September 21, 2021

Newsnap Kannada

The World at your finger tips!

ನಟ ಸರ್ಜಾ ವಿರುದ್ದದ ಮೀಟೂ ಪ್ರಕರಣಕ್ಕೆ ಮರು ಜೀವ – ಮೂವರಿಗೆ ನೋಟೀಸ್ ಸಾಧ್ಯತೆ

Spread the love

ನಟ ಅರ್ಜುನ್ ಸರ್ಜಾ ವಿರುದ್ಧ ಶೃತಿ ಹರಿಹರನ್ ಮಾಡಿರುವ ಮೀ ಟೂ ಪ್ರಕರಣಕ್ಕೆ ಮರು ಜೀವ ಬರುತ್ತಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯದಲ್ಲೇ ಮೂವರಿಗೆ ನೋಟೀಸ್ ನೀಡಲು ಕಬ್ಬನ್ ಪಾರ್ಕ್ ಪೊಲೀಸರು ಸಿದ್ದತೆ ನಡೆಸಿದ್ದಾರೆ.

2018 ರಲ್ಲಿ ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶೃತಿ ಹರಿಹರನ್ ಮೀ ಮೀಟೂ ಆರೋಪ ಮಾಡಿದ್ದರು. ಈ ಪ್ರಕರಣ ಸ್ಯಾಂಡಲ್ ವುಡ್ ನಲ್ಲಿ ಸಂಚಲನ ಮೂಡಿಸಿತ್ತು.

ಹಳೇ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಾಕಿ ಉಳಿದಿರುವ‌ ರಿಪೋರ್ಟ್ ನೀಡುವಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಸೂಚನೆ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಮರುಜೀವ ಸಿಕ್ಕಿದೆ. ಕಳೆದ ಮೂರು ವರ್ಷಗಳಿಂದ ಪ್ರಕರಣದ ತನಿಖೆ ನಡೆಯುತ್ತಿದೆ. ಅಂತಿಮಗೊಂಡಿಲ್ಲ.

ಸಿನಿಮಾ ನಿರ್ದೇಶಕ ಅರುಣ್ ವೈದ್ಯನಾಥನ್, ಕ್ಯಾಮರಾಮ್ಯಾನ್ ಅರವಿಂದ ಕೃಷ್ಣ, ನಿರ್ಮಾಪಕ ಜಯರಾಮ್ ಅವರಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡುವಂತೆ ನೋಟೀಸ್ ನೀಡುವ ಸಾಧ್ಯತೆ ಇದೆ.

ಸದ್ಯ ಅರುಣ್ ವೈದ್ಯನಾಥನ್ ವಿದೇಶಕ್ಕೆ ಹೋಗಿದ್ದಾರೆ. ಅವರು ವಿಚಾರಣೆಗೆ ಬಂದ ಮೇಲೆ ತಾವು ಬಂದು ಹೇಳಿಕೆ ನೀಡುವುದಾಗಿ ಉಳಿದ ಇಬ್ಬರು ಈ ಹಿಂದೆ ತಿಳಿಸಿದ್ದರು.

ಈಗ ಪ್ರಕರಣಕ್ಕೆ ಮರುಜೀವ ಸಿಕ್ಕಿದ್ದು, ಶೀಘ್ರದಲ್ಲೇ ನೋಟೀಸ್ ನೀಡಲಿದ್ದಾರೆ.

error: Content is protected !!