ಕಲಬುರಗಿ ಪಾಲಿಕೆಯ ಮೇಯರ್ ಚುನಾವಣೆ ಜೆಡಿಎಸ್ ಪಾತ್ರದ ಬಗ್ಗೆ ಗುಟ್ಟು ಬಿಡದ ಎಚ್ ಡಿ ಕೆ

Team Newsnap
1 Min Read

ಕಲಬುರಗಿ ಪಾಲಿಕೆಯ ಮೇಯರ್ ಚುನಾವಣೆಯಲ್ಲಿ ಜೆಡಿಎಸ್ ಯಾವ ಪಕ್ಷಕ್ಕೆ ಬೆಂಬಲ‌ ನೀಡುತ್ತದೆ ಎನ್ನುವುದರ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಯಾವುದೇ ಗುಟ್ಟು ಬಿಡದೇ ಗೌಪ್ಯತೆ ಕಾಪಾಡಿದರು.‌

ಮಂಡ್ಯ ತಾಲೂಕಿನ ಕೀಲಾರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಕುಮಾರಸ್ವಾಮಿ ನಮ್ಮ ಬೆಂಬಲ ಕಾಂಗ್ರೆಸ್ ಅಥವಾ ಬಿಜೆಪಿಗೋ ಎಂದು ಹೇಳುವ ಸಮಯ ಇದಲ್ಲ ಎಂದರು.

ನಮ್ಮ‌ ಬೆಂಬಲಕ್ಕಾಗಿ ಕಾದು ಕುಳಿತಿರುವ ಕಾಂಗ್ರೆಸ್ ಹಾಗೂ ಬಿಜೆಪಿಗೆ ಉತ್ತರ ಹೇಳಲು ಇನ್ನೂ ಟೈಂ ಇದೆ. ಅದಕ್ಕೇನೂ ಅರ್ಜೆಂಟ್ ಇಲ್ಲ ಎಂದು ಹೇಳುವ ಮೂಲಕ ಗೌಪ್ಯತೆ ಮುಂದುವರೆಸಿದರು.

ನಾನೇಕೆ ಮೂಗು ತೂರಿಸಲಿ :

ಅಕ್ರಮ ಗಣಿಗಾರಿಕೆ ನಿಲ್ಲಿಸಲು ಸಮರ್ಥರು ಇರಬೇಕಾದರೆ ನಾನ್ಯಾಕೆ ಮೂಗು ತೂರಿಸಲಿ ಎಂದು ಮಾಜಿ ಸಿಎಂ ಎಚ್​​.ಡಿ ಕುಮಾರಸ್ವಾಮಿ ಸಂಸದೆ ಸುಮಲತಾ ಹೋರಾಟದ ಬಗ್ಗೆ ವ್ಯಂಗ್ಯವಾಡಿದ್ದಾರೆ.

ಗಣಿಗಾರಿಕೆ ತಡೆಯಲು ದೊಡ್ಡ ಸಾಮರ್ಥ್ಯ ಹೊಂದಿರುವ ಜನ ಇಲ್ಲಿ ಇದ್ದಾರೆ. ನಾನು ಈ ವಿಚಾರದಲ್ಲಿ ಮೂಗು ತೂರಿಸುವುದಿಲ್ಲ. ಸಮರ್ಥರು ಮಂಡ್ಯ ಗಣಿಗಾರಿಕೆ ನಿಲ್ಲಿಸಲಿದ್ದಾರೆ. ಅವರೇ ಈ ಸಮಸ್ಯೆಯನ್ನು ಸರಿಪಡಿಸಿಕೊಳ್ಳುತ್ತಾರೆ ಎಂದರು.

ಈ ಹಿಂದೆ ಕಲಾಪದಲ್ಲಿ ಮಂಡ್ಯ ಗಣಿಗಾರಿಕೆ ಬಗ್ಗೆ ಚರ್ಚಿಸಲಿದ್ದೇವೆ ಎಂದು ಮಂಡ್ಯ ಜಿಲ್ಲಾ ಜೆಡಿಎಸ್​ ಶಾಸಕರು ಹೇಳಿದ್ದರು. ಈಗ ಏನು ಹೇಳದೆ ಈ ವಿಚಾರದಲ್ಲಿ ಮಾಜಿ ಸಿಎಂ ಎಚ್​.ಡಿ ಕುಮಾರಸ್ವಾಮಿ ಮೌನವಹಿಸಿದ್ದಾರೆ.

ರಾಸುಗಳ ನಿಗೂಢ ಸರಣಿ ಸಾವು ರೈತನ ಜೊತೆ ಸಮಾಲೋಚನೆ :

ಮಂಡ್ಯದ ಕೀಲಾರ ಗ್ರಾಮಕ್ಕೆ ಭೇಟಿ ನೀಡಿದ್ದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ರಾಸುಗಳ ನಿಗೂಢ ಸರಣಿ ಸಾವು ಹೊಂದಿರುವ ರೈತ ಸಿದ್ದರಾಮೇಗೌಡರ ನಿವಾಸಕ್ಕೆ ಭೇಟಿ ನೀಡಿ ಸಮಾಲೋಚನೆ ಮಾಡಿದರು.

ಈವರೆಗೆ ಸಾವನಪ್ಪಿರುವ ರಾಸುಗಳು ಬಗ್ಗೆ ಮಾಹಿತಿ ಸಂಗ್ರಹಿಸಿ
ಸಿದ್ದರಾಮೇಗೌಡರಿಗೆ ಸೇರಿದ 29 ಜಾನುವಾರುಗಳು ನಿಗೂಢ ಸಾವು.
ರಾಸುಗಳ ನಿಗೂಡ ಸಾವಿನಿಂದ ಕಂಗಾಲಗಿದ್ದ ಕುಟುಂಬ.
ಕುಟುಂಬಸ್ಥರೊಂದಿಗೆ ಮಾತುಕತೆ ನಡೆಸಿ ಸಾಂತ್ವನ ಹೇಳಿದರು.

ರಾಸುಗಳ ನಿಗೂಢ ಸಾವಿನ ಬಗ್ಗೆ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ‌.
ಶಾಸಕ ಶಾಸಕ ಎಂ.ಶ್ರೀನಿವಾಸ್, ವಿಧಾನಸಭಾ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಜೊತೆಯಲ್ಲಿ ಇದ್ದರು.

Share This Article
Leave a comment