ಮಳವಳ್ಳಿಯಲ್ಲಿ ನೀರಿನ ಸಂಪ್ ಗೆ ಬಿದ್ದ ಬಾಲಕಿ : ಅನುಮಾನಾಸ್ಪದ ಸಾವು

Team Newsnap
1 Min Read
Accused of raping and killing Malavalli girl Divya arrested ಮಳವಳ್ಳಿ ಬಾಲಕಿ ದಿವ್ಯ ಮೇಲೆ ಅತ್ಯಾಚಾರ ಮಾಡಿ ಹತ್ಯೆಗೈದ ಆರೋಪಿ ಬಂಧನ

ನಿರ್ಮಾಣ ಹಂತದ ಮನೆಯ ಕಟ್ಟಡದ ನೀರಿನ ಸಂಪ್ ನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಬಾಲಕಿಯೊಬ್ಬಳ ಶವ ಪತ್ತೆಯಾದ. ಘಟನೆ ಮಳವಳ್ಳಿ ಪಟ್ಟಣದ ಮೈಸೂರು ರಸ್ತೆ ಮಯೂರ ಬೇಕರಿ ಹಿಂಭಾಗದಲ್ಲಿ ಜರುಗಿದೆ .

ಮಳವಳ್ಳಿ ಎನ್ಇಎಸ್ ಬಡಾವಣೆಯ ಅಶ್ವಿನಿ ಮತ್ತು ಸುರೇಶ್ ಕುಮಾರ್ ಎಂಬುವವರ ದಂಪತಿಯ ಪುತ್ರಿ ದಿವ್ಯಾ(10) ಶವವಾಗಿ ಪತ್ತೆಯಾಗಿದ್ದಾಳೆ.‌ಇದನ್ನು ಓದಿ –ಸಂಸದೆ ಸುಮಲತಾ ಬೆಂಬಲಿಗರೇ ಹೆದ್ದಾರಿ ದಲ್ಲಾಳಿಗಳು: ರವೀಂದ್ರ ಶ್ರೀಕಂಠಯ್ಯ

ಇಂದು ಬೆಳಿಗ್ಗೆ 11 ಗಂಟೆಗೆ ಟ್ಯೂಶನ್ ಗೆ ಎಂದು ಮನೆಯಿಂದ ಹೋದ ಬಾಲಕಿ ಸಂಜೆಯಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಟ್ಯೂಶನ್ ಸೆಂಟರ್ ಸೇರಿದಂತೆ ಅಕ್ಕಪಕ್ಕದಲ್ಲಿ ವಿಚಾರಿಸಿದಾಗ ಬಾಲಕಿ ಪತ್ತೆಯಾಗಿಲ್ಲ.

ಮೈಸೂರು ರಸ್ತೆಯ ಮಯೂರ ಬೇಕರಿ ಹಿಂಭಾಗ ನಾಗರಾಜು ಎಂಬುವವರ ನಿರ್ಮಾಣ ಹಂತದ ಮನೆಯ ಕಟ್ಟಡದ ಸಮೀಪದಲ್ಲಿದ್ದ ಯಾರೂ ನೀಡಿದ ಮಾಹಿತಿ ಮೇರೆಗೆ ನೀರಿನ ಸಂಪ್ ನಲ್ಲಿ ಪರಿಶೀಲನೆ ನಡೆಸಿದಾಗ ಬಾಲಕಿಯ ಶವ ಪತ್ತೆಯಾಗಿದೆ.


ಬಾಲಕಿ ಸಾವಿನ ಬಗ್ಗೆ ಸಾಕಷ್ಟು ಅನುಮಾನ ವ್ಯಕ್ತವಾಗಿದೆ.

ಸ್ಥಳಕ್ಕೆ ಡಿವೈಎಸ್ ಪಿ‌ ಎನ್.ನವೀನ್ ಕುಮಾರ್, ಸಿಪಿಐ ಎ.ಕೆ.ರಾಜೇಶ್ ಭೇಟಿ ನೀಡಿ ಶ್ವಾನದಾಳದೊಂದಿಗೆ ಪರಿಶೀಲನೆ ನಡೆಸಿದರು. ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a comment