ. ವೆಚ್ಚದಲ್ಲಿ ಈ ಚಿತ್ರ ನಿರ್ಮಿಸಿದೆ. ರಾಮ್‌ಚರಣ್ ಅಲ್ಲೂರಿ ಸೀತಾರಾಮರಾಜು ಪಾತ್ರದಲ್ಲಿ, ಎನ್‌ಟಿಆರ್ ಜ್ಯೂನಿಯರ್ ಕೋಮರಂ ಭೀಮ್ ಪಾತ್ರದಲ್ಲಿ ನಟಿಸಿದ್ದಾರೆ.

TAGGED:
Share This Article
Leave a comment