ಭಾರತದ ಮೊದಲ ಸಮುದ್ರ ವಿಮಾನಕ್ಕೆ ಅಕ್ಟೋಬರ್ 31ರಂದು ಚಾಲನೆ

Team Newsnap
1 Min Read

ಅಕ್ಟೋಬರ್ 31ರಂದು ಗುಜರಾತ್‌ನ‌ ಸಬರಮತಿ ನದಿಯಿಂದ ಸ್ಟ್ಯಾಚ್ಯೂ ಆಫ್ ಯುನಿಟಿಗೆ ಭಾರತದ ಮೊದಲ ಸಮುದ್ರ ವಿಮಾನ ಹೊರಡಲಿದೆ ಎಂದು ಕೇಂದ್ರ ಸಾಗಣೆ ಹಾಗೂ ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವ ಮನ್ಸುಖ್ ಮಾಂಡವಿಯಾ ತಿಳಿಸಿದರು.

ಸ್ಪೈಸ್ ಜೆಟ್ ಎಂಬ ಸಮುದ್ರ ವಿಮಾನ ಮಾಲ್ಡೀವ್ಸ್‌ನಿಂದ ಭಾರತಕ್ಕೆ ಅಕ್ಟೋಬರ್ 26 ಕ್ಕೆ ಬರುವ ನಿರೀಕ್ಷೆಯಿದೆ ಎಂದು ಸಚಿವರು ಸುದ್ದಿ ಸಂಸ್ಥೆ ಗೆ ತಿಳಿಸಿದರು.

‘ಸಮುದ್ರ ವಿಮಾನದ ಉಡಾವಣೆ ದೇಶದಲ್ಲಿ‌ಯೇ ಪ್ರಥಮವಾಗಿದೆ. ಸ್ಟ್ಯಾಚ್ಯೂ ಆಫ್ ಯುನಿಟಿಗೆ ಅಕ್ಟೋಬರ್ 31 ರಂದು ವಿಮಾನ ಹೊರಡಲಿದೆ.‌ ಎರಡೂ ನದಿಯ ದಂಡೆಗಳಲ್ಲಿ ಸಮುದ್ರ ವಿಮಾನದ ನಿಲುಗಡೆಗೆ, ಮತ್ತಿತರ ವಿಚಾರಗಳಿಗೆ ಸಂಬಂಧಿಸಿದಂತೆ ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ. ಈ ವಿಮಾನ ಹಾರಾಟದ ಯಶಸ್ಸಿನ್ನು ಪರಿಗಣಿಸಿ ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರಯೋಜನಗಳನ್ನು ಒದಗಿಸಲಾಗುವುದು’ ಎಂದು ಮಾಂವಿಯಾ ಮಾಹಿತಿಯನ್ನು ಹಂಚಿಕೊಂಡರು.

‘ದೇಶಕ್ಕೆ ಹೊಸತಾಗಿರುವ ಸಮುದ್ರ ವಿಮಾನದ ಪ್ರಯಾಣ ಯಶಸ್ವಿಯಾದರೆ ಪ್ರವಾಸೋದ್ಯಮಕ್ಕೆ ಉತ್ತೇಜನ ದೊರೆಯಲಿದೆ. ಮುಂದಿನ ದಿನಗಳಲ್ಲಿ ಅಂಡಮಾನ್ ಮತ್ತು ನಿಕೋಬಾರ್, ಗೌಹಾಟಿ, ಉತ್ತರಾಖಂಡ್‌ನ ಟಪ್ಪರ್ ಆಣೆಕಟ್ಟು ಹೀಗೆ ಮುಂತಾದೆಡೆಗಳಲ್ಲಿ ಸಮುದ್ರ ವಿಮಾನ ಸಾರಿಗೆಯನ್ನು ಪ್ರಾರಂಭಿಸಲಾಗುವುದು’ ಎಂದು ನಂತರದ ಯೋಜನೆಗಳನ್ನು ಬಿಚ್ಚಿಡುತ್ತಾ ಹೋದರು.

ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಹಾಗೂ ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರದ ನಡುವೆ ಸಮುದ್ರ ವಿಮಾನ ಸೇವೆಗಾಗಿ ಪ್ರಾದೇಶಿಕ ಸಂಪರ್ಕ‌ಯೋಜನೆಯ ಆಧಾರದ ಮೇಲೆ ನಾಲ್ಕು ಏರೋಡ್ರಮ್‌ಗಳನ್ನು ನಿರ್ಮಾಣ ಮಾಡಲು ತ್ರಿಪಕ್ಷೀಯ ಒಪ್ಪಂದ ನಡೆದಿದೆ. ಜುಲೈನಲ್ಲೇ ಗುಜರಾತ್ ಸರ್ಕಾರ ಯೋಜನೆಗೆ ಅಂಗೀಕಾರ ನೀಡಿ ಒಪ್ಪಂದಕ್ಕೆ ಸಹಮತಿಸಿತ್ತು. ಸಮುದ್ರ ವಿಮಾನದ ನಿಲುಗಡೆ ಅಂದರೆ ನೀರಿನ ಏರೋಡ್ರಮ್‌ಗಳು ಸಮುದ್ರ ವಿಮಾನಗಳ ಹಾಗೂ ಉಭಯಚರ ವಿಮಾನಗಳ ನಿಲುಗಡೆಗೆ ಮತ್ತು ಹಾರಾಟಕ್ಕೆ ಅನಕೂಲಕರವಾದ ವಾತಾವರಣ ನಿರ್ಮಿಸುವಂಥವುಗಳಾಗಿವೆ.

Share This Article
Leave a comment