ಸಿಎಂ ಬೊಮ್ಮಾಯಿ ಪ್ರಯಾಣಿಸುತ್ತಿದ್ದ ಹೆಲಿಕ್ಯಾಪ್ಟರ್ ಸೊಂಡೂರು ಬಳಿ ತುರ್ತು ಭೂ ಸ್ಷರ್ಶ

Team Newsnap
0 Min Read
BJP Parva begins in Old Mysore Province - CM Bommai ಹಳೇ ಮೈಸೂರು ಪ್ರಾಂತದಲ್ಲಿ ಬಿಜೆಪಿ ಪರ್ವ ಆರಂಭ - ಸಿಎಂ ಬೊಮ್ಮಾಯಿ

ಸಿಎಂ ಬೊಮ್ಮಾಯಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಬಳ್ಳಾರಿಯ ಸಂಡೂರು ತಾಲೂಕಿನ ತೋರಣಗಲ್ ಬಳಿಯ ಜಿಂದಾಲ್​ ಏರ್​​ಪೋರ್ಟ್​ನಲ್ಲಿ ತುರ್ತುಭೂಸ್ಪರ್ಶವಾಗಿದೆ.

ಸಿಎಂ ಬೊಮ್ಮಾಯಿ ರಾಯಚೂರಿನಿಂದ ಹೊಸಪೇಟೆಗೆ ಆಗಮಿಸುತ್ತಿದ್ದರು. ಹೆಲಿಕಾಪ್ಟರ್ ಬಳ್ಳಾರಿಯ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಲ್ಯಾಂಡಿಂಗ್ ಆಗಬೇಕಿತ್ತು. ​ಆದರೆ ಹವಾಮಾನ ವೈಪರೀತ್ಯ ಹಿನ್ನೆಲೆ ಹೆಲಿಕಾಪ್ಟರ್ ತುರ್ತುಭೂಸ್ಪರ್ಶ ಮಾಡಲಾಗಿದೆ. ಇದನ್ನು ಓದಿ –ಮಳವಳ್ಳಿಯಲ್ಲಿ ನೀರಿನ ಸಂಪ್ ಗೆ ಬಿದ್ದ ಬಾಲಕಿ : ಅನುಮಾನಾಸ್ಪದ ಸಾವು

ಹೀಗಾಗಿ ಎಸ್ಕಾರ್ಟ್ ಸಿಎಂ ಬೊಮ್ಮಾಯಿ, ಬಿಎಸ್ ಯಡಿಯೂರಪ್ಪ ಅವರನ್ನು ಕರೆತರಲು ತೆರಳಿದ್ದಾರೆ.

ಸಿಎಂ ಬೊಮ್ಮಾಯಿ, ಬಿಎಸ್ ಯಡಿಯೂರಪ್ಪ ರಾತ್ರಿ ಕಮಲಾಪುರದ ಈವಲ್​ ಬ್ಯಾಕ್​​ ಹೋಟೆಲ್​ನಲ್ಲಿ ​ವಾಸ್ತವ್ಯ ಹೂಡಲಿದ್ದಾರೆ.

Share This Article
Leave a comment