ಯುದ್ಧಪೀಡಿತ ಉಕ್ರೇನ್‍ನಲ್ಲಿ(Ukraine) ಸಿಲುಕಿದ್ದವರನ್ನು ರಕ್ಷಿಸಿದ ಭಾರತೀಯ ಪೈಲಟ್!

Team Newsnap
1 Min Read

ರಷ್ಯಾ-ಉಕ್ರೇನ್ (Russia – Ukraine) ಯುದ್ಧದ ಮಧ್ಯೆ, ಉಕ್ರೇನ್‍ನ ಪೋಲಿಷ್ ಮತ್ತು ಹಂಗೇರಿಯ ಗಡಿಯಲ್ಲಿ ಸಿಲುಕಿಕೊಂಡಿದ್ದ 800ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳನ್ನು ರಕ್ಷಿಸುವ ಮೂಲಕ 24 ವರ್ಷದ ಭಾರತೀಯ ಮಹಿಳಾ ಪೈಲಟ್ ಈಗ ಗಮನ ಸೆಳೆದಿದ್ದಾರೆ.

ಕೋಲ್ಕತ್ತಾದ ಮಹಾಶ್ವೇತಾ ಚಕ್ರವರ್ತಿ ಎನ್ನುವ ಪೈಲಟ್ ಯುದ್ಧ ಪೀಡಿತ ಉಕ್ರೇನ್‍ನಲ್ಲಿ ಸಿಲುಕಿರುವ 800ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳನ್ನು ಸ್ಥಳಾಂತರಿಸುವಲ್ಲಿ ಕಾರ್ಯ ನಿರ್ವಹಿಸಿದ್ದಾರೆ.

ಆಪರೇಷನ್ ಗಂಗಾದ ಸದಸ್ಯರಾಗಿರುವ ಚಕ್ರವರ್ತಿ, ರಷ್ಯಾ-ಉಕ್ರೇನ್ (Russia – Ukraine ಬಿಕ್ಕಟ್ಟಿನ ನಡುವೆ ಸಿಲುಕಿರುವ ವಿದ್ಯಾರ್ಥಿಗಳನ್ನು ರಕ್ಷಿಸಿದ್ದಾರೆ. ಫೆಬ್ರವರಿ 27 ಮತ್ತು ಮಾರ್ಚ್ 7ರ ನಡುವೆ ಪೋಲೆಂಡ್‍ನಿಂದ ನಾಲ್ಕು ಮತ್ತು ಹಂಗೇರಿಯಿಂದ ಎರಡು ಸ್ಥಳಾಂತರಿಸುವ ವಿಮಾನಗಳಲ್ಲಿ ವಿದ್ಯಾರ್ಥಿಗಳನ್ನು ಸ್ಥಾಳಾಂತರಿಸುವಲ್ಲಿ ಕಾರ್ಯ ನಿರ್ವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಮಹಾಶ್ವೇತಾ ಚಕ್ರವರ್ತಿ ಮಾತನಾಡಿ, ಇದು ಜೀವಮಾನದ ಅನುಭವವಾಗಿತ್ತು, ಅವರಲ್ಲಿ ಅನೇಕರು ಅನಾರೋಗ್ಯಕ್ಕೆ ಒಳಗಾಗಿದ್ದರು. ನಾನು ಅವರ ಹೋರಾಟದ ಮನೋಭಾವನೆಯನ್ನು ಮೆಚ್ಚುತ್ತೇನೆ. ಅವರ ಮನೆಗೆ ಹಿಂದಿರುಗಿದ ಪ್ರಯಾಣದಲ್ಲಿ ನನ್ನ ಪಾತ್ರವನ್ನು ವಹಿಸಿದ್ದಕ್ಕಾಗಿ ನಾನು ತುಂಬಾ ಹೆಮ್ಮೆಪಡುತ್ತೇನೆ. ಎಂದು ಹೇಳಿದ್ದಾರೆ.

ಕೋಲ್ಕತ್ತಾದ 24 ವರ್ಷದ ಪೈಲಟ್ ಮಹಾಶ್ವೇತಾ ಚಕ್ರವರ್ತಿ ಅವರು ಉಕ್ರೇನ್, ಪೋಲೆಂಡ್ ಮತ್ತು ಹಂಗೇರಿಯ ಗಡಿಯಿಂದ 800ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳನ್ನು ರಕ್ಷಿಸಿದ್ದಾರೆ. ಆಕೆಗೆ ಅಪಾರ ಗೌರವ ಎಂದು ಬಿಜೆಪಿ ಮಹಿಳಾ ಮೋಚಾ ಟ್ವೀಟ್ ಮಾಡಿದ್ದಾರೆ.

Share This Article
Leave a comment