ಮರಿ ಜೊತೆ ಇದ್ದ ಆನೆ ಮೇಲೆ ಜೆಸಿಬಿ ಹರಿಸಲು ಮುಂದಾದ ಚಾಲಕ

Team Newsnap
1 Min Read

ಅರಣ್ಯ ಪ್ರದೇಶದಲ್ಲಿ ಮರಿ ಜೊತೆ ಇದ್ದ ಆನೆ ಮೇಲೆ ಜೆಸಿಬಿ ಚಾಲಕ ಜೆಸಿಬಿಯಲ್ಲಿ ಹೆದರಿಸಿ ಹಿಂದೆ ಓಡಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತಣಿಗೇಬೈಲು ಅರಣ್ಯ ಪ್ರದೇಶದಲ್ಲಿ ನಡೆದಿದೆ.

ಅರಣ್ಯಪ್ರದೇಶದಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿದ್ದ ಮೂಕಪ್ರಾಣಿಗಳ ಮೇಲೆ ಜೆಸಿಬಿಯಲ್ಲಿ ದೌರ್ಜನ್ಯ ಎಸಗಿದ ಜೆಸಿಬಿ ಸಿಬ್ಬಂದಿಯೇ ಅದನ್ನು ವೀಡಿಯೋ ಮಾಡಿ ವಿಕೃತಿ ಮೆರೆದಿದ್ದಾರೆ. ಇದೀಗ ವೀಡಿಯೋ ವೈರಲ್ ಆಗಿದೆ

ಅಭಯಾರಣ್ಯದಲ್ಲಿ ಯಂತ್ರಗಳ ಮೂಲಕ ಕೆಲಸ ಮಾಡುವುದಕ್ಕೆ ಆರಂಭದಿಂದಲೂ ಇಲಾಖೆ ಮೇಲೆ ಅಸಮಾಧಾನವಿದೆ. ಈ ಮಧ್ಯೆ ಅರಣ್ಯದಲ್ಲಿನ ರಸ್ತೆಯನ್ನು ಅಭಿವೃದ್ದಿಪಡಿಸಲು ಖಾಸಗಿ ವ್ಯಕ್ತಿಗಳಿಗೆ ಟೆಂಡರ್ ಮೂಲಕ ಕೆಲಸವನ್ನು ನೀಡಲಾಗಿದೆ.

ಗುತ್ತಿಗೆದಾರರು ಅಭಯಾರಣ್ಯದೊಳಗೆ ಜೆಸಿಬಿಯನ್ನು ಬಳಸಿ ರಸ್ತೆ ಅಭಿವೃದ್ಧಿಪಡಿಸುತ್ತಿರುವುದು ಕೂಡ ಪರಿಸರವಾದಿಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ತಣಿಗೇಬೈಲು ಪ್ರದೇಶದಲ್ಲಿ ರಸ್ತೆಯನ್ನು ಅಭಿವೃದ್ಧಿ ಕಾಮಗಾರಿ ನಡೆಯುವ ವೇಳೆ ಕಾಡಾನೆಗಳ ಹಿಂಡು ಎದುರಾಗಿದೆ. ಈ ವೇಳೆ ವನ್ಯಜೀವಿಗಳ ಸುಗಮ ಸಂಚಾರಕ್ಕೆ ಅವಕಾಶ ನೀಡದೆ. ಮೂಕಪ್ರಾಣಿಗಳಿಗೆ ಜೆಸಿಬಿಯಿಂದ ಹೆದರಿಸಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

Share This Article
Leave a comment