ಮಗಳಿಗಾಗಿ ಹೇಬಿಯಸ್​ ಕಾರ್ಪಸ್​ ಅರ್ಜಿ ಸಲ್ಲಿಸಿದ್ದ ಅಪ್ಪನಿಗೆ ಹೈಕೋರ್ಟ್​ 50 ಸಾವಿರ ರು ದಂಡ

Team Newsnap
1 Min Read
shock for Congress: High Court order to cancel ACB - Lokyukta gets power again

ಪತ್ನಿಯ ವಿರುದ್ಧ ಅನಗತ್ಯವಾಗಿ ಹೇಬಿಯಸ್​ ಕಾರ್ಪಸ್​ ಅರ್ಜಿಯನ್ನು ದಾಖಲಿಸಿದ್ದ ಅರ್ಜಿದಾರ ಪತಿಗೆ ಹೈಕೋರ್ಟ್ 50 ಸಾವಿರ ರು ​ ದಂಡ ವಿಧಿಸಿ ಆದೇಶ ಹೊರಡಿಸಿದೆ.

ಬೆಂಗಳೂರಿನ ಕಾಡುಬೀಸನಹಳ್ಳಿಯ ನಿವಾಸಿ ಗೌರವ್ ರಾಜ್ ಹಾಗೂ ಆತನ ಪತ್ನಿ ನಡುವೆ ಕೆಲ ತಿಂಗಳ ಹಿಂದೆ ಗಲಾಟೆಯಾಗಿ ಇಬ್ಬರು ಬೇರೆಯಾಗಿದ್ದರು.

ಈ ವೇಳೆ ಈ ದಂಪತಿಯ ಓರ್ವ ಮಗಳು ಪತ್ನಿಯೊಂದಿಗೆ ವಾಸವಿದ್ದಳು. ಇತ್ತಿಚಿಗೆ ಈ ದಂಪತಿಯ ಮಗಳಿಗೆ ಅನಾರೋಗ್ಯ ಉಂಟಾಗಿದೆ. ಗೌರವ್ ರಾಜ್ ಪತ್ನಿ ಮಗಳ ಚಿಕಿತ್ಸೆಯನ್ನು ತಾವೇ ಕೊಡಿಸುತ್ತಿದ್ದರು. ಈ ಸಂದರ್ಭದಲ್ಲಿ ತನ್ನ ಪತ್ನಿ ಮಗಳನ್ನು ನೋಡಲು ಬಿಡುತ್ತಿಲ್ಲ ಎಂದು ಗೌರವ್​ ರಾಜ್​ ಆರೋಪಿಸಿದ್ದರು. ಮಗಳನ್ನು ನೋಡಲು ಅವಕಾಶ ಸಿಗದ ಹಿನ್ನಲೆಯಲ್ಲಿ ಹೈಕೋರ್ಟ್​ ಮೊರೆ ಹೋದ ಅವರು, ಪತ್ನಿಯ ಮೇಲೆ ಸುಳ್ಳು ಆರೋಪ ಮಾಡಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.

ಈ ವೇಳೆ ನ್ಯಾಯಾಲಯಕ್ಕೆ ಹಾಜರಾದ ಪತ್ನಿ ಮಗಳಿಗೆ ಅನಾರೋಗ್ಯವಿದೆ ಆಕೆಗೆ ದೆಹಲಿ ಸಮೀಪದ ಕತೌಳಿಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಚಿಕಿತ್ಸೆಯ ಬಳಿಕ ಆಕೆ ಸದ್ಯ ಚೇತರಿಸಿಕೊಳ್ಳುತ್ತಿದ್ದಾಳೆಂದು ದಾಖಲೆ ಸಲ್ಲಿಸಿದ್ದಾರೆ. ಜೊತೆಗೆ ಈ ವಿಚಾರ ನನ್ನ ಪತಿಗೆ ಈಗಾಗಲೇ ತಿಳಿದಿದೆ ಎಂದು ಪತ್ನಿ ಮಾಹಿತಿ ನೀಡಿದ್ದಾರೆ.

ಪ್ರಕರಣವನ್ನು ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಬಿ. ವೀರಪ್ಪ ಹಾಗೂ ನ್ಯಾ. ಎಂ.ಜಿ ಉಮಾ ಅವರಿದ್ದ ವಿಭಾಗೀಯ ಪೀಠ, ಗೌರವ್ ರಾಜ್ ಜೈನ್ ನಿಷ್ಪ್ರಯೋಜಕ ಹಾಗೂ ದುರುದ್ದೇಶಪೂರ್ವಕ ಅರ್ಜಿ ಸಲ್ಲಿಸಿದ್ದಾರೆ ಎಂದು ತೀರ್ಪು ನೀಡಿದೆ.

ಆ ಮೂಲಕ ನ್ಯಾಯಾಂಗ ಪ್ರಕ್ರಿಯೆಯನ್ನು ದುರ್ಬಳಕೆ ಮಾಡಲಾಗಿದೆ. ಅನಾರೋಗ್ಯದಿಂದ ಬಳಲುತ್ತಿರುವ ಮಗು ತಾಯಿಯ ಆರೈಕೆಯಲ್ಲಿ ಚೇತರಿಸಿಕೊಳ್ಳುತ್ತಿದೆ. ಹೀಗಿದ್ದರೂ ಪತಿ ಕೇಸ್​ ದಾಖಲಿಸಿ ಪೊಲೀಸ್​ ಇಲಾಖೆಯ ಮತ್ತು ಕೋರ್ಟ್​ನ ಸಮಯವನ್ನು ವ್ಯರ್ಥ ಮಾಡಿದ್ದಾರೆ. ಹೀಗಾಗಿ ಅರ್ಜಿದಾರ ಗೌರವ್​ ರಾಜ್​ ಪೊಲೀಸ್​ ಕಲ್ಯಾಣ ನಿಧಿಗೆ 50 ಸಾವಿರ ರೂಪಾಯಿಗಳನ್ನು ದಂಡವಾಗಿ ಕಟ್ಟಬೇಕು. ಒಂದು ತಿಂಗಳಲ್ಲಿ ದಂಡ ಕಟ್ಟಲು ವಿಫಲವಾದರೆ ಅರ್ಜಿದಾರರ ಆಸ್ತಿಯನ್ನು ಜಿಲ್ಲಾಧಿಕಾರಿ ಜಪ್ತಿ ಮಾಡಬಹುದು ಎಂದು ತೀರ್ಪು ನೀಡಿ ಆದೇಶ ಹೊರಡಿಸಿದೆ.

Share This Article
Leave a comment