ಅನೇಕ ಯುವಕರು ತಮಗೆ ಇನ್ನು ಮದುವೆಯಾಗಿಲ್ಲ. ಜೋಡಿ ಸಿಕ್ಕಿಲ್ಲ ಮದುವೆಗೆ ವಯಸ್ಸು ಮೀರಿ ಹೋಗುತ್ತಿದೆ ಎಂಬ ಚಿಂತೆಯಲ್ಲಿ ಇರುವವರ ಮಧ್ಯೆಯೂ ಇಲ್ಲೊಬ್ಬ ಭೂಪ ಬರೊಬ್ಬರಿ 14 ಮದುವೆಗಳನ್ನು ಆಗಿದ್ದಾನೆ.
ಒಡಿಶಾದ ಕೇಂದ್ರಪಾರ ಜಿಲ್ಲೆಯ ಪಟ್ಕುರಾ ಗ್ರಾಮದ ನಿವಾಸಿ ಬಿಂದು ಪ್ರಕಾಶ್ ಅಲಿಯಾಸ್ ರಮೇಶ್ (54) ಸರಿ ಸುಮಾರು ಏಳು ರಾಜ್ಯಗಳಲ್ಲಿ ಒಟ್ಟು ಹದಿನಾಲ್ಕು ಮದುವೆಯಾಗಿದ್ದಾನೆ.
ತಾನೊಬ್ಬ ಹೆಲ್ತ್ ಕೇರ್ ಅಧಿಕಾರಿ ಎಂದು ಹೇಳಿಕೊಂಡು ಮೋಸ ಮಾಡುತ್ತಿದ್ದ ಎನ್ನಲಾಗಿದೆ. 1982ರಲ್ಲಿ ಮೊದಲ ಬಾರಿಗೆ ಮದುವೆಯಾಗಿದ್ದ ರಮೇಶ್, ಬಳಿಕ ಮ್ಯಾಟ್ರಿಮೋನಿ ಮೂಲಕ ಹಲವರಿಗೆ ವಂಚಿಸಿದ್ದಾನೆ.
ಒಡಿಶಾ ಮೂಲದ ಮೂವರು, ದೆಹಲಿ ಮತ್ತು ಮಧ್ಯಪ್ರದೇಶದ ಇಬ್ಬರು ಮಹಿಳೆಯರು ಹಾಗೂ ಪಂಜಾಬ್, ಜಾರ್ಖಂಡ್, ಆಂಧ್ರಪ್ರದೇಶ, ಛತ್ತೀಸ್ಗಡ ಮೂಲದ ಯುವತಿಯರಿಗೆ ಮೋಸ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯನ್ನು ಭುವನೇಶ್ವರ ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
ಕ್ಷಣಾರ್ಧದಲ್ಲಿ 33 ಲಕ್ಷ ಕಳ್ಳತನ: ಓರ್ವ ಆರೋಪಿ ಬಂಧನ
ಚಾಮರಾಜನಗರದಲ್ಲಿ ಖಾಸಗಿ ಬಸ್ ಪಲ್ಟಿ: ಓರ್ವ ಸಾವು, 30ಕ್ಕೂ ಹೆಚ್ಚು ಜನರಿಗೆ ಗಾಯ