ಹಾನಗಲ್​​, ಸಿಂದಗಿ ಕ್ಷೇತ್ರಗಳಿಗೆ ಅ. 30 ರಂದು ಉಪಚುನಾವಣೆ : ನ.2 ಮತ ಎಣಿಕೆ

Team Newsnap
1 Min Read

ರಾಜ್ಯದ ಹಾನಗಲ್​​, ಸಿಂದಗಿ ಕ್ಷೇತ್ರಗಳ ಉಪಚುನಾವಣೆ ಅಕ್ಟೋಬರ್​ 30 ರಂದು ನಡೆಯಲಿದೆ.

ಕೇಂದ್ರ ಚುನಾವಣಾ ಆಯೋಗ ಈ ಕುರಿತಂತೆ ಅದೇಶ ಹೊರಡಿಸಿದೆ.
ಅಕ್ಟೋಬರ್​ 1ರಂದು ಅಧಿಸೂಚನೆ ಪ್ರಕಟವಾಗಲಿದೆ. ನವೆಂಬರ್​​ 2ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. ಅಕ್ಟೋಬರ್ 8 ನಾಮಪತ್ರ ಸಲ್ಲಿಕೆ ಮಾಡಲು ಕೊನೆಯ ದಿನವಾಗಿದೆ. ಅಕ್ಟೋಬರ್ 16 ನಾಮಪತ್ರ ವಾಪಸ್​ ಪಡೆಯಲು ಕೊನೆಯ ದಿನಾಂಕವಾಗಿದೆ. ಚುನಾವಣಾ ನೀತಿ ಸಂಹಿತೆ ಇಂದಿನಿಂದಲೇ ಜಾರಿ ಆಗಲಿದೆ.

ಸಿಎಂ ಉದಾಸಿಯವರ ನಿಧನದಿಂದ ಹಾನಗಲ್ ವಿಧಾನಸಭಾ ಕ್ಷೇತ್ರದ ಸ್ಥಾನ ತೆರವಾಗಿತ್ತು. ಇನ್ನು, ಸಿಂದಗಿ ಜೆಡಿಎಸ್ ಶಾಸಕ ಮನಗೂಳಿಯವರ ನಿಧನದಿಂದ ಸ್ಥಾನ ತೆರವಾಗಿತ್ತು.

ರಾಜ್ಯದ ಎರಡು ಕ್ಷೇತ್ರ ಸೇರಿದಂತೆ ದೇಶದ ಬೇರೆ ಬೇರೆ ರಾಜ್ಯಗಳು ಸೇರಿದಂತೆ ಒಟ್ಟು 30 ಕ್ಷೇತ್ರಗಳ ಉಪಚುನಾವಣೆ ಘೋಷಣೆಯಾಗಿದೆ.

Share This Article
Leave a comment