December 24, 2024

Newsnap Kannada

The World at your finger tips!

rahul flag

ಕಾಂಗ್ರೆಸ್ ಧ್ವಜವನ್ನುರಾಹುಲ್ ಗಾಂಧಿ ಮುಖಕ್ಕೆ ಎಸೆದ ವ್ಯಕ್ತಿ

Spread the love

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಮುಖಕ್ಕೆ ವ್ಯಕ್ತಿಯೊಬ್ಬ ಕಾಂಗ್ರೆಸ್ ಪಕ್ಷದ ಧ್ವಜವನ್ನು ಎಸೆದ ಘಟನೆ ಪಂಜಾಬ್‍ನ ಲುಧಿಯಾನದಲ್ಲಿಂದು ಜರುಗಿದೆ.

ಭದ್ರತಾ ಲೋಪದಲ್ಲಿ ಅವರ ಮುಖಕ್ಕೆ ಧ್ವಜ ಹಾಕಲಾಗಿದೆ. ರಾಹುಲ್ ಗಾಂಧಿ ಕುಳಿತಿದ್ದ ಕಾರನ್ನು ಪಂಜಾಬ್ ಕಾಂಗ್ರೆಸ್ ಉಸ್ತುವಾರಿ ಸುನಿಲ್ ಜಾಖರ್ ಓಡಿಸುತ್ತಿದ್ದರು. ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಮತ್ತು ಪಕ್ಷದ ರಾಜ್ಯ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಕಾರಿನ ಹಿಂದಿನ ಸೀಟುಗಳಲ್ಲಿ ಕುಳಿತಿದ್ದರು.

ರಾಹುಲ್ ಗಾಂಧಿ ಕಾರಿನ ಮುಂದಿನ ಸೀಟಿನಲ್ಲಿ ಕುಳಿತಿದ್ದು ತಮ್ಮ ಪಕ್ಷದ ಬೆಂಬಲಿಗರನ್ನು ಸ್ವಾಗತಿಸಲು ಅವರ ಕಿಟಕಿ ತೆರೆದಿತ್ತು. ಈ ಸಂದರ್ಭದಲ್ಲಿ ವ್ಯಕ್ತಿಯೊಬ್ಬನು ರಾಹುಲ್ ಅವರ ಕಿಟಕಿಯ ಮೇಲೆ ಬಹಳ ದೂರದಿಂದ ಧ್ವಜವನ್ನು ಎಸೆದಿದ್ದಾನೆ.

ಪಂಜಾಬ್‍ನಲ್ಲಿ ಇದು ಎರಡನೇ ಭದ್ರತಾ ಲೋಪವಾಗಿದೆ. ಕೆಲವು ದಿನಗಳ ಹಿಂದೆ, ಪ್ರಧಾನಿ ನರೇಂದ್ರ ಮೋದಿ ಅವರ ಕಾರು 20 ನಿಮಿಷಗಳ ಕಾಲ ಫ್ಲೈಓವರ್ ನಲ್ಲಿ ಸಿಲುಕಿಕೊಂಡಿತ್ತು.

Copyright © All rights reserved Newsnap | Newsever by AF themes.
error: Content is protected !!