2030 ರ ವೇಳೆಗೆ ಹಾರುವ ಕಾರ್ ಮಾರುಕಟ್ಟೆಗೆ

Team Newsnap
2 Min Read

ಸ್ಲೋವಾಕಿಯೋ ದೇಶವು ಮತ್ತೊಂದು ಅಚ್ಚರಿಯ ಆವಿಷ್ಕಾರ ಮಾಡುವ ಮೂಲಕ ತಂತ್ರಜ್ಷಾನ ಕ್ಷೇತ್ರದಲ್ಲಿ ಹೊಸತನ ಸೃಷ್ಠಿಸಿದೆ.

20 ವರ್ಷಗಳ ಕಠಿಣ ಪರಿಶ್ರಮಕ್ಕೆ ಕಡೆಗೂ ಯಶಸ್ಸು 2 ನಿಮಿಷದಲ್ಲಿ ವಿಮಾನವಾಗಿ ಬದಲಾಗುವ ಕಾರು ನೆಲದ ಮೇಲೆ ಶರವೇಗದಲ್ಲಿ ಚಾಲಿಸಿ ನಂತರ ನಿಧಾನವಾಗಿ ರೆಕ್ಕೆಗಳನ್ನು ಬಿಟ್ಟ ಹಾರಾಡುತ್ತದೆ.‌ ಮೇಲ್ನೋಟಕ್ಕೆ ಇಂದು ಹೆಲಿಕಾಫ್ಟರ್ ತರ ಕಾಣುತ್ತಿದೆ. ಆದರೆ ಇದು ಹೆಲಿಕಾಫ್ಟರ್, ಡ್ರೋನ್ ಕೂಡ ಅಲ್ಲ. ಇದು ಸ್ಲೋವಾಕಿಯಾದ ಪ್ರಸಿದ್ಧ ಕಂಪನಿ ಕ್ಲೈನ್ ​​ವಿಷನ್ ಸಿದ್ದಪಡಿಸಿರುವ ಸ್ಪೆಷಲ್ ಕಾರ್

ಆರಂಭದಲ್ಲಿ ಕಾರ್ ತರ ಕಾಣಿಸಿಕೊಂಡ್ರು ಕೇವಲ ಎರಡೇ ನಿಮಿಷಲ್ಲಿ ತನ್ನ ಸ್ವರೂಪವನ್ನು ವಿಮಾನವಾಗಿ ಪರಿವರ್ತಿಸಿಕೊಳ್ಳುತ್ತೆ.

ವಿಮಾನದ ತಾಳಿದ ಮೇಲೆ ಮತ್ತೆ ಮೂರೇ ನಿಮಿಷದಲ್ಲಿ ಮತ್ತೆ ಕಾರಿನ ರೂಪ ಪಡೆದುಕೊಳ್ಳುತ್ತದೆ.‌ ಈ ಕಾರು ರನ್ ವೇ ಮೂಲಕ ಕ್ರಮಿಸಿ ನಂತರ 2.15 ನಿಮಿಷದಲ್ಲಿ ಆಕಾಶಕ್ಕೆ ಜಿಗಿಯುತ್ತೆ. ಅಲ್ಲೆ ಕೆಲ ಸಯಮ ಹಾರಾಡಿ ಮತ್ತೆ ಭೂಮಿಗೆ ಇಳಿದು ಮತ್ತೆ ಕಾರಿನ ರೂಪ ಪಡೆದುಕೊಳ್ಳುತ್ತೆ.

ಈ ಫ್ಲೈಯಿಂಗ್ ಕಾರ್ ನ ಮೊದಲ ಐತಿಹಾಸಿಕ ಹಾರಾಟವನ್ನು ಕ್ಲೈನ್ ​​ವಿಷನ್ನು ಸ್ಥಾಪಕ ಮತ್ತು ಸಿಇಒ ಸ್ಟೀಫನ್ ಕ್ಲೈನ್ ​​ನಿರ್ವಹಿಸಿದ್ದಾರೆ. ಸ್ಲೋವಾಕಿಯಾದ ನಿಟ್ರಾ ನಗರದ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸ್ಲೋವಾಕಿಯಾದ ಬ್ಲಾಟಿಸ್ಲಾವ ನಗರದ ವಿಮಾನದ ನಿಲ್ದಾಣದ ನಡುವೆ ಇದನ್ನು ಪರೀಕ್ಷಾರ್ಥ ಹಾರಾಟ ನಡೆಸಲಾಗಿದೆ. ಈ ಎರಡು ನಗರಗಳ ನಡುವೆ ಇದ್ದ ಒಂದುವರೆಗೆ ಗಂಟೆಯ ಅವಧಿಯ ಪ್ರಯಾಣವನ್ನು ಕೇಲವಲ 35 ನಿಮಿಷದಲ್ಲಿ ತಲುಪಿದೆ.

ವಿಮಾನ ನಿಲ್ದಾಣದಲ್ಲಿ ಇಳಿದ ನಂತರ, ಸ್ಟೀಫನ್ ಕ್ಲೈನ್ ಅವರು ತಮ್ಮ ಏರ್ಕಾರನ್ನು ಸಾಮಾನ್ಯ ಕಾರಿನಂತೆ ಸುಮಾರು ಮೂರು ನಿಮಿಷಗಳ ಕಾಲ ನಗರದೊಳಗೆ ಓಡಿಸಿದ್ದಾರೆ.

ಫ್ಲೈಯಿಂಗ್ ಕಾರಿನ ವಿಶೇಷ :

  • ಈ ಏರ್ಕಾರ್ ಹಲವು ವಿಶೇಷತೆಗಳನ್ನು ಹೊಂದಿದೆ.
  • ಫ್ಲೈಯಿಂಗ್ ಕಾರ್ ಭೂಮಿ ಮತ್ತು ಗಾಳಿ ಎರಡರಲ್ಲೂ ಚಲಿಸುವ ಸಾಮರ್ಥ್ಯ ಹೊಂದಿದೆ.
  • ಈ ಏರ್ಕಾರ್, ಬಿಎಂಡಬ್ಲ್ಯು ಎಂಜಿನ್ ಹೊಂದಿದೆ.‌ ಸಾಮಾನ್ಯ ಪೆಟ್ರೋಲ್ ಬಳಸಬಹುದಾಗಿದೆ.
  • ಈ ಏರ್ ಕಾರ್ ನಲ್ಲಿ 16 ಅಶ್ವ ಶಕ್ತಿಯ ಬಿಎಂಡಬ್ಲ್ಯೂ ಕಾರಿನ ಇಂಜಿನ್ ಬಳಕೆ ಮಾಡಲಾಗಿದೆ.
  • 8200 ಅಡಿ ಎತ್ತರದಲ್ಲಿ 1000 ಕಿಲೋ ಮೀಟರ್ ದೂರ ಹಾರಾಡುವ ಸಾಮರ್ಥ್ಯ ಹೊಂದಿದೆ.
  • ಏರ್ ಕಾರ್ ಗರಿಷ್ಠ 170 ರಿಂದ 190 ಕಿಲೋ ಮೀಟರ್ ವೇಗದಲ್ಲಿ ಹಾರಾಟ ಮಾಡಬಲ್ಲದು.
  • ಏರ್ ಕಾರ್ ಇಬ್ಬರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.
  • ವಾಣಿಜ್ಯಕವಾಗಿ ಏರ್ ಕಾರ್ ಉತ್ಪಾದನೆಗೆ ಅನುಮೋದನೆ ದೊರಕುವ ಸಾಧ್ಯತೆ ಇದೆ. ಇವು ಶೀಘ್ರವಾಗಿ ಮಾರುಕಟ್ಟೆಗೆ ಕೂಡ ಬರಲಿದೆ.
Share This Article
Leave a comment