ಕೊರೊನಾ ಅಟ್ಟಹಾಸದಿಂದ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಬೆಡ್ ಇಲ್ಲ ಅನ್ನೋ ಸಂಖ್ಯೆಯೇ ಹೆಚ್ಚು. ಆದರೆ ಮಂಡ್ಯ ಮಿಮ್ಸ್ ( ಜಿಲ್ಲಾ ಆಸ್ಪತ್ರೆ)ನಲ್ಲಿ ಮಾತ್ರ ರೋಗಿಗಳಿಗೆ ಯಾಕೆ ನಾವು ಶ್ವಾನಗಳಿಗೂ ಬೆಡ್ ಕೊಡುತ್ತೀವಿ ಬನ್ನಿ ಎಂದು ಕೈ ಬೀಸಿ ಕರೆಯುತ್ತಿದ್ದಾರೆ.
ಹೌದು. ಡಾಕ್ಟರೇ ನಾವು (ನಾಯಿಗಳು) ಬೆಡ್ ಮೇಲೆ ಮಲಗಿದ್ದೇವೆ, ನೀವು ಎಲ್ಲಿ ಹೋಗಿದ್ದೀರಾ ಬಂದು ಟ್ರೀಟ್‍ಮೆಂಟ್ ಕೊಡಿ ಅನ್ನೋ ದೃಶ್ಯ ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ಕಂಡು ಬಂದಿದೆ.
ಮಂಡ್ಯ ಜಿಲ್ಲೆಯ ಮಿಮ್ಸ್ ಆಸ್ಪತ್ರೆಯ ಬೆಡ್‍ಗಳ ಮೇಲೆ ಸಾಲು ಸಾಲಾಗಿ ನಾಯಿಗಳು ಬೆಚ್ಚಗೆ ಮಲಗಿವೆ. ಈ ಬೀದಿ ನಾಯಿಗಳನ್ನು ಓಡಿಸೋಕೂ ಮಿಮ್ಸ್ ನಲ್ಲಿ ಸಿಬ್ಬಂದಿ ಇಲ್ವಾ ಅನ್ನೋ ಪ್ರಶ್ನೆ
ಎದುರಾಗಿದೆ. ಮಿಮ್ಸ್ ಆಸ್ಪತ್ರೆಯ ವಾರ್ಡಿನಲ್ಲಿ ಸರಿಯಾದ ನಿರ್ವಹಣೆ ಇಲ್ಲದ ಕಾರಣ ನಾಯಿಗಳು ತಮ್ಮ ವಾಸವನ್ನು ಆಸ್ಪತ್ರೆಯ ಬೆಡ್ ಗೆ ಷಿಪ್ಟ್ ಮಾಡಿಕೊಂಡಿವೆ .
ಕೋವಿಡ್ ಬಂದಾಗಿನಿಂದ ಆಸ್ಪತ್ರೆಗಳಲ್ಲಿ ಬೆಡ್‍ಗಳೇ ಇಲ್ಲ ಅಂತ ಮಿಮ್ಸ್ ಸಿಬ್ಬಂದಿ ಹೇಳ್ತಿದ್ದಾರೆ. ಆದರೆ ಇಲ್ಲಿ ನೋಡಿದರೆ ಬೆಡ್‍ಗಳು ಖಾಲಿ ಬಿದ್ದಿವೆ. ಖಾಲಿ ಇರೋ ಈ ಬೆಡ್‍ಗಳ ಮೇಲೆ ನಾಯಿಗಳು ಮಲಗಿಕೊಂಡಿವೆ. ಮಂಡ್ಯ ಮಿಮ್ಸ್ ಆಸ್ಪತ್ರೆಯ ಅಧಿಕಾರಿಗಳ, ಸಿಬ್ಬಂದಿಯ ಈ ನಿರ್ಲಕ್ಷ್ಯತನಕ್ಕೆ ಸಾರ್ವಜನಿಕರು ಕಿಡಿಕಾರುತ್ತಿದ್ದಾರೆ.
ಒಟ್ಟಾರೆ ಕೊರೊನಾ ಅಟ್ಟಹಾಸದಿಂದ ಒಂದು ಕಡೆ ಆಸ್ಪತ್ರೆಗಳಲ್ಲಿ ಬೆಡ್ ಇಲ್ಲದೇ ರೋಗಿಗಳು ಪರದಾಡುತ್ತಿದ್ರೆ, ಇತ್ತ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯತನದಿಂದ ಆಸ್ಪತ್ರೆ ವಾರ್ಡ್ ನಾಯಿಗಳ ಮನೆಯಾಗಿದೆ. ಈಗಲಾದರು ಅಧಿಕಾರಿಗಳು ಎಚ್ಚೆತ್ತುಕೊಂಡರೆ ಸೂಕ್ತ ನಿರ್ವಹಣೆ ಮಾಡಬೇಕಿದೆ.
More Stories
ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಗೊ.ರು.ಚ ಆಯ್ಕೆ
ಸಚಿವ ಸ್ಥಾನ ನನ್ನ ಹಕ್ಕು, ಬೇಡಿಕೆಯಲ್ಲ: ನಿಖರ ಹೇಳಿಕೆ ನೀಡಿದ ‘ಕೈ’ ಶಾಸಕ ನರೇಂದ್ರ ಸ್ವಾಮಿ
ಮಂಡ್ಯದ ಕಾರ್ಮೆಲ್ ಕಾಲೇಜಿನ ಪ್ರಥಮ, ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ